ಬೆಂಗಳೂರು : ರಾಜ್ಯ ಬಿಜೆಪಿ ಸರ್ಕಾರಕ್ಕೆ ಜನೋತ್ಸವದ ಬದಲಾಗಿ ಜನಾಕ್ರೋಶದದ ದರ್ಶನವಾಗಿದೆ ಎಂದು ರಾಜ್ಯ ಸರ್ಕಾರದ ವಿರುದ್ಧ ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಈ ಕುರಿತು ಟ್ವೀಟ್ ಮಾಡಿರುವ ಕಾಂಗ್ರೆಸ್, ಮಧ್ಯರಾತ್ರಿಯ ಯೂಟರ್ನ್ ಗಳ ವೃತ್ತಾಂತಗಳು ರಾಜ್ಯ ಬಿಜೆಪಿ ಸರ್ಕಾರಕ್ಕೆ ಹೊಸದೇನೂ ಅಲ್ಲ. ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್ಗಾಗಿ ರಾತ್ರಿಯವರೆಗೂ ಕಾದಿತ್ತು. ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ, ಜನೋತ್ಸವದ ಬದಲಾಗಿ ಜನಾಕ್ರೋಶದ ದರ್ಶನವಾಗಿದೆ ಈ ಸರ್ಕಾರಕ್ಕೆ ಎಂದು ಕಿಡಿಕಾರಿದೆ.
ಮಧ್ಯರಾತ್ರಿಯ ಯೂಟರ್ನ್ಗಳ ವೃತ್ತಾಂತಗಳು @BJP4Karnataka ಸರ್ಕಾರಕ್ಕೆ ಹೊಸದೇನೂ ಅಲ್ಲ.
ಸರ್ಕಾರಿ ಕಚೇರಿಗಳಲ್ಲಿನ ಚಿತ್ರೀಕರಣ ವಿಷಯದಲ್ಲೂ ಸರ್ಕಾರ ಹೀಗೆಯೇ ಯೂಟರ್ನ್ಗಾಗಿ ರಾತ್ರಿಯವರೆಗೂ ಕಾದಿತ್ತು.ಬಹುಶಃ ಈ ಸರ್ಕಾರಕ್ಕೆ ಜ್ಞಾನೋದಯವಾಗಲು ರಾತ್ರಿಯೇ ಆಗಬೇಕೇನೋ!
ಜನೋತ್ಸವದ ಬದಲಾಗಿ #JanaAkrosha ದ ದರ್ಶನವಾಗಿದೆ ಈ ಸರ್ಕಾರಕ್ಕೆ.
— Karnataka Congress (@INCKarnataka) July 28, 2022
ತಮ್ಮ ಸರ್ಕಾರದ ವೈಫಲ್ಯಗಳೇ ಮುಖ್ಯಮಂತ್ರಿಗಳ ನಿದ್ದೆಗೆಡುವಂತೆ ಮಾಡಿದೆ. ಜನರಿಗೆ ನಿದ್ದೆಗೆಡುವಂತ ಆಡಳಿತ ನೀಡಿದಾಗ ಜನರೂ ಸರ್ಕಾರದ ನಿದ್ದೆಗೆಡಿಸುತ್ತಾರೆ ಎನ್ನಲು ಮಧ್ಯರಾತ್ರಿಯ ಪತ್ರಿಕಾಗೋಷ್ಟಿಯೇ ಸಾಕ್ಷಿ. ಜನೋತ್ಸವವನ್ನು ರದ್ದುಗೊಳಿಸಿದ್ದು ಜನಾಕ್ರೋಶದ ಕಾರಣಕ್ಕೆ ಹೊರತು ಮೃತನ ಮೇಲಿನ ಗೌರವದಿಂದಲ್ಲ ಎಂದು ಹೇಳಿದೆ.
ತಮ್ಮ ಸರ್ಕಾರದ ವೈಫಲ್ಯಗಳೇ ಮುಖ್ಯಮಂತ್ರಿಗಳ ನಿದ್ದೆಗೆಡುವಂತೆ ಮಾಡಿದೆ.
ಜನರಿಗೆ ನಿದ್ದೆಗೆಡುವಂತ ಆಡಳಿತ ನೀಡಿದಾಗ ಜನರೂ ಸರ್ಕಾರದ ನಿದ್ದೆಗೆಡಿಸುತ್ತಾರೆ ಎನ್ನಲು ಮಧ್ಯರಾತ್ರಿಯ ಪತ್ರಿಕಾಗೋಷ್ಟಿಯೇ ಸಾಕ್ಷಿ.
ಜನೋತ್ಸವವನ್ನು ರದ್ದುಗೊಳಿಸಿದ್ದು #JanaAkrosha ದ ಕಾರಣಕ್ಕೆ ಹೊರತು ಮೃತನ ಮೇಲಿನ ಗೌರವದಿಂದಲ್ಲ.
— Karnataka Congress (@INCKarnataka) July 28, 2022