ಬೆಳಗಾವಿ : ಕರ್ನಾಟಕ ಭೂ ಕಂದಾಯ (ಎರಡನೇ ತಿದ್ದುಪಡಿ) ವಿಧೇಯಕವನ್ನು ವಿಧಾನಪರಿಷತ್ ನಲ್ಲಿ ಅಂಗೀಕರಿಸಲಾಗಿದ್ದು, ಈ ಮೂಲಕ ಮಧ್ಯವರ್ತಿಗಳ ಹಾವತಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸಲಾಗಿದೆ.
ಕರ್ನಾಟಕ ಭೂ ಕಂದಾಯ ಕಾಯ್ದೆ ಬಗ್ಗೆ ವಿವರಣೆ ನೀಡಿದ ಕಂದಾಯ ಸಚಿವ ಆರ್. ಅಶೋಕ್, ಮಧ್ಯವರ್ತಿಗಲ ಹಾವಳಿ ತಪ್ಪಿಸಿ ಭೂ ಪರಿವರ್ತನೆಯನ್ನು ಸರಳೀಕರಣಗೊಳಿಸುವ ದೃಷ್ಟಿಯಿಂದ ಈ ತಿದ್ದುಪಡಿ ಜಾರಿಗೆ ತರಲಾಗಿದೆ. ಅರ್ಜಿ ಸ್ವೀಕೃತಿಯ 15 ದಿನಗಳಲ್ಲಿ ಭೂಪರಿವರ್ತನಾ ಆದೇಶ ನೀಡುವ ಅವಕಾಶವಿದೆ. 7 ದಿನ ಕಳೆದರೆ ನೇರವಾಗಿಯೇ ಭೂಪರಿವರ್ತನೆ ಆದೇಶ ಕೈ ಸೇರುವ ನಿಟ್ಟಿನಲ್ಲಿ ತಂತ್ರಾಂಶವನ್ನು ಅಭಿವೃದ್ಧಿಪಡಿಸಲಾಗಿದೆ ಎಂದರು.
40 ದಿನದ ಯಾತ್ರೆ ವೇಳೆ ಶಬರಿಮಲೆ ದೇಗುಲಕ್ಕೆ 223 ಕೋಟಿ ಆದಾಯ: ಜ.14ರಂದು ಮಕರಜ್ಯೋತಿ ದರ್ಶನ
ರೈತರು ವ್ಯವಸಾಯ ಉದ್ದೇಶಕ್ಕೆ ಬಳಕೆ ಮಾಡಿಕೊಂಡಿದ್ದ ದಾಖಲೆ ರಹಿತ ಜಮೀನುಗಳಿಗೆ ಭೂಮಿ ಮಂಜೂರು ಮಾಡುವ ಮೂಲಕ ಭೂ ಕಬಳಿಕೆ ಹಣೆಪಟ್ಟಿಯಿಂದ ರೈತರನ್ನು ಮುಕ್ತಿಗೊಳಿಸಲಾಗುತ್ತಿದೆ. ಅರ್ಜಿ ಸಲ್ಲಿಸಿದ ಕನಿಷ್ಠ 7 ದಿನಗಳ ಒಳಗೆ ಭೂ ಪರಿವರ್ತನೆ ಮಾಡುವ ನಿಟ್ಟಿನಲ್ಲಿ ಅಧಿವೇಶನದಲ್ಲಿ ನಿರ್ಧಾರ ತೆಗೆದುಕೊಂಡು ಅನುಷ್ಠಾನಗೊಳಿಸಲಾಗಿದೆ ಎಂದು ತಿಳಿಸಿದರು.