ಕೆಎನ್ಎನ್ಡಿಜಿಟಲ್ ಡೆಸ್ಕ್ : ವಿಶ್ವ ನಾಯಕರ ಪಟ್ಟಿಯಲ್ಲಿ ನರೇಂದ್ರ ಮೋದಿ ಮತ್ತೊಮ್ಮೆ ಅಗ್ರಸ್ಥಾನ ಗಳಿಸಿದ್ದಾರೆ. ಈ ಹಿಂದೆ ಶೇ.71ರಷ್ಟು ಜನರು ಸಕಾರಾತ್ಮಕವಾಗಿ ಮತ ಹಾಕಿ ನಂಬರ್ ಒನ್ ಆಗಿದ್ದರು. ಈ ಬಾರಿ ಬೆಂಬಲ ಮತ್ತಷ್ಟು ಹೆಚ್ಚಾಗಿದ್ದು, ಶೇ.75ರಷ್ಟು ಜನರ ಬೆಂಬಲದೊಂದಿಗೆ ನಂಬರ್ ಒನ್ ಸ್ಥಾನ ಭದ್ರಪಡಿಸಿಕೊಂಡಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ. ಇನ್ನು ಪ್ರಧಾನಿ ಮೋದಿ ನಂತ್ರ ಮೆಕ್ಸಿಕೊ ಅಧ್ಯಕ್ಷ ಆಂಡ್ರೆಸ್ ಮ್ಯಾನುಯೆಲ್ 63 ಪ್ರತಿಶತದಷ್ಟು ಮತಗಳೊಂದಿಗೆ ಎರಡನೇ ಸ್ಥಾನದಲ್ಲಿದ್ದಾರೆ. ಇಟಲಿ ಪ್ರಧಾನಿ ಮಾರಿಯೋ ದ್ರಾಘಿ ಶೇ.54ರಷ್ಟು ಮತಗಳೊಂದಿಗೆ ಮೂರನೇ ಸ್ಥಾನದಲ್ಲಿದ್ದಾರೆ.
ಒಟ್ಟು 22 ರಾಷ್ಟ್ರಗಳ ಮುಖ್ಯಸ್ಥರನ್ನ ಹೊಂದಿರುವ ಈ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಜೋ ಬಿಡನ್ ಐದನೇ ಸ್ಥಾನದಲ್ಲಿದ್ದಾರೆ ಅನ್ನೋದು ಗಮನಾರ್ಹ. ಇನ್ನು ಬಿಡೆನ್ ಕೇವಲ 41 ಪ್ರತಿಶತ ಮತಗಳನ್ನ ಪಡೆದಿದ್ದಾರೆ. ಬಿಡೆನ್ ನಂತ್ರ ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ 39 ಪ್ರತಿಶತ ಮತಗಳನ್ನ ಪಡೆದಿದ್ದಾರೆ.
ಪ್ರಸ್ತುತ, ಮಾರ್ನಿಂಗ್ ಕನ್ಸಲ್ಟ್ ಪ್ರಪಂಚದಾದ್ಯಂತದ ವಿವಿಧ ದೇಶಗಳ ನಾಯಕರ ಅನುಮೋದನೆ ರೇಟಿಂಗ್ಗಳನ್ನ ಟ್ರ್ಯಾಕ್ ಮಾಡಿದೆ. ಇದು ಆಸ್ಟ್ರೇಲಿಯಾ, ಬ್ರೆಜಿಲ್, ಕೆನಡಾ, ಫ್ರಾನ್ಸ್, ಜರ್ಮನಿ, ಭಾರತ, ಇಟಲಿ, ಜಪಾನ್, ಮೆಕ್ಸಿಕೋ, ದಕ್ಷಿಣ ಕೊರಿಯಾ, ಸ್ಪೇನ್, ಬ್ರಿಟನ್ ಮತ್ತು ಯುನೈಟೆಡ್ ಸ್ಟೇಟ್ಸ್ ನಾಯಕರ ಅನುಮೋದನೆ ರೇಟಿಂಗ್ಗಳನ್ನ ಟ್ರ್ಯಾಕ್ ಮಾಡಿದೆ.
ಮಾರ್ನಿಂಗ್ ಕನ್ಸಲ್ಟ್ ವಿಶ್ವ ನಾಯಕರ ಜನಪ್ರಿಯತೆಯನ್ನ ಪರಿಶೀಲಿಸುತ್ತದೆ. ಸಂಸ್ಥೆಯು ಸಮೀಕ್ಷೆಯನ್ನ ಪ್ರಾರಂಭಿಸಿದಾಗಿನಿಂದ ಮೇ 2020ರಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಅನುಮೋದನೆ ರೇಟಿಂಗ್ಗಳು ಅತ್ಯಧಿಕವಾಗಿದೆ. ಆದ್ರೆ, ಕಳೆದ ವರ್ಷ ಕೋವಿಡ್ನಲ್ಲಿ ಏಕಾಏಕಿ ಅನುಮೋದನೆ ರೇಟಿಂಗ್ಗಳು ಕಡಿಮೆ ಮಟ್ಟಕ್ಕೆ ಕುಸಿದವು. ಈ ವರ್ಷವೂ ಜನವರಿಯಲ್ಲಿ ಬಿಡುಗಡೆಯಾದ ಸಮೀಕ್ಷೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮೊದಲ ಸ್ಥಾನದಲ್ಲಿದ್ದಾರೆ. ಇನ್ನು ಮಾರ್ನಿಂಗ್ ಕನ್ಸಲ್ಟ್ ಅವ್ರು 50ರಷ್ಟು ನಿವ್ವಳ ಅನುಮೋದನೆಯನ್ನ ಹೊಂದಿದ್ದಾರೆ ಎಂದು ಬಹಿರಂಗಪಡಿಸಿದ್ದಾರೆ ಮತ್ತು ಶೇಕಡಾ 71ರಷ್ಟು ಜನರು ಧನಾತ್ಮಕವಾಗಿ ಮತ್ತು ಶೇಕಡಾ 21ರಷ್ಟು ಜನರು ಋಣಾತ್ಮಕವಾಗಿ ಪ್ರತಿಕ್ರಿಯಿಸಿದ್ದಾರೆ.
ವಿಶ್ವ ನಾಯಕರ ಜಾಗತಿಕ ಅನುಮೋದನೆ ರೇಟಿಂಗ್ಗಳು ಇಂತಿವೆ..!
ನರೇಂದ್ರ ಮೋದಿ : 75 ಪ್ರತಿಶತ
ಆಂಡ್ರೆಸ್ ಮ್ಯಾನುಯೆಲ್ : 63 ಪ್ರತಿಶತ
ಮಾರಿಯೋ ದ್ರಾಘಿ : 54 ಪ್ರತಿಶತ
ಬೋಲ್ಸನಾರೊ : 42 ಪ್ರತಿಶತ
ಜೋ ಬಿಡನ್ : 41 ಪ್ರತಿಶತ
ಜಸ್ಟಿನ್ ಟ್ರುಡೊ : 39 ಪ್ರತಿಶತ
ಫುಮಿಯೊ ಕಿಶಿಡಾ : 38 ಪ್ರತಿಶತ
ಇಮ್ಯಾನ್ಯುಯೆಲ್ ಮ್ಯಾಕ್ರೋನ್ : 34 ಪ್ರತಿಶತ
ಓಲಾಫ್ ಸ್ಕೋಲ್ಜ್ : 30 ಪ್ರತಿಶತ
ಬೋರಿಸ್ ಜಾನ್ಸನ್ : 25 ಪ್ರತಿಶತ