ನ್ಯೂಯಾರ್ಕ್ : ಈ ತಿಂಗಳು ನಡೆದ 2ನೇ ದಾಳಿಯಲ್ಲಿ ನ್ಯೂಯಾರ್ಕ್ನ ದೇವಾಲಯವೊಂದರ ಮುಂಭಾಗದಲ್ಲಿರುವ ಮಹಾತ್ಮಾ ಗಾಂಧಿ ಪ್ರತಿಮೆಯನ್ನ ದ್ವಂಸಗೊಳಿಸಲಾಗಿದೆ.
ಆರು ಜನ ದುಷ್ಕರ್ಮಿಗಳು ಶ್ರೀತುಳಸಿ ಮಂದಿರದ ಪ್ರತಿಮೆಯನ್ನ ಸ್ಲೆಡ್ಜ್ ಹ್ಯಾಮರ್ʼನಿಂದ ಧ್ವಂಸಗೊಳಿಸಿದ್ದು, ಅದರ ಸುತ್ತಲೂ ಮತ್ತು ರಸ್ತೆಯ ಮೇಲೆ ದ್ವೇಷಪೂರಿತ ಪದಗಳನ್ನ ಚಿತ್ರಿಸಿದ್ದಾರೆ ಎಂದು ಪೊಲೀಸರನ್ನ ಉಲ್ಲೇಖಿಸಿ ಮಾಧ್ಯಮ ವರದಿಗಳು ತಿಳಿಸಿವೆ.
A statue of #MahatmaGandhi in front of a temple in #NewYork has been toppled and smashed in the second attack on the memorial this month and a local volunteer watch group has sprung into action to protect it. pic.twitter.com/k4KWd7pRut
— IANS (@ians_india) August 19, 2022
ಕ್ವೀನ್ಸ್ ಡೈಲಿ ಈಗಲ್ ಪ್ರಕಾರ, ಆಗಸ್ಟ್ 3 ರಂದು ಪ್ರತಿಮೆಯನ್ನು ಧ್ವಂಸಗೊಳಿಸಲಾಗಿತ್ತು. 25-30 ವರ್ಷದೊಳಗಿನ ಪುರುಷರು ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ಶಂಕಿಸಲಾದ ಕಣ್ಗಾವಲು ವೀಡಿಯೊವನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ.
ಬಿಳಿ ಮರ್ಸಿಡಿಸ್ ಬೆಂಝ್ ಕಾರಿನಲ್ಲಿ ಮತ್ತು ಬಾಡಿಗೆ ವಾಹನವಾಗಿ ಬಳಸಲಾಗುವ ಟೊಯೊಟಾ ಕ್ಯಾಮ್ರಿ ಕಾರಿನಲ್ಲಿ ದುಷ್ಕರ್ಮಿಗಳು ಸ್ಥಳದಿಂದ ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.