ಧಾರವಾಡ : ಸ್ಥಳೀಯ ಸಂಸ್ಥೆಗಳ ನಿವೃತ್ತ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು, ನಗರ ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರು ಜಿಲ್ಲಾ ಖಜಾನೆ ಇಲಾಖೆ ಮಹತ್ವದ ಮಾಹಿತಿ ನೀಡಿದ್ದು, ಜೀವಂತ ಪ್ರಮಾಣ ಪತ್ರವನ್ನು ಡಿಸೆಂಬರ್ 20 ರೊಳಗೆ ಸಲ್ಲಿಸಬೇಕೆಂದು ತಿಳಿಸಿದೆ.
ರೈತರೇ ಗಮನಿಸಿ : ಸೌರ ಚಾಲಿತ ಕೃಷಿ ಪಂಪ್ ಸೆಟ್ ಗಳಿಗಾಗಿ ಅರ್ಜಿ ಆಹ್ವಾನ
ಸ್ಥಳೀಯ ಸಂಸ್ಥೆಗಳ ನಿವೃತ್ತ ಪಿಂಚಣಿದಾರರು, ಕುಟುಂಬ ಪಿಂಚಣಿದಾರರು, ನಗರ ಸ್ಥಳೀಯ ಸಂಸ್ಥೆಗಳ ಪಿಂಚಣಿದಾರರು ಜಿಲ್ಲಾ ಖಜಾನೆ ಧಾರವಾಡ ಮತು ಹುಬ್ಬಳ್ಳಿ ಖಜಾನೆಗಳಿಗೆ ತಮ್ಮ ಪಿಂಚಣಿ ಪುಸ್ತಕದೊಂದಿಗೆ ಮತ್ತು ಪಿಂಚಣಿದಾರರು ತಮಗೆ ಸಂಬಂಧಪಟ್ಟ ಖಜಾನೆಗಳಿಗೆ ಭೇಟಿ ನೀಡಿ (ಈಗಾಗಲೇ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಿರುವ ಪಿಂಚಣಿದಾರರನ್ನು ಹೊರತುಪಡಿಸಿ) ಪಿಂಚಣಿದಾರರು ಪ್ರಸಕ್ತ ಸಾಲಿನ ಜೀವಂತ ಪ್ರಮಾಣ ಪತ್ರವನ್ನು ಡಿಸೆಂಬರ್ 20 ರೊಳಗೆ ಸಲ್ಲಿಸಬೇಕೆಂದು ಜಿಲ್ಲಾ ಖಜಾನೆ ಉಪನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.