ಮುಂಬೈ : ಐಷಾರಾಮಿ ಕಾರುಗಳ ಮಾಲೀಕರಾಗಿರುವ ಬಾಲಿವುಡ್ ನಟ ರಣವೀರ್ ಸಿಂಗ್ ಆಗಾಗ ಮುಂಬೈನ ಬೀದಿಗಳಲ್ಲಿ ಅವುಗಳನ್ನ ಪ್ರದರ್ಶಿಸಿಸೋದು ಗೊತ್ತಿರುವ ವಿಚಾರ. ಇತ್ತೀಚೆಗೆ, ನಟ ತನ್ನ ಆಸ್ಟನ್ ಮಾರ್ಟಿನ್’ನ್ನ ಮುಂಬೈ ವಿಮಾನ ನಿಲ್ದಾಣದ ಮುಂಬಾಗದಲ್ಲಿ ಓಡಿಸುತ್ತಿರುವುದು ಕಂಡುಬಂದಿದ್ದು, ಇದನ್ನ ಅವರು ವರ್ಷಗಳ ಹಿಂದೆ ಖರೀದಿಸಿದ್ದರು.
ಈ ಐಷಾರಾಮಿ ಆಸ್ಟನ್ ಮಾರ್ಟಿನ್ ರ್ಯಾಪಿಡ್ ಎಸ್ ನ ಬೆಲೆ ಸುಮಾರು 3.9 ಕೋಟಿ ರೂಪಾಯಿ ಆಗಿದೆ. ಆದ್ರೆ, ಸಧ್ಯ ಟ್ವಿಟರ್ ಬಳಕೆದಾರರೊಬ್ಬರು, ನಟ ಅವಧಿ ಮೀರಿದ ವಿಮೆಯೊಂದಿಗೆ ತನ್ನ ಕಾರು ಚಲಾಯಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬಳಕೆದಾರರು ಹಂಚಿಕೊಂಡ ಸ್ಕ್ರೀನ್ಶಾಟ್ ಪ್ರಕಾರ, ವಿಮೆಯ ಅವಧಿ ಜೂನ್ 28, 2020 ರಂದು ಮುಗಿದಿದೆ.
“ಮುಂಬೈ ಪೊಲೀಸ್ ದಯವಿಟ್ಟು ರಣವೀರ್ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಿ. ಅವರು ನಿನ್ನೆ ಚಲಾಯಿಸಿದ ಕಾರಿನ ಇನ್ಶೂರೆನ್ಸ್ ಅವಧಿ ಮುಗಿದಿದೆ” ಎಂದು ಬಳಕೆದಾರರು ಟ್ವೀಟ್ ಮಾಡಿದ್ದಾರೆ.
@MumbaiPolice Please take strick action on @RanveerOfficial. Insurance Failed car he drove yesterday!!#RanveerSingh pic.twitter.com/wzhSCqWzGU
— Gupta Anna (@annabhai2019) October 15, 2022