ಬೆಂಗಳೂರು: ರಾಜ್ಯ ಸಶಸ್ತ್ರ ಮೀಸಲು ಪಡೆ (KSRP) ಹಾಗೂ ಇಂಡಿಯನ್ ರಿಸರ್ವ್ ಬೆಟಾಲಿಯನ್ (IRB) ವಿಭಾಗಗಳ 70 ಸಬ್ ಇನ್ಸ್ ಪೆಕ್ಟರ್ ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಗೆ ಕೊನೆಗೂ ದಿನಾಂಕ ನಿಗದಿಯಾಗಿದೆ.
BIGG NEWS : ಜ.27 ರಿಂದ ಮೂರು ದಿನ ಅದ್ಧೂರಿ `ಹಂಪಿ ಉತ್ಸವ’ ಆಚರಣೆ : ಸಚಿವೆ ಶಶಿಕಲಾ ಜೊಲ್ಲೆ
ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ ಈ ಬಗ್ಗೆ ಮಾಹಿತಿ ನೀಡಿದ್ದು, ಡಿಸೆಂಬರ್ 18 ರಂದು ಕೆಎಸ್ ಆರ್ ಪಿ, ಐಆರ್ ಬಿ ನೇಮಕಾತಿಗೆ ಲಿಖಿತ ಪರೀಕ್ಷೆ ನಡೆಸುವುದಾಗಿ ಪ್ರಕಟಿಸಿದೆ. ರಾಜ್ಯ ಪೊಲೀಸ್ ನೇಮಕಾತಿ ವಿಭಾಗವು, ಪೊಲೀಸ್ ಇಲಾಖೆ ವೆಬ್ ಸೈಟ್ ನಲ್ಲಿ https:\\ksp.karnataka.gov.in\english ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳುವಂತೆ ಅರ್ಹ ಅಭ್ಯರ್ಥಿಗಳಿಗೆ ಇಲಾಖೆ ಸೂಚಿಸಿದೆ.
ರಾಜ್ಯ ಪೊಲೀಸ್ ಇಲಾಖೆಯು ಕಳೆದ 2021 ರಲ್ಲಿ ಎಸ್ ಐ(ಸಿವಿಲ್) ಹುದ್ದೆಗಳು, ಸಿಎಆರ್/ಡಿಎಆರ್-ಆರ್ ಎಸ್ ಐ, ಕೆಎಸ್ ಆರ್ ಪಿ/ಐಆರ್ ಬಿ-ಪಿಎಸ್ ಐ, ಕೆಎಸ್ಐಎಸ್ ಎಫ್-ಪಿಎಸ್ ಐ ಹುದ್ದೆಗಳ ನೇಮಕಾತಿಗೆ ಅಧಿಸೂಚನೆ ಹೊರಡಿಸಿತ್ತು.