ಬೆಂಗಳೂರು : ರಾಜ್ಯ ಸರ್ಕಾರಿ ನೌಕರರಿಗೆ ಸರ್ಕಾರವು ಮಹತ್ವದ ಮಾಹಿತಿಯೊಂದನ್ನು ನೀಡಿದ್ದು, ರಾಜ್ಯ ಸರ್ಕಾರಿ ನೌಕರರು, ಕಟುಂಬಸ್ಥರ ಆಸ್ತಿ ವಿವರ ಸಲ್ಲಿಕೆ ಅವಧಿ ಮಾರ್ಚ್ 31 ಕ್ಕೆ ನಿಗದಿ ಮಾಡಲು ನಿರ್ಧರಿಸಿದೆ.
BIGG NEWS : ಡಿ.17 ರಂದು ಸ್ವಕ್ಷೇತ್ರ ಶಿಗ್ಗಾಂವಿಯ ಬಾಡದಲ್ಲಿ ಸಿಎಂ ಬೊಮ್ಮಾಯಿ `ಗ್ರಾಮವಾಸ್ತವ್ಯ’!
ರಾಜ್ಯ ಸರ್ಕಾರವು ಕರ್ನಾಟಕ ರಾಜ್ಯ ನಾಗರಿಕ ಸೇವಾ ನಿಯಮಗಳಿಗೆ ತಿದ್ದುಪಡಿ ತಂದು ಸರ್ಕಾರಿ ನೌಕರರ ಆಸ್ತಿ ವಿವರ ಸಲ್ಲಿಕೆಯನ್ನು ಮಾರ್ಚ್ 31 ಕ್ಕೆ ಪರಿಗಣಿಸಲು ನಿರ್ಧರಿಸಿದೆ ಎನ್ನಲಾಗಿದೆ. ಸರ್ಕಾರಿ ನೌಕರರು, ಕುಟುಂಬಸ್ಥರ ಆಸ್ತಿ ಮತ್ತು ಹೊಣೆಗಾರಿಕೆಗಳ ವಾರ್ಷಿಕ ಮಾಹಿತಿಯನ್ನು ಪ್ರತಿ ವರ್ಷ ಡಿಸೆಂಬರ್ 31 ರೊಳಗೆ ಸರ್ಕಾರಕ್ಕೆ ಸಲ್ಲಿಸಬೇಕಾಗಿದೆ.
ಸೇವಾ ನಿಯಮದ ಪ್ರಕಾರ ಡಿಸೆಂಬರ್ 31 ರೊಳಗೆ ಆಸ್ತಿ ವಿವರ ಸಲ್ಲಿಕೆ ಮಾಡಬೇಕಿದೆ. ಆದಾಯ ತೆರಿಗೆ ಪಾವತಿ ಮಾರ್ಚ್ 31 ಪರಿಗಣಿಸುವುದರಿಂದ ಸರ್ಕಾರ ನೌಕರರಿಗೂ ಆಸ್ತಿ ವಿವರ ಸಲ್ಲಿಕೆ ಅವಧಿಯನ್ನು ಮಾರ್ಚ್ 31 ಕ್ಕೆ ಪರಿಗಣಿಸಬೇಕು ಎಂಬ ಮನವಿ ಕೇಳಿಬಂದಿದೆ.