ಬೆಂಗಳೂರು : ಕರ್ನಾಟಕ ಲೋಕಸೇವಾ ಆಯೋಗವು (KPSC) ಸಿ ದರ್ಜೆಯ ಹುದ್ದೆಗಳ ನೇಮಕ ಸೇರಿದಂತೆ ನಾಲ್ಕು ಇಲಾಖೆಗಳ ಹುದ್ದೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ನಡೆಸಲು ವೇಳಾಪಟ್ಟಿ ಪ್ರಕಟಿಸಿದೆ.
410 ಸಿ ದರ್ಜೆಯ ಹುದ್ದೆಗಳ ನೇಮಕ ಸೇರಿದಂತೆ ನಾಲ್ಕು ಇಲಾಖೆಗಳ ಹುದ್ದೆಗಳ ನೇಮಕಕ್ಕೆ ಸ್ಪರ್ಧಾತ್ಮಕ ಪರೀಕ್ಷೆ ಸೇರಿದಂತೆ ಆಯುಷ್ ಇಲಾಖೆಯಲ್ಲಿನ ಔಷಧ ವಿಶ್ಲೇಷಕರ ಹುದ್ದೆಗಳಿಗೆ ನವೆಂಬರ್ 29 ಹಾಗೂ 30 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ. ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ 136 ಕಿರಿಯ ಎಂಜಿನಿಯರ್ ಹುದ್ದೆಗಳಿಗೆ ಡಿ.24 ಮತ್ತು 25 ರಂದು ಪರೀಕ್ಷೆ ನಡೆಸಲಾಗುತ್ತದೆ.
BIGG NEWS : ಸಚಿವ ಸ್ಥಾನದ ಆಕಾಂಕ್ಷಿಗಳಿಗೆ ಗುಡ್ ನ್ಯೂಸ್ : ದೀಪಾವಳಿ ಬಳಿಕ ಸಚಿವ ಸಂಪುಟ ವಿಸ್ತರಣೆ!
ಪೌರಾಡಳಿತ ನಿರ್ದೇಶನಾಲಯದಡಿ ಬರುವ ನಗರ ಸ್ಥಳೀಯ ಸಂಸ್ಥೆಗಳ 410 ಹುದ್ದೆಗಳಿಗೆ 2023ರ ಜನವರಿ 21 ಮತ್ತು 22 ರಂದು ಹಾಗೂ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಸಹಾಯಕ ಎಂಜಿನಿಯರ್ ಗಳ ಹುದ್ದೆಗಳಿಗೆ 2023 ರ ಫೆಬ್ರವರಿ 11 ಮತ್ತು 12 ರಂದು ಸ್ಪರ್ಧಾತ್ಮಕ ಪರೀಕ್ಷೆ ನಡೆಯಲಿದೆ ಎಂದು ಕೆಪಿಎಸ್ ತಿಳಿಸಿದೆ. ಹೆಚ್ಚಿನ ಮಾಹಿತಿಗಾಗಿ ಆಯೋಗದ ವೆಬ್ ಸೈಟ್ www.kpsc.com ಗೆ ಭೇಟಿ ನೀಡಬಹುದು.