ನವದೆಹಲಿ : ರೈಲು ಪ್ರಯಾಣದ ಸಮಯದಲ್ಲಿ ಅಪಘಾತದಿಂದ ಉಂಟಾದ ಶಾಶ್ವತ ಅಂಗವೈಕಲ್ಯ ಅಥವಾ ಗಾಯಗಳಿಂದ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಪ್ರಯಾಣಿಕರ ವೆಚ್ಚವನ್ನುಭರಿಸಲು ಭಾರತೀಯ ರೈಲ್ವೆ ಇತ್ತೀಚೆಗೆ ಹೊಸ ವಿಮಾ ಯೋಜನೆಯನ್ನ ಪರಿಚಯಿಸಿದೆ. ಅಪಘಾತದಲ್ಲಿ ಸಾವನ್ನಪ್ಪಿದ ಪ್ರಯಾಣಿಕರ ಅವಲಂಬಿತರು ಮತ್ತು ಕುಟುಂಬದ ಸದಸ್ಯರಿಗೆ ಹೆಚ್ಚಿನ ಆರ್ಥಿಕ ಸದೃಢತೆ ಹಾಗೂ ಮುಂದೆ ಅವರು ಸಂಕಷ್ಟಕ್ಕೆ ಸಿಲುಕದಂತೆ ತಡೆಯುವ ಉದ್ದೇಶದಿಂದ ರೈಲ್ವೆ ಇಲಾಖೆ ವಿಮಾ ಯೋಜನೆ ಜಾರಿಗೆ ತಂದಿದೆ. ಇದಕ್ಕಾಗಿ 10 ಲಕ್ಷದವರೆಗೆ ಕವರೇಜ್ ನೀಡಲಾಗುತ್ತದೆ. ಈ ವಿಮೆಯನ್ನ ರೈಲ್ವೆ ಇಲಾಖೆಯು ರೈಲ್ವೆಯ ಆಪರೇಷನಲ್ ಇನ್ಶೂರೆನ್ಸ್ ಸ್ಕೀಮ್ ಅಡಿಯಲ್ಲಿ ಘೋಷಿಸಿದೆ. ಇನ್ನು ರೈಲ್ವೆ ಇಲಾಖೆಯು ಈ ವಿಮಾ ಸೇವೆಗಳನ್ನ ಒದಗಿಸುವ ಕಂಪನಿಗಳ ಪಟ್ಟಿಯನ್ನ ಸಹ ಅಂತಿಮಗೊಳಿಸಿದೆ.
ಯಾವ ಕಂಪನಿಗಳು ವಿಮಾ ಸೇವೆಗಳನ್ನ ಒದಗಿಸುತ್ತವೆ?
ಕೆಲ ತಿಂಗಳ ಹಿಂದೆ ರೈಲ್ವೆ ಇಲಾಖೆ ವಿಮಾ ಸೇವೆ ಒದಗಿಸುವ ಟೆಂಡರ್ ಪ್ರಕ್ರಿಯೆ ನಡೆಸಿತ್ತು. ಸುಮಾರು 19 ವಿಮಾ ಕಂಪನಿಗಳು ಬಿಡ್ಡಿಂಗ್ನಲ್ಲಿ ಭಾಗವಹಿಸಿದ್ದವು. ಇವುಗಳಲ್ಲಿ, ವಿಮಾ ಯೋಜನೆ ಸೇವೆಗಳನ್ನ ಒದಗಿಸಲು ರೈಲ್ವೆ ಇಲಾಖೆಯು ಶ್ರೀರಾಮ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್, ರಾಯಲ್ ಸುಂದರಂ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಮತ್ತು ಐಸಿಐಸಿಐ ಲೊಂಬಾರ್ಡ್ ಜನರಲ್ ಇನ್ಶುರೆನ್ಸ್ ಕಂಪನಿ ಲಿಮಿಟೆಡ್ ಅಂತಿಮಗೊಳಿಸಿದೆ. ಮಾನದಂಡಗಳನ್ನ ಪೂರೈಸಲು ವಿಫಲವಾದ ಉಳಿದ ಕಂಪನಿಗಳನ್ನ ಬಿಡ್ಡಿಂಗ್ ಪ್ರಕ್ರಿಯೆಯಿಂದ ತೆಗೆದುಹಾಕಲಾಗಿದೆ.
ಪ್ರಯೋಜನಗಳೇನು?
ರೈಲ್ವೆ ಇಲಾಖೆಯ ಈ ವಿಮಾ ಯೋಜನೆಯಿಂದ ಹಲವು ಪ್ರಯೋಜನಗಳಿವೆ. ಪ್ರಯಾಣಿಕರು ಟಿಕೆಟ್ ತೆಗೆದುಕೊಳ್ಳುವ ಸಮಯದಲ್ಲಿ 1 ರೂಪಾಯಿ ಪಾವತಿಸಿದ್ರೆ, ಈ ವಿಮೆ ಸೌಲಭ್ಯವನ್ನ ಪಡೆಯಬಹುದು. ಪ್ರಯಾಣದ ವೇಳೆ ಮೃತಪಟ್ಟರೆ ಕುಟುಂಬಕ್ಕೆ 10 ಲಕ್ಷ ರೂಪಾಯಿ. ಶಾಶ್ವತ ಅಂಗವಿಕಲರಾದ್ರೆ, 10 ಲಕ್ಷದವರೆಗೆ ಪರಿಹಾರ. ಆಂಶಿಕ ಅಂಗವೈಕಲ್ಯವಿದ್ದಲ್ಲಿ 7.5 ಲಕ್ಷ ರೂಪಾಯಿ, ತೀವ್ರ ಗಾಯಗೊಂಡು ಆಸ್ಪತ್ರೆಗೆ ಸೇರಿದರೆ 5 ಲಕ್ಷ ರೂಪಾಯಿ. ನಿಮ್ಮ ರೈಲು ಟಿಕೆಟ್ ಬುಕ್ ಮಾಡುವಾಗ ನೀವು ಒಂದು ವಿಷಯವನ್ನ ನೆನಪಿನಲ್ಲಿಟ್ಟುಕೊಳ್ಳಬೇಕು. ನೀವು ಅಪ್ಲಿಕೇಶನ್ ಮೂಲಕ ಸ್ಲೀಪರ್ ಅಥವಾ ಇತರ ಕಾಯ್ದಿರಿಸುವಿಕೆಯನ್ನ ಮಾಡಿದಾಗ ಈ ವಿಮೆ ಲಭ್ಯವಿದೆ. ನೀವು ಆಫ್ಲೈನ್ ಕಾಯ್ದಿರಿಸುವಿಕೆಯನ್ನು ಮಾಡಿದರೆ ಅಂದರೆ ನೀವು ರೈಲ್ವೆ ಟಿಕೆಟ್ ಕೌಂಟರ್ನಿಂದ ಟಿಕೆಟ್ ಕಾಯ್ದಿರಿಸಿದರೆ, ಫಾರ್ಮ್ನಲ್ಲಿ ವಿಮೆ ಆಯ್ಕೆ ಇರುತ್ತದೆ.
BREAKING NEWS : ಬಾರ್ ಮಾಲೀಕರ ಜೊತೆ ಡೀಲ್ : ಅಬಕಾರಿ ಮಹಿಳಾ ಅಧಿಕಾರಿ ‘ಜ್ಯೋತಿ ಮೇತ್ರಿ’ ಸಸ್ಪೆಂಡ್
Alert: ಈ ಸಣ್ಣ ತಪ್ಪಿನಿಂದಾಗಿ, ಮೊಬೈಲ್ ಫೋನ್ ಸ್ಫೋಟಗೊಳ್ಳುತ್ತದೆ, ಹೀಗೆ ಮಾಡಬೇಡಿ