ನವದೆಹಲಿ : ನುಸ್ರತ್ ಮಿರ್ಜಾ ಎನ್ನುವ ಪಾಕಿಸ್ತಾನಿ ಪತ್ರಕರ್ತನ ಹೇಳಿಕೆಗಳು ಭಾರತದ ರಾಜಕೀಯದಲ್ಲಿ ಕೋಲಾಹಲವನ್ನ ಸೃಷ್ಟಿಸಿವೆ. ಈ ವಿಚಾರದಲ್ಲಿ ವಿವಾದ ಹೆಚ್ಚಾದ ಬೆನ್ನಲ್ಲೇ ಸ್ವತಃ ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ ಸ್ಪಷ್ಟನೆ ನೀಡಿದ್ದಾರೆ. ನನ್ನ ವಿರುದ್ಧ ಅಪಪ್ರಚಾರ ಮಾಡಲಾಗ್ತಿದೆ. ನಾನು ಅವರಿಗೆ ಕರೆ ಮಾಡಿಲ್ಲ, ಭೇಟಿನೂ ಮಾಡಿಲ್ಲ ಎಂದು ಹೇಳಿದ್ದಾರೆ. ಇನ್ನು ಮಾಧ್ಯಮಗಳ ಒಂದು ವಿಭಾಗದಲ್ಲಿ ಸುಳ್ಳಿನ ಕಂತೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿಯ ಅಧಿಕೃತ ವಕ್ತಾರರೂ ಸೇರಿದ್ದಾರೆ ಎಂದು ಆರೋಪಿಸಿದ್ದಾರೆ.
ಉಪರಾಷ್ಟ್ರಪತಿಯವರು ವಿದೇಶಿ ಅತಿಥಿಗಳನ್ನ ಆಹ್ವಾನಿಸುವ ಪ್ರಕ್ರಿಯೆಯು ಸರ್ಕಾರದ ಸಲಹೆಯ ಮೇರೆಗೆ ನಡೆಯುತ್ತದೆ ಮತ್ತು ಮುಖ್ಯವಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವನ್ನು ಒಳಗೊಂಡಿರುತ್ತದೆ ಎಂದು ಅವರು ತಮ್ಮ ಸ್ಪಷ್ಟೀಕರಣದಲ್ಲಿ ತಿಳಿಸಿದ್ದಾರೆ. ನಾನು ಈ ವ್ಯಕ್ತಿಯನ್ನು ಎಂದಿಗೂ ಆಹ್ವಾನಿಸಿಲ್ಲ ಅಥವಾ ಭೇಟಿಯಾಗಿಲ್ಲ ಎಂದು ಅನ್ಸಾರಿ ಹೇಳಿದರು.
ನಾನು 11 ಡಿಸೆಂಬರ್ 2010 ರಂದು ಭಯೋತ್ಪಾದನೆ ಕುರಿತ ಸಮಾವೇಶವನ್ನ ಉದ್ಘಾಟಿಸಿದ್ದೆ ಎಂದು ಹಮೀದ್ ಅನ್ಸಾರಿ ಹೇಳಿದರು. ಸಾಮಾನ್ಯ ಅಭ್ಯಾಸದಂತೆ, ಅತಿಥಿ ಪಟ್ಟಿಯನ್ನ ಸಂಘಟಕರು ಸಿದ್ಧಪಡಿಸಿದ್ದಾರೆ. ನಾನು ಅವನನ್ನ ಕರೆದಿಲ್ಲ ಅಥವಾ ಭೇಟಿಯಾಗಲಿಲ್ಲ ಎಂದರು.