ಕೆಎನ್ಎನ್ಡಿಜಿಟಲ್ ಡೆಸ್ಕ್ : ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಜರ್ದಾರಿ ಜರ್ಮನಿಗೆ ತೆರಳಿ ಜಮ್ಮು ಮತ್ತು ಕಾಶ್ಮೀರದ ವಿಷಯವನ್ನ ಎತ್ತಿದ್ದಾರೆ. ಸಧ್ಯ ಜಮ್ಮು ಮತ್ತು ಕಾಶ್ಮೀರ ಬಗ್ಗೆ ಪಾಕಿಸ್ತಾನ ಮತ್ತು ಜರ್ಮನಿಯ ವಿದೇಶಾಂಗ ಸಚಿವರು ನೀಡಿದ ಹೇಳಿಕೆಗೆ ಭಾರತದ ವಿದೇಶಾಂಗ ಸಚಿವಾಲಯ ತಿರುಗೇಟು ನೀಡಿದೆ. ಆತ್ಮಸಾಕ್ಷಿ ಹೊಂದಿರುವ ಸದಸ್ಯರು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನ ಕೊನೆಗೊಳಿಸುವಲ್ಲಿ ಪಾತ್ರ ವಹಿಸಬೇಕು ಎಂದು ಸಚಿವಾಲಯ ಹೇಳಿದೆ.
ಜರ್ಮನಿಯಲ್ಲಿ ಪಾಕಿಸ್ತಾನದ ಕಾಶ್ಮೀರ ರಾಗ.!
ಕಾಶ್ಮೀರ ವಿಷಯದಲ್ಲಿ ಭಾರತದ ವಿದೇಶಾಂಗ ಸಚಿವಾಲಯವು ಜರ್ಮನಿ ಮತ್ತು ಪಾಕಿಸ್ತಾನಕ್ಕೆ ಸೂಕ್ತ ಪ್ರತ್ಯುತ್ತರ ನೀಡಿದೆ. ಜಮ್ಮು ಮತ್ತು ಕಾಶ್ಮೀರದ ಬಗ್ಗೆ ಜರ್ಮನಿ ಮತ್ತು ಪಾಕಿಸ್ತಾನದ ವಿದೇಶಾಂಗ ಸಚಿವರು ನೀಡಿದ ಹೇಳಿಕೆಗಳ ಬಗ್ಗೆ, ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಅಂತರರಾಷ್ಟ್ರೀಯ ಮಟ್ಟದಲ್ಲಿ ಭಯೋತ್ಪಾದನೆಯನ್ನ ಕೊನೆಗಾಣಿಸಲು ವಿಶ್ವದ ಪ್ರಮುಖ ಮತ್ತು ಆತ್ಮಸಾಕ್ಷಿ ಹೊಂದಿರುವ ಸದಸ್ಯರು ಪಾತ್ರ ವಹಿಸಬೇಕು ಎಂದು ಹೇಳಿದೆ.
ಭಾರತ ತಕ್ಕ ಪ್ರತ್ಯುತ್ತರ ನೀಡಿತು.!
ಸಚಿವಾಲಯದ ವಕ್ತಾರ ಅರಿಂದಮ್ ಬಗಾಚಿ ಮಾತನಾಡಿ, “ಜಾಗತಿಕ ಸಮುದಾಯದ ಎಲ್ಲಾ ಸದಸ್ಯರು ಜಾಗತಿಕ ಭಯೋತ್ಪಾದನೆಯನ್ನ ಕೊನೆಗಾಣಿಸುವ ಜವಾಬ್ದಾರಿಯನ್ನ ಹೊಂದಿದ್ದಾರೆ. ಆದ್ರೆ, ಜಮ್ಮು ಮತ್ತು ಕಾಶ್ಮೀರವು ದಶಕಗಳಿಂದ ಭಯೋತ್ಪಾದಕ ಕಾರ್ಯಾಚರಣೆಗಳ ಭಾರವನ್ನ ಹೊರುತ್ತಿದೆ ಎಂದು ಹೇಳಿದರು.
ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದಕ ಚಟುವಟಿಕೆಗಳು ಮುಂದುವರಿದಿವೆ
ಜಮ್ಮು ಮತ್ತು ಕಾಶ್ಮೀರದಲ್ಲಿ ಇನ್ನೂ ಭಯೋತ್ಪಾದಕ ಚಟುವಟಿಕೆಗಳು ನಡೆಯುತ್ತಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ. ವಿದೇಶಿ ಪ್ರಜೆಗಳು ಸಹ ಭಯೋತ್ಪಾದನೆಗೆ ಬಲಿಯಾಗಿದ್ದಾರೆ. ಒಂದು ರಾಷ್ಟ್ರವು ಅಂತಹ ಬೆದರಿಕೆಗಳನ್ನ ಗುರುತಿಸದಿದ್ದಾಗ, ವೈಯಕ್ತಿಕ ಸ್ವಾರ್ಥ ಅಥವಾ ನಿರಾಸಕ್ತಿಯಿಂದಾಗಿ ಅವು ಶಾಂತಿಯ ಮೇಲೆ ಪರಿಣಾಮ ಬೀರುತ್ತವೆ ಎಂದು ಅರಿಂದಮ್ ಬಾಗ್ಚಿ ಹೇಳಿದರು.
ಅಂತಹ ದೇಶಗಳು ಭಯೋತ್ಪಾದನೆಯನ್ನ ನಿಲ್ಲಿಸುವ ನಿಟ್ಟಿನಲ್ಲಿ ಯಾವುದೇ ಹೆಜ್ಜೆ ಇಡುವುದಿಲ್ಲ. ಇನ್ನು ಅಂತಹ ದೇಶಗಳು ಭಯೋತ್ಪಾದನೆಯ ಬಲಿಪಶುಗಳಿಗೆ ಘೋರ ಅನ್ಯಾಯ ಮಾಡುತ್ತವೆ ಎಂದು ಸಚಿವಾಲಯ ಹೇಳಿದೆ.
ಕಾಶ್ಮೀರ ವಿಷಯ ಎತ್ತುವುದನ್ನ ಮುಂದುವರಿಸಿದ ಪಾಕಿಸ್ತಾನ
’26/11ರ ದಾಳಿಯಲ್ಲಿ ಪಾಕಿಸ್ತಾನಿ ಭಯೋತ್ಪಾದಕರ ಕೈವಾಡದ ಬಗ್ಗೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಮತ್ತು ಎಫ್ಎಟಿಎಫ್ ತನಿಖೆ ನಡೆಸುತ್ತಿವೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಆರೋಪಿಸಿ ಪಾಕಿಸ್ತಾನದ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೋ ಹೇಳಿಕೆಗೆ ಪ್ರತಿಕ್ರಿಯೆಯಾಗಿ ವಿದೇಶಾಂಗ ಸಚಿವಾಲಯದ ಪ್ರತಿಕ್ರಿಯೆ ಬಂದಿದೆ. ಬರ್ಲಿನ್ನಲ್ಲಿ ತನ್ನ ಜರ್ಮನ್ ಸಹವರ್ತಿ ಅನ್ನಾಲೆನಾ ಬಾರ್ಬಾಕ್ ಅವರೊಂದಿಗೆ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಭುಟ್ಟೋ, “ಜಮ್ಮು ಮತ್ತು ಕಾಶ್ಮೀರ ವಿವಾದವನ್ನ ಶಾಂತಿಯುತವಾಗಿ ಪರಿಹರಿಸದೆ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸಾಧ್ಯವಿಲ್ಲ ಎಂದು ಹೇಳಿದ್ದರು. ಪಾಕಿಸ್ತಾನವು ಕಾಶ್ಮೀರದ ವಿಷಯ ಎತ್ತುವುದನ್ನ ಮುಂದುವರಿಸುತ್ತದೆ” ಎಂದಿದ್ದರು.