ಹಾಸನ : ಜಿಲ್ಲೆಯ ಶಾಸಕ ಪ್ರೀತಂ ಗೌಡ(Pritam Gowda)ಗೆ ಟಕ್ಕರ್ ಕೊಡಲು ಭವಾನಿ ರೇವಣ್ಣ (Bhavani Revanna) ಮುಂದಾಗಿದ್ದು, ಹಾಸನದ ಮತದಾರರಿಗೆ ಭಾನುವಾರ ಭರ್ಜರಿ ಬಾಡೂಟ ನೀಡುವ ಮೂಲಕ ರಾಜಕೀಯ ತಂತ್ರಗಾರಿಕೆಯಲ್ಲಿ ತೊಡಗಿದ್ದಾರೆ
ಭವಾನಿ ರೇವಣ್ಣ ಹುಟ್ಟೂರು ಮೈಸೂರು ಜಿಲ್ಲೆ ಕೆ.ಆರ್.ನಗರ ತಾಲೂಕಿನ ಸಾಲಿಗ್ರಾಮದಲ್ಲಿ ಔತನಕೂಟವನ್ನು ಭವಾನಿ ರೇವಣ್ಣ ಅವರ ಸಹೋದರ ಪ್ರಕಾಶ್ ಅವರ ಮನೆಯಲ್ಲಿ ಔತಣ ಕೂಟ ಆಯೋಜನೆಯಾಗಿತ್ತು. ಮುಂದಿನ ಚುನಾವಣೆಗೆ ಪಕ್ಷಕ್ಕೆ ನಾಯಕರನ್ನು ಸೆಳೆಯೋದಕ್ಕಾಗಿ ಈ ಕಾರ್ಯಕ್ರಮ ಮಾಡಲಾಗಿದೆ. ಈ ಔತನ ಕೂಟದಲ್ಲಿ ಪಾಲ್ಗೊಂಡ ಪ್ರತಿಯೊಬ್ಬ ಜೆಡಿಎಸ್ ಕಾರ್ಯಕರ್ತರನ್ನ ಮಾತನಾಡಿಸಿದ್ದರು. ಈ ಅದ್ದೂರಿ ಕಾರ್ಯಕ್ರಮದಲ್ಲಿ ಭವಾನಿ ರೇವಣ್ಣಪುತ್ರ ಸಂಸದ ಪ್ರಜ್ವಲ್ ರೇವಣ್ಣ, ವಿಧಾನಪರಿಷತ್ ಸದಸ್ಯ ಸೂರಜ್ ರೇವಣ್ಣ ಸೇರಿದಂತೆ ಹಲವು ಗಣ್ಯರು ಭಾಗಿಯಾಗಿದ್ರು