ಶಿವಮೊಗ್ಗ : ಕಾಂಗ್ರೆಸ್ ಪಕ್ಷದಲ್ಲಿ ಸಿದ್ದರಾಮೋತ್ಸವದ ಮೂಲಕ ವ್ಯಕ್ತಿಪೂಜೆ ಶುರುವಾಗಿದ್ದು, ಬಿಜೆಪಿ ಟೀಕಿಸುವ ಸಿದ್ದರಾಮಯ್ಯ ಇದಕ್ಕೆ ಉತ್ತರ ನೀಡಬೇಕು ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಮುಂದಿನ ಚುನಾವಣೆಯಲ್ಲಿ ಸ್ಪರ್ಧಿಸಲು ಯಾವ ಕ್ಷೇತ್ರ ಎನ್ನುವುದು ಇನ್ನೂ ಫಿಕ್ಸ್ ಆಗಿಲ್ಲ. ದಿನಕೊಂದು ಕ್ಷೇತ್ರದಲ್ಲಿ ಸ್ಪರ್ಧೆ ಕುರಿತು ಚರ್ಚೆ ಮಾಡಲಾಗುತ್ತಿದೆ. ಇಂತಹ ಸಿದ್ದರಾಮಯ್ಯಗೆ ಆಡಂಬರ ಬೇಕೇ? ಎಂದು ಸಿದ್ದರಾಮೋತ್ಸವದ ಕುರಿತು ಲೇವಡಿ ಮಾಡಿದ್ದಾರೆ.
ಇನ್ನು ಸಿದ್ದರಾಮಯ್ಯ ಕೊನೆಗೆ ಮುಸ್ಲಿಂ ಮತದಾರರು ಹೆಚ್ಚು ಇರುವ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಾರೆ. ಸಿದ್ದರಾಮಯ್ಯ ಜಮೀರ್ ಕಾಲಿಗೆ ಹೋಗಿ ಬೀಳುತ್ತಾರೆ.ಸಿದ್ದಾರಾಮೋತ್ಸವ ಬಳಿಕ ಕಾಂಗ್ರೆಸ್ ಪರಿಸ್ಥಿತಿ ಏನಾಗುತ್ತದೆ ಕಾದು ನೋಡಿ. ಇದು ಸಿದ್ದರಾಮಯ್ಯ ಕೊನೆಯ ನಾಟಕ ಎಂದು ವಾಗ್ದಾಳಿ ನಡೆಸಿದ್ದಾರೆ.
ಸಮಾಜವಾದಿ, ಕುವೆಂಪು ಅವರ ಬಗ್ಗೆ ಮಾತನಾಡುವ ಸಿದ್ದರಾಮಯ್ಯ ಅವರ ಜನ್ಮ ದಿನಕ್ಕೆ 75 ಕೋಟಿ ರೂ. ವೆಚ್ಚ ಮಾಡಲಾಗುತ್ತಿದೆ. ಇಷ್ಟು ವೆಚ್ಚ ಮಾಡುವ ಬದಲಿಗೆ ನೆರೆ ಸಂತ್ರಸ್ತರಿಗೆ ಮನೆ ಕಟ್ಟಿಕೊಡಬಹುದು. ಇಷ್ಟೊಂದು ಆಡಂಬರ ಸಿದ್ದರಾಮಯ್ಯರಿಗೆ ಅಗತ್ಯವಿಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.