ಬೆಂಗಳೂರು : ಜನರ ಉತ್ಸಾಹ, ಒತ್ತಾಸೆ, ಒತ್ತಡ, ಸಚಿವರ ಅಪೇಕ್ಷೆಗೆ ತಲೆಬಾಗಿ ಆಗಸ್ಟ್ 28 ರಂದು ದೊಡ್ಡಬಳ್ಳಾಪುರದಿಂದಲೇ ಜನೋತ್ಸವಕ್ಕೆ ಚಾಲನೆ ನೀಡಲು ನಿರ್ಧರಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದ್ದಾರೆ.
ಹರ್ ಘರ್ ತಿರಂಗ ಅಭಿಯಾನದ ಹಿನ್ನೆಲೆಯಲ್ಲಿ ಆರ್.ಟಿ. ನಗರದ ತಮ್ಮ ನಿವಾಸದ ಬಳಿ ಧ್ವಜಾರೋಹಣ ನೆರವೇರಸಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಗಸ್ಟ್ 28 ರಂದು ದೊಡ್ಡಬಳ್ಳಾಪುರದಿಂದಲೇ ಜನೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುವುದು ಎಂದರು.
ಸರ್ಕಾರದ ಮೂರು ವರ್ಷಗಳ ಸಾಧನೆ ಬಗ್ಗೆ ಉತ್ಸವದ ಮೂಲಕ ಸಂಭ್ರಮಿಸಲು ಜನರು ತಯಾರಾಗಿದ್ದಾರೆ. ಎಲ್ಲ ಸಿದ್ಧತೆಗಳು ಮಾಡಲಿದ್ದೇವೆ ಎಂದು ಆ ಭಾಗದ ಜನರು, ಸಚಿವ ಡಾ.ಕೆ.ಸುಧಾಕರ್ ಇನ್ನಿತರರು ಮನವಿ ಮಾಡಿಕೊಂಡ ಕಾರಣ ಆ.28ರಂದು ಜನೋತ್ಸವ ಆಯೋಜನೆಗೆ ಸಮ್ಮತಿಸಲಾಗಿದೆ ಎಂದು ತಿಳಿಸಿದ್ದಾರೆ.
ಜನೋತ್ಸವ ಕಾರ್ಯಕ್ರಮದ ಕುರಿತು ಇಂದು ಕೇಂದ್ರ ನಾಯಕರ ಜೊತೆಗೆ ಚರ್ಚಿಸಿದ ಬಳಿಕ ಯಾರೆಲ್ಲ ಭಾಗವಹಿಸಲಿದ್ದಾರೆ ಎನ್ನುವುದು ತಿಳಿಯಲಿದೆ ಎಂದು ಹೇಳಿದ್ದಾರೆ.
BIGG BREAKING NEWS : ಹನಿಟ್ರಾಪ್ ಆರೋಪ : ಸ್ಯಾಂಡಲ್ ವುಡ್ ನ ಉದಯೋನ್ಮುಖ ನಟ ಅರೆಸ್ಟ್!