ಬೆಳಗಾವಿ : ವಿಧಾನಪರಿಷತ್ ನಲ್ಲಿ ಸುದೀರ್ಘ ಚರ್ಚೆ ಬಳಿಕ ಕರ್ನಾಟಕ ಭೂ ಕಂದಾಯ (ಮೂರನೇ ತಿದ್ದುಪಡಿ) ವಿಧೇಯಕ-2022 ಕ್ಕೆ ಅಂಗೀಕಾರ ದೊರೆಯಿತು.
ನಾಳೆ ಬದಲು ಇಂದೇ ಬೆಳಗಾವಿಯ ಚಳಿಗಾಲದ ಅಧಿವೇಶನ ಮುಕ್ತಾಯ | Karnataka Assembly News
ವಿಪಕ್ಷ ನಾಯಕ ಬಿ.ಕೆ. ಹರಿಪ್ರಸಾದ್ ಈ ಕುರಿತು ಮಾತನಾಡಿದ್ದು, 2005 ಕ್ಕಿಂತ ಪೂರ್ವದಲ್ಲಿ ಕೃಷಿ ಮಾಡಿಕೊಂಡು ಬಂದಿರುವವರಿಗೆ 25 ಎಕರೆ ಭೂಮಿಯನ್ನು 30 ವರ್ಷಗಳ ಅವಧಿಗೆ ಗುತ್ತಿಗೆಗೆ ನೀಡುವ ಪ್ರಸ್ತಾಪ ಇದರಲ್ಲಿದೆ. ಆದರೆ ಇದ್ದವರಿಗೆ ಕೊಡುವ ಬದಲು ಇಲ್ಲದ ರೈತರಿಗೆ ಭೂಮಿ ನೀಡಿದರೆ ಅವರ ಜೀವನ ಹಸನಾಗುತ್ತದೆ. ತರಾತುರಿಯಲ್ಲಿ ಬಿಲ್ ನ್ನು ಮಂಡಿಸಿ ಪಾಸ್ ಮಾಡಿಸಿಕೊಳ್ಳುವ ಬದಲು ವಿಸ್ತೃತವಾಗಿ ಚರ್ಚೆ ಮಾಡಲು ಬಿಡಿ ಎಂದು ಹೇಳಿದ್ದಾರೆ.
ಇನ್ನು ಮಧ್ಯವರ್ತಿಗಳ ಹಾವಳಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸುವ ದೃಷ್ಟಿಯಿಂದ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಅರ್ಜಿ ಸ್ವೀಕೃತಿಯ 15 ದಿನಗಳಲ್ಲಿ ಭೂಪರಿವರ್ತನಾ ಆದೇಶ ನೀಡುವ ಅವಕಾಶವಿದೆ. 7 ದಿನ ಕಳೆದರೆ ನೇರವಾಗಿಯೇ ಭೂಪರಿವರ್ತನೆ ಆದೇಶ ಕೈ ಸೇರುವ ನಿಟ್ಟಿನಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ.