ಮಂಗಳೂರು : ಮಂಗಳೂರಿನಲ್ಲಿ ಆಟೋದಲ್ಲಿ ಕುಕ್ಕರ್ ಬಾಂಬ್ ಸ್ಪೋಟ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರಿಗೆ ಇದೀಗ ಮತ್ತೊಂದು ಸ್ಪೋಟಕ ಮಾಹಿತಿ ಲಭ್ಯವಾಗಿದೆ.
ಶಂಕಿತ ಉಗ್ರ ಶಾರಿಕ್ ನ ಮೊಬೈಲ್ ನಲ್ಲಿ ಝಾಕಿರ್ ನಾಯ್ಕ್ ಭಾಷಣದ ವಿಡಿಯೋ ಪತ್ತೆಯಾಗಿದೆ. ವಿಡಿಯೋಗಳನ್ನು ನೋಡಿ ಶಾರಿಕ್ ಝಾಕಿರ್ ಪ್ರಭಾವಕ್ಕೆ ಒಳಗಾಗಿದ್ದ. ಝಾಕಿರ್ ನಾಯ್ಕ್ ಇಸ್ಲಾಂ ಧರ್ಮದ ಬೋಧಕ, ಭಾಷಣಕಾರ. ಭಾರತದಿಂದ ನಿಷೇಧಕ್ಕೊಳಗಾಗಿರುವ ಝಾಕಿರ್ ನ ಭಾಷಣಗಳನ್ನು ಶಾರಿಕ್ ಹೆಚ್ಚು ಕೇಳುತ್ತಿದ್ದ ಎಂಬ ಮಾಹಿತಿ ಲಭ್ಯವಾಗಿದೆ.
ಇನ್ನು ಶಾರಿಕ್ ಮೊಬೈಲ್ ಪರಿಶೀಲಿಸುತ್ತಿರುವ ಪೊಲೀಸರಿಗೆ ಮತ್ತೊಂದು ಸ್ಪೋಟಕ ಅಂಶ ಪತ್ತೆಯಾಗಿದ್ದು, ಶಾರಿಕ್ ಮೊಬೈಲ್ ಮೊಬೈಲ್ ನಲ್ಲಿ ಬಾಂಬ್ ತಯಾರಿಸುವ ವಿಡಿಯೋ ಸಹ ಪತ್ತೆಯಾಗಿದೆ. ಟೋರ್ ಬ್ರೌಸರ್ ಮೂಲಕ ಡಾರ್ಕ್ ವೆಬ್ ಸೈಟ್ ಗಳೂ ಪತ್ತೆಯಾಗಿವೆ ಎನ್ನಲಾಗಿದೆ.