ಮೈಸೂರು : ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂಸವಾರಿಗೆ ವರ್ಣರಂಜಿತ ತೆರೆಬಿದ್ದಿದೆ. ಎರಡು ವರ್ಷಗಳ ನಂತರ ಚಿನ್ನದ ಅಂಬಾರಿ ಹಾಗೂ ಜಂಬೂ ಸವಾರಿ ಮೆರವಣಿಗೆಯನ್ನು ಬುಧವಾರ ಲಕ್ಷಾಂತರ ಜನರು ಕಣ್ತುಂಬಿಕೊಂಡಿದ್ದಾರೆ.
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅರಮನೆಯ ಬಲರಾಮ ದ್ವಾರದ ಬಳಿ ಮಧ್ಯಾಹ್ನ 2.36 ರಿಂದ 2.50 ರೊಳಗೆ ಸಲ್ಲುವ ಶುಭ ಮೀನ ಲಗ್ನದಲ್ಲಿ ನಂದಿ ಧ್ವಜಕ್ಕೆ ಪೂಜೆ ಸಲ್ಲಿಸಿದರು. ಬಳಿಕ ದಸರಾ ಮಹೋತ್ಸವದ ಕೇಂದ್ರ ಬಿಂದು ಜಂಬೂ ಸವಾರಿಯಲ್ಲಿ 750 ಕೆಜಿ ತೂಕದ ಚಿನ್ನದ ಅಂಬಾರಿಯಲ್ಲಿ ಶ್ರೀ ಚಾಮುಂಡೇಶ್ವರಿಯ ವಿಗ್ರಹವನ್ನು ಹೊತ್ತು ಅಭಿಮನ್ಯು ರಾಜಗಾಂಭೀರ್ಯದಲ್ಲಿ ಅರಮನೆಯಿಂದ ಹೊರಟು ಬನ್ನಿಮಂಟಪ ತಲುಪುತ್ತಿದ್ದಂತೆಯೇ ರಾಷ್ಟ್ರಗೀತೆ ಮೊಗಳಿಸುವ ಮೂಲಕ ಮೆರವಣಿಗೆ ಮುಕ್ತಾಯಗೊಂಡಿತು.
BIG NEWS : ಡಿವೋರ್ಸ್ ವಾಪಸ್: ದಾಂಪತ್ಯ ಜೀವನ ಮುಂದುವರೆಸಲು ನಟ ಧನುಷ್ & ಐಶ್ವರ್ಯಾ ರಜನಿಕಾಂತ್ ನಿರ್ಧಾರ!
ಬನ್ನಿಮಂಟಪದಲ್ಲಿ ನಡೆದ ಪಂಜಿನ ಕವಾಯತು ಪ್ರದರ್ಶನ ಮೂಲಕ ದಸರಾ ಸಂಪನ್ನಗೊಂಡಿತು. ಪೊಲೀಸರ ಅಂದಾಜಿನ ಪ್ರಕಾರ 5 ಲಕ್ಷಕ್ಕೂ ಹೆಚ್ಚು ಜನರು ದಸರಾ ವೀಕ್ಷಿಸಿದ್ಆರೆ. 48 ಸ್ತಬ್ದ ಚಿತ್ರ, 77 ಕಲಾತಂಡಗಳು ಹಾಗೂ ನಾದಸ್ವಾರ, ಪೊಲೀಸ್ ಬ್ಯಾಂಡ್, ಫಿರಂಗಿ ಗಾಡಿಗಳು ಮೆರವಣಿಗೆಯಲ್ಲಿ ಸಾಗಿದವು.