ಕೋಲಾರ : ರಸ್ತೆ ಅಭಿವೃದ್ದಿಗೆ ಆಗ್ರಹಿಸಿ ವಿವಿಧ ಸಂಘಟನೆಗಳು ಇಂದು ಕೋಲಾರ ಬಂದ್ ಗೆ ಕರೆ ನೀಡಿದ್ದು, ಈ ಹಿನ್ನೆಲೆ ಇಂದು ಖಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ.
ಕೋಲಾರ ಬಂದ್ ಹಿನ್ನೆಲೆ ಇಂದು ನಗರದ ಶಾಸಗಿ ಶಾಲೆಗಳಿಗೆ ರಜೆ ಘೋಷಿಸಲಾಗಿದೆ, ಆದರೆ ಸರ್ಕಾರಿ ಶಾಲೆಗಳಿಗೆ ರಜೆ ಇರುವುದಿಲ್ಲ ಎಂದು ಖಾಸಗಿ ಶಾಲೆಗಳ ಜಿಲ್ಲಾಧ್ಯಕ್ಷ ಸದಾನಂದ್ ಮಾಹಿತಿ ನೀಡಿದ್ದಾರೆ. ಕೋಲಾರ ನಗರದ ರಸ್ತೆಗಳ ಹಾಗೂ ಸಮಗ್ರ ಅಭಿವೃದ್ಧಿ ಮಾಡದಿರುವುದನ್ನು ಖಂಡಿಸಿ ಡಿಸೆಂಬರ್ 16 ರ ಇಂದು ಕೋಲಾರ ನಗರವನ್ನು ಬಂದ್ ಮಾಡಲಾಗುವುದೆಂದು ಪ್ರಗತಿಪರ ಸಂಘಟನೆಗಳು ತಿಳಿಸಿದೆ.
ಈಗಾಗಲೇ ಜಿಲ್ಲೆಯ ಸಮಸ್ಯೆ, ರಸ್ತೆ ಅಭಿವೃದ್ದಿ ಕುರಿತು ಜಿಲ್ಲಾಧಿಕಾರಿಗಳಿಗೆ, ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಇದುವರೆಗೂ ಯಾವುದೇ ಅಭಿವೃದ್ಧಿಗೆ ಸ್ಪಂದಿಸುತ್ತಿಲ್ಲ. ಹಾಗಾಗಿ ಅನಿವಾರ್ಯವಾಗಿ ಸರ್ಕಾರದ ಗಮನ ಸೆಳೆಯಲು ಕೋಲಾರ ನಗರ ಬಂದ್ ಮಾಡಲು ಪ್ರಗತಿಪರ ಸಂಘಟನೆಗಳು ನಿರ್ಧರಿಸಿದೆ. ಜಿಲ್ಲೆಯ ಹಲವು ಕಡೆ ವಿವಿಧ ಸಂಘಟನೆಗಳು, ಜನರು ಬೈಕ್ ರ್ಯಾಲಿ ಮೂಲಕ ಮೆರವಣಿಗೆ ನಡೆಸಿ ಸರ್ಕಾರದ ಗಮನ ಸೆಳೆಯಲಿದ್ದಾರೆ.
ಶುಕ್ರವಾರ ಬೆಳಿಗ್ಗೆ ನಗರ ಕೆ.ಎಸ್.ಆರ್.ಸಿ. ಡಿಪೋ ಮುಂದೆ ಯಾವುದೇ ಬಸ್ ನ್ನು ಹೊರಗೆ ಬಿಡದಂತೆ ಡಿಪೋ ಗೇಟ್ ಬಳಿ ಪ್ರತಿಭಟನಾ ಧರಣಿ ನಡೆಸಲಾಗುವುದು, ನಂತರ ಬಸ್ ನಿಲ್ದಾಣ ಸೇರಿದಂತೆ ನಗರದ ವಿವಿದಡೆ ಕಡೆ ರ್ಯಾಲಿ ಮೂಲಕ ಅಂಗಡಿ ಮುಂಗಟ್ಟು, ಆಟೋ, ಟೆಂಪು ಗಳ ಸಂಚಾರ ಬಂದ್ ಮಾಡಲಾಗುತ್ತದೆ. ಅದೇ ರೀತಿ ಆಸ್ಪತ್ರೆಗಳಿಗೆ, ಹಾಲು, ಮೆಡಿಕಲ್ ಮುಂತಾದ ತುರ್ತುಸೇವೆಗಳಿಗೆ ವಿನಾಯಿತಿ ನೀಡಲಾಗಿದೆ ಎನ್ನಲಾಗಿದೆ.