ಕೆಎನ್ಎನ್ಡಿಜಿಟಲ್ ಡೆಸ್ಕ್ : ಪ್ರತಿ ವರ್ಷ ಹೆಚ್ಚಿನ ಪ್ರಮಾಣದಲ್ಲಿ ವಿದೇಶಕ್ಕೆ ಹೋಗುವ ಭಾರತೀಯ ನಾಗರಿಕರು ಈಗ ತಮ್ಮ ಜೇಬುಗಳನ್ನ ಹೆಚ್ಚು ಸಡಿಲಗೊಳಿಸಬೇಕಾಗಬಹುದು. ಯುಎಸ್ ಅಧ್ಯಕ್ಷ ಜೋ ಬಿಡನ್ ನೇತೃತ್ವದ ಆಡಳಿತವು H1-B ವೀಸಾಗಳ ಶುಲ್ಕವನ್ನು ಹೆಚ್ಚಿಸುವ ಪ್ರಸ್ತಾಪವನ್ನು ಮುಂದಿಟ್ಟಿದೆ.
ಈ ಪ್ರಸ್ತಾಪವು ಭಾರತೀಯ ವೃತ್ತಿಪರರ ಮೇಲೆ ಹೆಚ್ಚು ಪರಿಣಾಮ ಬೀರುವ ನಿರೀಕ್ಷೆಯಿದೆ. ಯಾಕಂದ್ರೆ, ಈಗ ಅವರು ವಿದೇಶಕ್ಕೆ ಹೋಗಲು ಹೆಚ್ಚು ಹಣವನ್ನ ಖರ್ಚು ಮಾಡಬೇಕಾಗುತ್ತದೆ. US ಪೌರತ್ವ ಮತ್ತು ವಲಸೆ ಸೇವೆಗಳು (USCIS) ಬುಧವಾರ (ಜನವರಿ 5) H-1B ವೀಸಾದ ಅರ್ಜಿ ಶುಲ್ಕವನ್ನು US $ 460 ರಿಂದ US $ 780 ಗೆ ಹೆಚ್ಚಿಸಲು ಪ್ರಸ್ತಾಪಿಸಿದೆ.
ಇದಲ್ಲದೆ, ಬಿಡೆನ್ ಆಡಳಿತವು ಎಲ್ -1 ವರ್ಗದ ವೀಸಾದ ಶುಲ್ಕವನ್ನು US $460 ರಿಂದ US $1,385 ಗೆ ಹೆಚ್ಚಿಸಲು ತಯಾರಿ ನಡೆಸುತ್ತಿದೆ. ಆದ್ರೆ, O-1 ವೀಸಾದ ಅರ್ಜಿ ಶುಲ್ಕವನ್ನ US $460 ರಿಂದ US $1,055 ಗೆ ಹೆಚ್ಚಿಸಲು ಪ್ರಸ್ತಾಪಿಸಲಾಗಿದೆ.
H1-B ವೀಸಾ ಎಂದರೇನು?
H-1B ವೀಸಾ ವಲಸೆ ರಹಿತ ವೀಸಾ ಆಗಿದೆ, ಈ ವೀಸಾದ ಮೂಲಕ ಅಮೆರಿಕನ್ ಕಂಪನಿಗಳು ವಿದೇಶಿ ಉದ್ಯೋಗಿಗಳನ್ನ USಗೆ ಕರೆಸಬಹುದು. ಈ ವೀಸಾದ ಮೂಲಕ, ಅಮೇರಿಕನ್ ಟೆಕ್ ಕಂಪನಿಗಳು ಹೆಚ್ಚಾಗಿ ಭಾರತೀಯ ಮತ್ತು ಚೈನೀಸ್ ಟೆಕ್ ವೃತ್ತಿಪರರನ್ನ ನೇಮಿಸಿಕೊಳ್ಳುತ್ವೆ. ಈ ವೀಸಾದ ಮೂಲಕ ಅವ್ರನ್ನ ತನ್ನ ದೇಶಕ್ಕೆ ಕರೆಸಿಕೊಳ್ಳುತ್ತಾರೆ.
‘ಚಹಾ’ ಕುಡಿಯೋ ಮೊದ್ಲು & ನಂತ್ರ ಈ ‘ಆಹಾರ’ ತಿನ್ನುವ ಅಭ್ಯಾಸ ನಿಮಗಿದ್ಯಾ.? ಮಿಸ್ ಮಾಡ್ದೇ ಈ ಸ್ಟೋರಿ ಓದಿ
BREAKING NEWS : ‘ಕಾಶ್ಮೀರ, ದೆಹಲಿ-ಎನ್ಸಿಆರ್, ಅಫ್ಘಾನಿಸ್ತಾನ’ದಲ್ಲೂ ಪ್ರಬಲ ಭೂಕಂಪ ; ಆತಂಕದಲ್ಲಿ ಜನ |Earthquake