ಬೆಂಗಳೂರು : 2022-23 ನೇ ಶೈಕ್ಷಣಿಕ ವರ್ಷದಲ್ಲಿ ಅನುಷ್ಠಾನಗೊಳಿಸಿರುವ ಕಲಿಕಾ ಚೇತರಿಕೆ ಉಪಕ್ರಮವನ್ನು ಶಾಲಾ ಹಂತದಲ್ಲಿ ಬಲವರ್ಧನೆಗೊಳಿಸುವಂತೆ ಪ್ರಾಥಮಿಕ ಮತ್ತು ಪ್ರೌಢಶಾಲಾ ಶಿಕ್ಷಕರಿಗೆ ಸಾರ್ವಜನಿಕ ಶಿಕ್ಷಣ ಇಲಾಖೆ ಸೂಚನೆ ನೀಡಿದೆ.
BIGG NEWS : ಮಂಕಿಪಾಕ್ಸ್ ಕುರಿತಂತೆ ಇಂದು ಸಿಎಂ ಬೊಮ್ಮಾಯಿ ಮಹತ್ವದ ಸಭೆ
2022-23 ನೇ ಶೈಕ್ಷಣಿಕ ಅವಧಿಗೆ ಪೂರಕಾಗಿ ಶಾಲಾ ಶಿಕ್ಷಣ ವ್ಯಾಪ್ತಿಗೆ ಅನುಷ್ಠಾನಿಸಲಾಗಿರುವ ಸದರಿ ಕಾರ್ಯಕ್ರಮದ ಅಡಿಯಲ್ಲಿ ವಿದ್ಯಾರ್ಥಿಗಳಿಗಾಗಿ ಕಲಿಕೆಯ ಹಾಳೆಗಳು/ಚಟುವಟಿಕೆ ಪುಸ್ತಕಗಳನ್ನು ಹಾಗೂ ಶಿಕ್ಷಕರಿಗಾಗಿ ಸುಗಮಕಾರರ ಕೈಪಿಡಿಗಳನ್ನು ತರಗತಿವಾರು ಮತ್ತೆ ವಿಷಯವಾರು ಸಿದ್ದಪಡಿಸಿ, ಮುದ್ರಿಸಿ ಎಲ್ಲಾ ಶಾಲೆಗಳಿಗೂ ಒದಗಿಸಲು ಈಗಾಗಲೇ ಇಲಾಖೆ ವತಿಯಿಂದ ಕ್ರಮವಹಿಸಲಾಗಿರುತ್ತದೆ.
ಕಲಿಕಾ ಚೇತರಿಕೆ ಉಪಕ್ರಮವನ್ನು ಎಲ್ಲಾ ಶಾಲೆಗಳಲ್ಲೂ ಅತ್ಯಂತ ಪರಿಣಮಕಾರಿಯಾಗಿ ಅನುಷ್ಠಾನಕ್ಕೆ ಒಳಪಡಿಸಲು ಹಾಗೂ ಕಾಲಕಾಲಕ್ಕೆ ಕಾರ್ಯಕ್ರಮದ ಅನುಷ್ಠಾನಾತ್ಮಕ ಪ್ರಗತಿಯನ್ನು ಅನುಪಾಲನೆಗೊಲಿಸಲು ಜಿಲ್ಲೆ ಹಾಗೂ ಬ್ಲಾಕ್ ಹಂತದ ಅಧಿಕಾರಿಗಳು, ಕ್ಷೇತ್ರ ಮತ್ತು ಕ್ಲಸ್ಟರ್ ಹಂತದ ಸಂಪನ್ಮೂಲ ವ್ಯಕ್ತಿಗಳು ತಮ್ಮ ತಮ್ಮ ಹಂತದಲ್ಲಿ ಯೋಜಿತ ಕಾರ್ಯಚಟುವಟಿಕೆಗಳನ್ನು ರೂಪಿಸಿ ಶಾಳೆಗಳಲ್ಲಿ ಅಳವಡಿಸಲು ಅಗತ್ಯ ಕ್ರಮವಹಿಸುವಂತೆ ನಿರ್ದೇಶಿಸಿದೆ.