ಕೇಪ್ಟೌನ್ : ದಕ್ಷಿಣ ಆಫ್ರಿಕಾದ ಕೇಪ್ಟೌನ್ನಲ್ಲಿ ಜನವರಿ 22ರಿಂದ ಆರಂಭವಾಗಲಿರುವ ನಾಲ್ಕು ರಾಷ್ಟ್ರಗಳ ಸರಣಿಗೆ 26 ಸದಸ್ಯರ ಭಾರತ ಹಾಕಿ ತಂಡವನ್ನ ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. ಪಂದ್ಯಾವಳಿಯಲ್ಲಿ ಫ್ರಾನ್ಸ್, ನೆದರ್ಲ್ಯಾಂಡ್ಸ್, ಭಾರತ ಮತ್ತು ಆತಿಥೇಯ ದಕ್ಷಿಣ ಆಫ್ರಿಕಾ ತಂಡಗಳು ಭಾಗವಹಿಸಲಿವೆ. ಭಾರತ ತಂಡವನ್ನ ಹರ್ಮನ್ ಪ್ರೀತ್ ಸಿಂಗ್ ಮುನ್ನಡೆಸಲಿದ್ದು, FIH ವರ್ಷದ ಆಟಗಾರ ಪ್ರಶಸ್ತಿ ವಿಜೇತ ಹಾರ್ದಿಕ್ ಸಿಂಗ್ ಉಪನಾಯಕನ ಜವಾಬ್ದಾರಿಯನ್ನು ಹೊರಲಿದ್ದಾರೆ. ಯುವ ಆಟಗಾರರಾದ ಅರೈಜೀತ್ ಸಿಂಗ್ ಹುಂಡಾಲ್ ಮತ್ತು ಬಾಬಿ ಸಿಂಗ್ ಧಾಮಿ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ಗೋಲ್ ಕೀಪರ್ ಗಳಾದ ಪಿ.ಆರ್.ಶ್ರೀಜೇಶ್, ಕೃಷ್ಣ ಪಾಠಕ್ ಮತ್ತು ಪವನ್, ಡಿಫೆಂಡರ್ ಗಳಾದ ಜರ್ಮನ್ ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಅಮಿತ್ ರೋಹಿದಾಸ್, ಹರ್ಮನ್ ಪ್ರೀತ್ ಸಿಂಗ್, ವರುಣ್ ಕುಮಾರ್, ಸುಮಿತ್, ಸಂಜಯ್ ಮತ್ತು ರಬಿಚಂದ್ರ ಸಿಂಗ್ ಮೊಯಿರಾಂಗ್ ಥೆಮ್ ಅವರನ್ನ ತಂಡಕ್ಕೆ ಸೇರಿಸಿಕೊಳ್ಳಲಾಗಿದೆ.
ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ರಾಜ್ ಕುಮಾರ್ ಪಾಲ್, ಶಂಶೇರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಹಾರ್ದಿಕ್ ಸಿಂಗ್ ಮತ್ತು ಮನ್ ಪ್ರೀತ್ ಸಿಂಗ್ ಅವರನ್ನು ತಂಡಕ್ಕೆ ಆಯ್ಕೆ ಮಾಡಲಾಗಿದೆ. ಫಾರ್ವರ್ಡ್ ಸಾಲಿನಲ್ಲಿ ಮನ್ದೀಪ್ ಸಿಂಗ್, ಅಭಿಷೇಕ್, ಸುಖ್ಜೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶ್ದೀಪ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಬಾಬಿ ಸಿಂಗ್ ಧಾಮಿ ಇದ್ದಾರೆ.
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಭಾರತ ತಂಡ ಇಂತಿದೆ.!
ಗೋಲ್ ಕೀಪರ್ಸ್ : ಶ್ರೀಜೇಶ್ ಪರಟ್ಟು ರವೀಂದ್ರನ್, ಕೃಷ್ಣ ಬಹದ್ದೂರ್ ಪಾಠಕ್, ಪವನ್
ಡಿಫೆಂಡರ್ಸ್ : ಹರ್ಮನ್ಪ್ರೀತ್ ಸಿಂಗ್ (ನಾಯಕ), ಜರ್ಮನ್ಪ್ರೀತ್ ಸಿಂಗ್, ಜುಗ್ರಾಜ್ ಸಿಂಗ್, ಅಮಿತ್ ರೋಹಿದಾಸ್, ವರುಣ್ ಕುಮಾ, ಸುಮಿತ್, ಸಂಜಯ್, ರಬಿಚಂದ್ರ ಸಿಂಗ್, ಮೊಯಿರಾಂಗ್ಥೆಮ್
ಮಿಡ್ ಫೀಲ್ಡರ್ಸ್ : ವಿವೇಕ್ ಸಾಗರ್ ಪ್ರಸಾದ್, ನೀಲಕಂಠ ಶರ್ಮಾ, ರಾಜ್ ಕುಮಾರ್ ಪಾಲ್, ಶಂಶೇರ್ ಸಿಂಗ್, ವಿಷ್ಣುಕಾಂತ್ ಸಿಂಗ್, ಹಾರ್ದಿಕ್ ಸಿಂಗ್ (ಉಪನಾಯಕ), ಮನ್ ಪ್ರೀತ್ ಸಿಂಗ್
ಫಾರ್ವರ್ಡ್ಸ್ : ಮನ್ದೀಪ್ ಸಿಂಗ್, ಅಭಿಷೇಕ್, ಸುಖ್ಜೀತ್ ಸಿಂಗ್, ಗುರ್ಜಂತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಆಕಾಶ್ದೀಪ್ ಸಿಂಗ್, ಅರೈಜೀತ್ ಸಿಂಗ್ ಹುಂಡಾಲ್, ಬಾಬಿ ಸಿಂಗ್ ಧಾಮಿ.
ಮಕ್ಕಳ ಸುರಕ್ಷತೆಗಾಗಿ ‘ಮೆಟಾ’ ಮಹತ್ವದ ಹೆಜ್ಜೆ : ಇನ್ಮುಂದೆ ಈ ರೀತಿಯ ವಿಷಯ ‘ಫೇಸ್ಬುಕ್’ನಲ್ಲಿ ಕಾಣಿಸೋದಿಲ್ಲ
BREAKING : ‘ಸ್ಪೀಕರ್ ತೀರ್ಪು’ ಪ್ರಶ್ನಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಶಿವಸೇನೆ ನಾಯಕ ‘ಉದ್ಧವ್ ಠಾಕ್ರೆ’