ಮಂಗಳೂರು : ‘ರಸ್ತೆ, ಒಳಚರಂಡಿಯಂತಹ ಸಮಸ್ಯೆ ಬಿಟ್ಟು ಲವ್ ಜಿಹಾದ್ ಬಗ್ಗೆ ಯೋಜಿಸಿ, ಲವ್ ಜಿಹಾದ್ ತಡೆಯೋದಕ್ಕೆ ಮುಖ್ಯವಾಗಿ ಭಾರತಿಯ ಜನತಾ ಪಕ್ಷ ಬೇಕು ‘ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆಗೆ ಕಾಂಗ್ರೆಸ್ ಕಿಡಿಕಾರಿದೆ.
ಈ ಕುರಿತು ಟ್ವೀಟರ್ ನಲ್ಲಿ ಕಿಡಿಕಾರಿರುವ ಕಾಂಗ್ರೆಸ್, ಲವ್ ಜಿಹಾದ್ ವಿಚಾರದ ಬಗ್ಗೆ ಮಾತಾಡುವುದನ್ನು ಬಿಡಿ, ಮೊದಲು ಡಾಲರ್ ಬಗ್ಗೆ ಮಾತಾಡಿ ನಳಿನ್ ಕುಮಾರ್ ಅವರೇ. ಅಮೆರಿಕದ ಡಾಲರ್ ಎದಿರುವ ನಮ್ಮ ರೂಪಾಯಿ ಮೌಲ್ಯವು ಇದೇ ಮೊದಲ ಬಾರಿಗೆ ₹ 83ಕ್ಕೆ ಕುಸಿದಿದೆ. ಹೀಗಿರುವಾಗ “ಡಾಲರ್ ಮತ್ತು ರೂಪಾಯಿ” ಬಗ್ಗೆ ಮಾತನಾಡಲು ಹಿಂಜರಿಕೆ ಏಕೆ ತಮಗೆ? ತಮ್ಮ ಸರ್ಕಾರದ ವೈಫಲ್ಯಗಳ ಬಗೆಗಿನ ಪ್ರಶ್ನೆಗಳನ್ನು ನಿಮ್ಮಿಂದ ಎದುರಿಸಲು ಆಗುತ್ತಿಲ್ಲವೇ? ಈ ಕಾರಣಕ್ಕಾಗಿಯೇ ಲವ್ ಜಿಹಾದ್ ಮೊರೆ ಹೋಗ್ತಿದೀರಾ?
ಅಭಿವೃದ್ಧಿ, ನಿರುದ್ಯೋಗ, ಆರ್ಥಿಕ ಸಂಕಷ್ಟ, ಬೆಲೆ ಏರಿಕೆ, ರಸ್ತೆ ಗುಂಡಿಯ ಸಾವುಗಳು, ರೈತರ ಆತ್ಮಹತ್ಯೆ, ಭ್ರಷ್ಟಾಚಾರ, ನೇಮಕಾತಿ ಹಗರಣಗಳು,ಇವೆಲ್ಲಾ ಬಿಜೆಪಿಗೆ ಸಣ್ಣ ವಿಷಯಗಳು! ನಿರುದ್ಯೋಗ ದಾಖಲೆ ಮಟ್ಟಕ್ಕೆ ಏರಿದರೂ ಉದ್ಯೋಗ ಕೇಳಬೇಡಿ ‘ಲವ್ ಜಿಹಾದ್’ ಎಂಬ ಇಲ್ಲದ ವಿಷಯವನ್ನು ದೊಡ್ಡದಾಗಿಸಿ! ಇದು ಬಿಜೆಪಿಯ ಲಜ್ಜೆಗೇಡಿತನದ ಪರಮಾವಧಿ ಎಂದು ಕಿಡಿಕಾರಿದ್ದಾರೆ.
BIGG NEWS : ಜನವರಿ 16 ರ ನಂತರ `KRPP’ ಪಕ್ಷದ ಅಭ್ಯರ್ಥಿಗಳ ಘೋಷಣೆ : ಜನಾರ್ದನ ರೆಡ್ಡಿ