ನವದೆಹಲಿ : ಟೆಸ್ಲಾ ಭಾರತಕ್ಕೆ ಬರಬಹುದು, ವಾಹನಗಳನ್ನ ಮಾರಾಟ ಮಾಡಬಹುದು. ಆದ್ರೆ, ಭಾರತ ಸರ್ಕಾರವು ಷರತ್ತುಗಳನ್ನ ಅನ್ವಯಿಸಿದೆ. ಎಲೋನ್ ಮಸ್ಕ್ ಅವರ ಟೆಸ್ಲಾ ಭಾರತೀಯ ಮಾರುಕಟ್ಟೆಯನ್ನ ಪ್ರವೇಶಿಸಲು ಎಲ್ಲಾ ರೀತಿಯ ಪ್ರಯತ್ನಗಳನ್ನ ಮಾಡಿದೆ. ಆದರೆ ಸರ್ಕಾರದ ನಿಯಮ ಮತ್ತು ಷರತ್ತುಗಳಿಂದ ಹಿನ್ನಡೆಯಾಯಿತು. ಈ ಬಗ್ಗೆ ಇದೀಗ ಕೇಂದ್ರ ಸಚಿವ ನಿತಿನ್ ಗಡ್ಕರಿ ಪ್ರತಿಕ್ರಿಯೆ ನೀಡಿದ್ದಾರೆ. ಎಲೋನ್ ಮಸ್ಕ್ ಭಾರತದಲ್ಲಿ ಎಲೆಕ್ಟ್ರಿಕ್ ಕಾರುಗಳನ್ನು ಮಾರಾಟ ಮಾಡಲು ಪ್ರಾರಂಭಿಸಿದರೆ, ನಾನು ಖಂಡಿತವಾಗಿಯೂ ಅವರನ್ನ ಸ್ವಾಗತಿಸುತ್ತೇನೆ ಎಂದು ಕೇಂದ್ರ ಸಚಿವ ನಿತಿನ್ ಗಡ್ಕರಿ ಹೇಳಿದ್ದಾರೆ.
ಆದರೆ, ಎಲ್ಲಾ ಭಾಗಗಳನ್ನು ಭಾರತದಲ್ಲಿಯೇ ತಯಾರಿಸಬೇಕು ಎಂಬ ಷರತ್ತು ವಿಧಿಸಲಾಗಿತ್ತು. ಚೀನಾದಲ್ಲಿ ಅಥವಾ ಬೇರೆ ದೇಶದಲ್ಲಿ ತಯಾರಿಸಿ ಇಲ್ಲಿ ಮಾರಾಟ ಮಾಡಲು ಸಾಧ್ಯವಿಲ್ಲ ಎಂದರು. ಇನ್ನು ಭಾರತದ ಯಾವುದೇ ರಾಜ್ಯದಲ್ಲಿ ಉತ್ಪಾದನಾ ಘಟಕಗಳನ್ನ ಸ್ಥಾಪಿಸಲು ಕೇಂದ್ರವು ಸಹಕರಿಸುತ್ತದೆ. ಇನ್ನು ಎಲ್ಲ ರಿಯಾಯಿತಿಗಳನ್ನ ನೀಡಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ. ಭಾರತದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ವಾರ್ಷಿಕ 7.5 ಲಕ್ಷ ಕೋಟಿ ರೂಪಾಯಿ ವ್ಯವಹಾರ ನಡೆಯುತ್ತಿದೆ ಎಂದ ಅವರು, ಭಾರತವು ವಿಶ್ವದಲ್ಲೇ ಅತಿ ದೊಡ್ಡ ಆಟೋಮೊಬೈಲ್ ಹಬ್ ಆಗಿ ಅಭಿವೃದ್ಧಿ ಹೊಂದಲಿದೆ ಎಂದು ಹೇಳಿದರು.
ಕೇಂದ್ರ ಹಾಗೂ ರಾಜ್ಯ ಸರಕಾರಗಳಿಗೆ ತೆರಿಗೆ ರೂಪದಲ್ಲಿ ಹೆಚ್ಚು ಆದಾಯ ತಂದುಕೊಡುವ ಕ್ಷೇತ್ರ ಇದಾಗಿದೆ ಎಂದ ಗಡ್ಕರಿ, ಈ ಕ್ಷೇತ್ರದ ಮೂಲಕ ಸುಮಾರು 4 ಕೋಟಿ ಜನರು ಉದ್ಯೋಗ ಪಡೆಯುತ್ತಿದ್ದಾರೆ. ಎಲೆಕ್ಟ್ರಿಕ್ ಕಾರುಗಳನ್ನ ಅಮೆರಿಕ ಮತ್ತು ಚೀನಾದಲ್ಲಿ ಟೆಸ್ಲಾ ಉತ್ಪಾದಿಸುತ್ತದೆ. ಇವುಗಳನ್ನು ಭಾರತಕ್ಕೆ ಆಮದು ಮಾಡಿ ಮಾರಾಟ ಮಾಡಲು ಕೆಲ ಸಮಯದಿಂದ ಪ್ರಯತ್ನಿಸುತ್ತಿದೆ. ಭಾರತದಲ್ಲಿ ವಿದೇಶಿ ನಿರ್ಮಿತ ಕಾರುಗಳನ್ನ ಮಾತ್ರ ಮಾರಾಟ ಮಾಡಲಾಗುವುದು ಮತ್ತು ನಂತರವಷ್ಟೇ ಸ್ಥಳೀಯವಾಗಿ ಉತ್ಪಾದನಾ ಘಟಕವನ್ನ ಸ್ಥಾಪಿಸಲಾಗುವುದು ಎಂದು ಎಲೋನ್ ಮಸ್ಕ್ ಈ ಹಿಂದೆ ಹೇಳಿದ್ದರು. ಆದರೆ, ಮೇಕ್-ಇನ್-ಇಂಡಿಯಾಗೆ ಆದ್ಯತೆ ನೀಡುವ ಭಾರತ ಸರ್ಕಾರ, ಎಲಾನ್ ಮಸ್ಕ್ ಅವರ ಪ್ರಸ್ತಾಪಗಳಿಗೆ ಒಪ್ಪಿಗೆ ನೀಡಿಲ್ಲ. ಪರಿಣಾಮವಾಗಿ, ಟೆಸ್ಲಾ ತನ್ನ ಪ್ರಯತ್ನಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಿತು.
ಕಾಂಗ್ರೆಸ್ ಹೈಕಮಾಂಡ್ ಸೂಚನೆ ಬೆನ್ನಲ್ಲೇ ಸಿದ್ದು-ಡಿಕೆಶಿ ಒಗ್ಗಟ್ಟಿನ ಮಂತ್ರ: ಒಟ್ಟಿಗೆ ಬಸ್ ಯಾತ್ರೆಯ ಘೋಷಣೆ
BIGG NEWS : ಚೀನಾ ಅತಿಕ್ರಮಣಕ್ಕೆ ಯತ್ನಿಸಿದಾಗ ಮುಖಾಮುಖಿ ಘರ್ಷಣೆ ಶುರುವಾಯ್ತು ; ಸೇನಾಧಿಕಾರಿಗಳಿಂದ ಮಾಹಿತಿ