ಬೆಂಗಳೂರು: ವಿದ್ಯಾರ್ಥಿಗಳಿಗೆ ಅನುಕೂಲಕರವಾಗುವ ನಿಟ್ಟಿನಲ್ಲಿ, 2022-23ನೇ ಸಾಲಿನ ಶೈಕ್ಷಣಿಕ ವರ್ಷದಿಂದ ಎಸ್ ಎಸ್ ಎಲ್ ಸಿ ಪರೀಕ್ಷಾ ( SSLC Exam) ಪ್ರಶ್ನೆಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಸರಳಗೊಳಿಸಲಾಗಿದೆ.
BIGG NEWS : ಸರ್ಕಾರಿ ಕಚೇರಿಗಳಲ್ಲಿ ಫೋಟೋ/ವಿಡಿಯೋ ವಿಚಾರ : ಸಿಎಂ ಬೊಮ್ಮಾಯಿ ಹೇಳಿದ್ದೇನು ಗೊತ್ತಾ?
ಈ ಕುರಿತಂತೆ ಕರ್ನಾಟಕ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿ ( Karnataka Secondary Education Examination Board ) ಸುತ್ತೋಲೆ ಹೊರಡಿಸಿದ್ದು, 2015-16ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆಪತ್ರಿಕೆ ( SSLC Exam Question Paper ) ವಿನ್ಯಾಸ ಹಾಗೂ ನೀಲನಕಾಶೆಯನ್ನು ಪರಿಷ್ಕರಿಸಲಾಗಿತ್ತು. 2019-20ನೇ ಸಾಲಿನಲ್ಲಿ ಪ್ರಶ್ನೆಪತ್ರಿಕೆ ಸ್ವರೂಪದಲ್ಲಿ ಅಲ್ಪ ಬದಲಾವಣೆ ಮಾಡಿ, ಕಠಿಣತೆ ಮಟ್ಟದಲ್ಲಿ ಯಾವುದೇ ಬದಲಾವಣೆ ಮಾಡಿರಿಲ್ಲ ಎಂದು ತಿಳಿಸಿದೆ.
2020-21ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ಕೋವಿಡ್ 2ನೇ ಅಲೆಯ ಕಾರಣ ವಿದ್ಯಾರ್ಥಿಗಳ ಸುರಕ್ಷತಾ ಮತ್ತು ಶೈಕ್ಷಣಿಕ ಹಿತದೃಷ್ಠಿಯಿಂದ ಪರೀಕ್ಷೆಯನ್ನು ಸರಳೀಕರಿಸಿ, ಎರಡು ದಿನಗಳಲ್ಲಿ ಬಹುಆಯ್ಕೆ ಪ್ರಶ್ನೆ ಆಧರಿತವಾಗಿ ನಡೆಸಲಾಗಿತ್ತು.
2021-22ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ರಾಜ್ಯದ ಶಾಲೆಗಳು ಭೌತಿಕವಾಗಿ 2-3 ತಿಂಗಳು ವಿಳಂಬವಾಗಿ ಪ್ರಾರಂಭಗೊಂಡ ಕಾರಣ, ವಿದ್ಯಾರ್ಥಿಗಳ ಶೈಕ್ಷಣಿಕ ಹಿತದೃಷ್ಠಿಯಿಂದ ಶೇ.20ರಷ್ಟು ಪಠ್ಯವಸ್ತು ಕಡಿತಗೊಳಿಸಲಾಗಿದ್ದ ಹಿನ್ನಲೆಯಲ್ಲಿ 2019-20ನೇ ಸಾಲಿನಲ್ಲಿದ್ದಂತೆಯೇ ಪ್ರಶ್ನೆಪತ್ರಿಕೆಯ ಮಾದರಿಯಲ್ಲಿ ಬದಲಾವಣೆಯನ್ನು ಮಾಡದೇ, ಪ್ರಶ್ನೆ ಪತ್ರಿಕೆಯ ಕಠಿಣತೆಯ ಮಟ್ಟವನ್ನು ಸುಲಭ ಪ್ರಶ್ನೆಗಳು ಶೇ.40ರಷ್ಟು, ಸಾಧಾರಣ ಪ್ರಶ್ನೆಗಳು ಶೇ.50ರಷ್ಟು, ಕಠಿಣ ಪ್ರಶ್ನೆಗಳು ಶೇ.10 ಮಾಡಿ ಆದೇಶಿಸಲಾಗಿತ್ತು.
ಇದೀಗ 2022-23ನೇ ಶೈಕ್ಷಣಿಕ ವರ್ಷಕ್ಕೆ ದಿನಾಂಕ 16-05-2022ರಿಂದಲೇ ಪೂರ್ಣ ಪ್ರಮಾಣದಲ್ಲಿ ಶಾಲೆಗಳು ಭೌತಿಕವಾಗಿ ಪ್ರಾರಂಭಿಸಲಾಗಿರುವ ಹಿನ್ನಲೆಯಲ್ಲಿ, 2022-23ನೇ ಸಾಲಿನಿಂದ ಶಾಲಾ ವಿದ್ಯಾರ್ಥಿಗಳಾಗಿ ಎಸ್ ಎಸ್ ಎಲ್ ಸಿ ಪರೀಕ್ಷೆಗೆ ಕುಳಿತುಕೊಳ್ಳಲು ಶಾಲೆಯು ಕಾರ್ಯ ನಿರ್ವಹಿಸಲು ನಿಗದಿಪಡಿಸಿರುವ ದಿನಗಳ ಅನುಸಾರ, ಕನಿಷ್ಠ ಶೇ.75ರಷ್ಟು ಹಾಜರಾತಿ ಕಡ್ಡಾಯಗೊಳಿಸಿರುವುದನ್ನು ಯಥಾ ರೀತಿ ಮುಂದುವರೆಸಿ ದಿನಾಂಕ 30-06-2022ರಂದು ಸುತ್ತೋಲೆ ಹೊರಡಿಸಲಾಗಿರುತ್ತದೆ.
ಈ ಹಿನ್ನಲೆಯಲ್ಲಿ 2019-20ನೇ ಸಾಲಿನ ಎಸ್ ಎಸ್ ಎಲ್ ಸಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸ್ವರೂಪ ಮತ್ತು ಕಠಿಣತೆಯ ಮಟ್ಟವನ್ನು ಯಾವುದೇ ಬದಲಾವಮೆ ಮಾಡದೇ, ಪ್ರಸಕ್ತ 2022-23ನೇ ಸಾಲಿನಿಂದ ಅದೇ ವರ್ಗೀಕರಣದಂತೆ ಯಥಾ ರೀತಿ ಮುಂದುವರೆಸಿದೆ ಎಂದು ತಿಳಿಸಿದೆ.
ವರದಿ : ವಸಂತ ಬಿ ಈಶ್ವರಗೆರೆ
ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ಬಹುಮುಖ್ಯ ಮಾಹಿತಿ: ಜು.18ರಿಂದ ಬಿಎಂಟಿಸಿಯಿಂದ ವಿದ್ಯಾರ್ಥಿ ರಿಯಾಯಿತಿ ಪಾಸ್ ವಿತರಣೆ