ಬೆಂಗಳೂರು : ದಿವಂಗತ ಮಾಜಿ ಪ್ರಧಾನಿ ವಾಜಪೇಯಿಯವರ ಸ್ಮರಣಾರ್ಥವಾಗಿ ಉನ್ನತ ಶಿಕ್ಷಣ, ಐಟಿ-ಬಿಟಿ ಮತ್ತು ಕೌಶಲ್ಯಭಿವೃದ್ಧಿ ಜೀವನೋಪಾಯ ಇಲಾಖೆಗಳಲ್ಲಿ (ಡಿಸೆಂಬರ್ 1 ರಿಂದ 31) ಸುಶಾಸನ ಮಾಸಾಚರಣೆಗೆ ಸಚಿವ ಡಾ.ಸಿ.ಎನ್. ಆಶ್ವತ್ಥನಾರಾಯಣ ಚಾಲನೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ತಮ್ಮ ವ್ಯಾಪ್ತಿಗೆ ಬರುವ ಉನ್ನತ ಶಿಕ್ಷಣ, ಐಟಿ-ಬಿಟಿ, ವಿಜ್ಞಾನ-ತಂತ್ರಜ್ಞಾನ, ಕೌಶಲ್ಯಾಭಿವೃದ್ಧಿ ಮತ್ತು ಜೀವನೋಪಾಯ ಇಲಾಖೆಗಳ ಉದ್ದೇಶ ಹಾಗೂ ಇಲಾಖೆಯ ಸಂಕಲ್ಪಗಳನ್ನು ಪ್ರಕಟಿಸಿದ್ದಾರೆ.
BIGG NEWS : ಆಧಾರ್ ಕಾರ್ಡ್ ಇದ್ದರೆ ಮನೆಗಳಿಗೆ ಕುಡಿಯುವ ನೀರಿನ ನಳ ಸಂಪರ್ಕ : ರಾಜ್ಯ ಸರ್ಕಾರ ಸುತ್ತೋಲೆ
ಸುಶಾಸನ ಎನ್ನುವುದು ಹೊಸ ರಾಜಕೀಯ ಸಂಸ್ಕೃತಿ, ಇದು ಕೇವಲ ಒಂದು ದಿನಕ್ಕೆ ಸೀಮಿತವಾಗದೇ ನಿರಂತರವಾಗಿ ನಡೆಯಬೇಕು. ತಂತ್ರಜ್ಞಾನದ ಅಳವಡಿಕೆ ಮೂಲಕ ಆಡಳಿತದಲ್ಲಿ ಪಾರದರ್ಶಕತೆ ಬರಬೇಕು. ಸುಶಾಸನ ಆಗಬೇಕೆಂದರೆ ಗುಣಮಟ್ಟದ ಶಿಕ್ಷಣ ಅಗತ್ಯ. ಹೀಗಾಗಿ ಎನ್ಇಪಿ ಅನುಷ್ಠಾನದ ಮೂಲಕ ಉನ್ನತ ಶಿಕ್ಷಣದಲ್ಲಿ ಸುಧಾರಣೆ ತರುತ್ತೇವೆ ಎಂದರು.
ಉದ್ಯೋಗಾಕಾಂಕ್ಷಿಗಳು ಹಾಗೂ ಉದ್ಯೋಗದಾತರನ್ನು ಬೆಸೆಯುವ ಸ್ಕಿಲ್ ಕನೆಕ್ಟ್ ಪೂರ್ಟಲ್ ಉದ್ಘಾಟನೆ ಹಾಗೂ ಐದು ಕಂಪನಿಗಳೊಂದಿಗೆ ಉದ್ಯೋಗ ಸೃಷ್ಟಿ ಕುರಿತು ಒಡಂಬಡಿಕೆಗೆ ಚಾಲನೆ ನೀಡಿದ್ದಾರೆ.
BIGG NEWS : ರಾಜ್ಯದಲ್ಲಿ ಮುಸ್ಲಿಮರಿಗೆ ಪ್ರತ್ಯೇಕ ಕಾಲೇಜುಗಳ ಸ್ಥಾಪನೆ ಇಲ್ಲ : ಸಿಎಂ ಬೊಮ್ಮಾಯಿ ಸ್ಪಷ್ಟನೆ