ಬೆಂಗಳೂರು : ಐಟಿ ದೈತ್ಯ ಇನ್ಫೋಸಿಸ್ ತನ್ನ ಉದ್ಯೋಗಿಗಳಿಗೆ ‘ಮೂನ್ಲೈಟ್’ ಬಗ್ಗೆ ಗಂಭೀರ ಎಚ್ಚರಿಕೆ ನೀಡಿದೆ. ಎಚ್ ಆರ್ ಎಲ್ಲಾ ಉದ್ಯೋಗಿಗಳಿಗೆ ಕಳುಹಿಸಿದ ಇ-ಮೇಲ್ʼನಲ್ಲಿ, ನೀತಿ ಸಂಹಿತೆಯ ದೃಷ್ಟಿಯಿಂದ ‘ಮೂನ್ ಲೈಟಿಂಗ್’ ಅನುಮತಿಸಲಾಗುವುದಿಲ್ಲ ಎಂದು ಹೇಳಲಾಗಿದೆ. ಈ ನಿಯಮದ ಉಲ್ಲಂಘನೆಯು ಕೆಲಸದಿಂದ ವಜಾ ಮಾಡುವುದು ಸೇರಿದಂತೆ ಕಠಿಣ ಶಿಸ್ತು ಕ್ರಮಕ್ಕೆ ಕಾರಣವಾಗಬಹುದು. ಈ ಇ-ಮೇಲ್ʼಗೆ ‘ನೋ ಟು ಟೈಮಿಂಗ್, ನೋ ‘ಮೂನ್ ಲೈಟಿಂಗ್’ ಎಂದು ಶೀರ್ಷಿಕೆ ನೀಡಲಾಗಿದೆ.
ಏನಿದು ‘ಮೂನ್ ಲೈಟಿಂಗ್’.?
ವಿಪ್ರೋದ ಅಜೀಂ ಪ್ರೇಮ್ ಜಿ ‘ಮೂನ್ ಲೈಟಿಂಗ್’ ಅನ್ನು ವಂಚನೆ ಎಂದು ಕರೆದ ನಂತ್ರ ಇನ್ಫೋಸಿಸ್ ಎಚ್ ಆರ್ʼನಿಂದ ಇ-ಮೇಲ್ ಬಂದಿದೆ. ‘ಮೂನ್ ಲೈಟಿಂಗ್’ ಅಡಿಯಲ್ಲಿ, ಉದ್ಯೋಗಿಗಳಿಗೆ ಕೆಲವು ಸಂದರ್ಭಗಳಲ್ಲಿ ತಮ್ಮ ಕೆಲಸಗಳನ್ನ ಮಾಡುವುದನ್ನ ಹೊರತುಪಡಿಸಿ ಇತರ ಅರೆಕಾಲಿಕ ಕೆಲಸಗಳನ್ನ ಮಾಡಲು ಅನುಮತಿಸಲಾಗುತ್ತದೆ.
ಸೋಮವಾರ ಬಿಡುಗಡೆಯಾದ ಈ ಇ-ಮೇಲ್ನಲ್ಲಿ, ಇನ್ಫೋಸಿಸ್ ಸ್ಪಷ್ಟವಾಗಿ ಉದ್ಯೋಗಿಗಳಿಗೆ ಕಂಪನಿಯ ನಿಗದಿತ ಕೆಲಸದ ಸಮಯವನ್ನ ಹೊರತುಪಡಿಸಿ ಯಾವುದೇ ಕಂಪನಿ ಅಥವಾ ವ್ಯಕ್ತಿಗೆ ಕೆಲಸ ಮಾಡಲು ಅನುಮತಿಸಲಾಗುವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದೆ. ಏಕಕಾಲದಲ್ಲಿ ಎರಡು ಘಟಕಗಳಿಗಾಗಿ ಕೆಲಸ ಮಾಡುವವರನ್ನ ಕಠಿಣ ಶಿಸ್ತು ಕ್ರಮ ಸೇರಿದಂತೆ ಎಲ್ಲಾ ರೀತಿಯಲ್ಲೂ ನಿರುತ್ಸಾಹಗೊಳಿಸಲಾಗುವುದು ಎಂದು ವರದಿ ಮಾಡಿದೆ.
ಕಂಪನಿಯು ಅಂತಹ ಕ್ರಮ ಏಕೆ ತೆಗೆದುಕೊಂಡಿತು.?
ಇನ್ಫೋಸಿಸ್ ಉದ್ಯೋಗಿಗಳಿಗೆ ನೀಡಲಾದ ಆಫರ್ ಪತ್ರದ ಕೆಲವು ಷರತ್ತುಗಳನ್ನ ಇ-ಮೇಲ್ ಉಲ್ಲೇಖಿಸಿದೆ. ಇದರ ಪ್ರಕಾರ, ಇನ್ಫೋಸಿಸ್ ಉದ್ಯೋಗಿಗಳು ಇನ್ಫೊಸಿಸ್ ಆಡಳಿತ ಮಂಡಳಿಯ ಅನುಮತಿಯಿಲ್ಲದೇ ಇನ್ಫೊಸಿಸ್ನ ಯಾವುದೇ ಕಂಪನಿಯ ನಿರ್ದೇಶಕರು / ಪಾಲುದಾರರು / ಸದಸ್ಯರು ಅಥವಾ ಉದ್ಯೋಗಿಗಳಾಗಿ ಪೂರ್ಣಾವಧಿ ಅಥವಾ ಅರೆಕಾಲಿಕವಾಗಿ ಕೆಲಸ ಮಾಡುವಂತಿಲ್ಲ, ಏಕೆಂದರೆ ‘ಮೂನ್ಲೈಟ್’ ಕಂಪನಿಯ ಉತ್ಪಾದಕತೆ ಮತ್ತು ಹಿತಾಸಕ್ತಿಗಳ ಮೇಲೆ ಪರಿಣಾಮ ಬೀರುವುದಲ್ಲದೇ, ಕಂಪನಿಯ ರಹಸ್ಯ ಮಾಹಿತಿಯನ್ನ ವಿನಿಮಯ ಮಾಡಿಕೊಳ್ಳುವ ಸಾಧ್ಯತೆಯೂ ಹೆಚ್ಚುತ್ತಿದೆ.