ಬೆಂಗಳೂರು : ಚೆನ್ನೈ, ಮೈಸೂರು, ಬೆಂಗಳೂರು ಮಾರ್ಗದಲ್ಲಿ ಸಂಚರಿಸುವ ವಂದೇ ಭಾರತ್ ಎಕ್ಸ್ಪ್ರೆಸ್ ರೈಲು ಜಾನುವಾರಿಗೆ ಡಿಕ್ಕಿ ಹೊಡೆದಿರುವ ಘಟನೆ ನಡೆದಿದೆ.
ಇದೇ ನೋಡಿ ವಿಶ್ವದ ಅತ್ಯಂತ ದುಬಾರಿ ʻಚಹಾ ಎಲೆʼ… ಅದರ ಬೆಲೆ, ಪ್ರಯೋಜನೆ ಕೇಳಿದ್ರೆ ನೀವು ಶಾಖ್ ಆಗೋದು ಗ್ಯಾರಂಟಿ
ತಮಿಳುನಾಡಿನ ಆರಕೋಣಂನಲ್ಲಿ ಗುರುವಾರ ಜಾನುವಾರು ರೈಲಿಗೆ ಅಡ್ಡ ಬಂದಿದ್ದು, ಡಿಕ್ಕಿಯಾಗಿದೆ. ಪರಿಣಾಮವಾಗಿ ರೈಲಿನ ಮುಂಭಾಗಕ್ಕೆ ಹಾನಿಯಾಗಿದೆ. ಜಾನುವಾರು ಮೃತಪಟ್ಟಿದೆ ಎಂದು ಮೂಲಗಳು ತಿಳಿಸಿವೆ. ಘಟನೆ ಸಂಭವಿಸಿದಾಗ ರೈಲು ಗಂಟೆಗೆ 90 ಕಿಲೋ ಮೀಟರ್ ವೇಗದಲ್ಲಿ ಚಲಿಸುತ್ತಿತ್ತು ಎನ್ನಲಾಗಿದೆ.
ಇನ್ನೂ ಈ ಹಿಂದೆಯೂ ವಂದೇ ಭಾರತ್ ರೈಲು ಅಕ್ಟೋಬರ್ 6 ರಂದು ಮುಂಬೈ- ಗಾಂಧಿನಗರ ನಡುವೆ ರೈಲು ಡಿಕ್ಕಿ ಹೊಡೆದು ನಾಲ್ಕು ಎಮ್ಮೆಗಳು ಸಾವನ್ನಪ್ಪಿದ್ದವು. ಅಕ್ಟೋಬರ್ 7 ರಂದು ಗುಜರಾತ್ ನ ಆನಂದ್ ಬಳಿ ಹಸುವೊಂದಕ್ಕೆ ವಂದೇ ಭಾರತ್ ಸೂಪರ್ ಪಾಸ್ಟ್ ಎಕ್ಸ್ ಪ್ರೆಸ್ ಡಿಕ್ಕಿ ಹೊಡೆದಿತ್ತು.