ರಾಯಚೂರು : ರಾಯಚೂರಿನಲ್ಲಿ ಲವ್ ಜಿಹಾದ್, ಮತಾಂತರ ಆರೋಪ ಕೇಳಿ ಬಂದಿದ್ದು, ಶಿಕ್ಷಕಿಯನ್ನು ಮತಾಂತರ ಮಾಡಿ ಮದುವೆಯಾಗಿರುವ ಘಟನೆ ನಡೆದಿದೆ.
ರಾಯಚೂರಿನ ಯರಮರಸ್ ಕ್ಯಾಂಪ್ ನಲ್ಲಿ ಈ ಘಟನೆ ನಡೆದಿದ್ದು, ಶಿಕ್ಷಕಿ ಸುಹಾಸಿನಿ (29) ಎಂಬ ಮಹಿಳೆ ಪತಿ ಲಿಂಗರಾಜು ಮತ್ತು ಮಗುವನ್ನು ಬಿಟ್ಟು ಮನೆಯಿಂದ ಅ.20 ರಂದು ಹೋಗಿದ್ದಾರೆ. ಸಲೀಂ ಎಂಬ ವ್ಯಕ್ತಿ ಸುಹಾಸಿನಿಯನ್ನು ಕರೆದೊಯ್ದಿದ್ದಾನೆ ಎಂದು ಸುಹಾಸಿನಿ ಪೋಷಕರು ಆರೋಪ ಮಾಡಿದ್ದಾರೆ.
BIGG NEWS : ಕರ್ನಾಟಕದಲ್ಲಿ ಎರಡು ವರ್ಷಗಳ ಬಳಿಕ ಶಾಲಾ ಶೈಕ್ಷಣಿಕ ಪ್ರವಾಸಗಳು ಪುನರಾರಂಭ
ಸುಹಾಸಿನಿ ತಂದೆ ಬಸವರಾಜ್, ತಾಯಿ ನಿರ್ಮಲಾ ಅವರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ಶಿಕ್ಷಕಿ ಸುಹಾಸಿನಿಯನ್ನು ಸಲೀಂ ಮೈಂಡ್ ವಾಶ್ ಮಾಡಿ ಕರೆದೊಯ್ದಿದ್ದಾನೆ ಎಂದು ಆರೋಪಿಸಿದ್ದಾರೆ. ಸದ್ಯ ಘಟನೆ ಸಂಬಂಧ ರಾಯಚೂರು ಗ್ರಾಮೀಣ ಠಾಣೆಯಲ್ಲಿ ನಾಪತ್ತೆ ಕೇಸ್ ದಾಖಲಾಗಿದೆ.