ಬೆಂಗಳೂರು: ನ.3ರಿಂದ ನ.6ರವರೆಗೆ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ (ಜಿಕೆವಿಕೆ) ಕೃಷಿ ಜಾತ್ರೆ ನಡೆಯಲಿದೆ. ತೋಟಗಾರಿಕೆ, ರೇಷ್ಮೆ, ಅರಣ್ಯ, ಕೃಷಿ ಸೇರಿ ಸರ್ಕಾರದ ವಿವಿಧ ಇಲಾಖೆಗಳ ಸಹಯೋಗದಲ್ಲಿ ಬೆಂಗಳೂರು ಕೃಷಿ ವಿಶ್ವವಿದ್ಯಾಲಯ ವತಿಯಿಂದ 4 ದಿನಗಳ ಕಾಲ ‘ಕೃಷಿಮೇಳ-2022’ ನಡೆಯಲಿದ್ದು, ಭರದಿಂದ ಸಿದ್ಧತೆ ನಡೆಯುತ್ತಿದೆ.
ಪ್ರತಿನಿತ್ಯ ʻಖರ್ಜೂರʼಗಳನ್ನು ಸೇವಿಸಿ, ಈ ʻಅಘಾತಕಾರಿ ಸಮಸ್ಯೆʼಗಳಿಗೆ ಗುಡ್ಬೈ ಹೇಳಿ | Dates Health Benefits
ಈ ಕುರಿತು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ವಿವಿ ಕುಲಪತಿ ಕೆ. ನಾರಾಯಣಗೌಡ, ಕೃಷಿ ವಿವಿ ಹೊಸದಾಗಿ ಅಭಿವೃದ್ಧಿ ಪಡಿಸಿರುವ ಭತ್ತ, ಮುಸುಕಿನ ಜೋಳ, ಅವರೆ ಸೇರಿ 9 ತಳಿಗಳನ್ನು ಮೇಳದಲ್ಲಿ ಬಿಡುಗಡೆ ಮಾಡಲಾಗುವುದು.
ಪ್ರತಿನಿತ್ಯ ʻಖರ್ಜೂರʼಗಳನ್ನು ಸೇವಿಸಿ, ಈ ʻಅಘಾತಕಾರಿ ಸಮಸ್ಯೆʼಗಳಿಗೆ ಗುಡ್ಬೈ ಹೇಳಿ | Dates Health Benefits
ಕೃಷಿ ಸಾಧಕರಿಗೆ ಪುರಸ್ಕಾರ, ಜಿಲ್ಲಾ ಮತ್ತು ತಾಲೂಕು ಮಟ್ಟದ ರೈತ ಪ್ರಶಸ್ತಿ. ಕೃಷಿ ವಸ್ತು ಪ್ರದರ್ಶನ ಮಳಿಗೆಗಳು, ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ವಿಚಾರಗೋಷ್ಠಿಯಲ್ಲಿ ತಜ್ಞರು ಮಾತನಾಡಲಿದ್ದಾರೆ ಎಂದು ವಿವರಿಸಿದರು.
ಪ್ರತಿನಿತ್ಯ ʻಖರ್ಜೂರʼಗಳನ್ನು ಸೇವಿಸಿ, ಈ ʻಅಘಾತಕಾರಿ ಸಮಸ್ಯೆʼಗಳಿಗೆ ಗುಡ್ಬೈ ಹೇಳಿ | Dates Health Benefits
ವಿವಿಧ ತಳಿಯ ಹಸುಗಳು, ಕೋಳಿ, ಕುರಿಗಳು, ತರೇಹವಾರಿ ಹೂವುಗಳು, ತರಕಾರಿ, ಸಿರಿಧಾನ್ಯ, ಮಾವು, ಹಲಸು, ಟ್ರ್ಯಾಕ್ಟರ್- ಟಿಲ್ಲರ್, ಕೃಷಿ ಚಟುವಟಿಕೆಗಳನ್ನ ಕಣ್ತುಂಬಿಕೊಳ್ಳುತ್ತಾ ಕೃಷಿ ಜಾತ್ರೆಯಲ್ಲಿ ಮಿಂದೇಳಲು ಸಾವಿರಾರು ಜನ ಆಗಮಿಸುವ ನಿರೀಕ್ಷೆ ಇದೆ.