ನವದೆಹಲಿ : ದೇಶದಲ್ಲಿ ಬಡತನ ರೇಖೆಗಿಂತ ಕೆಳಗಿರುವ ಜನರಿಗಾಗಿ ಕೇಂದ್ರ ಹಾಗೂ ರಾಜ್ಯ ಸರಕಾರಗಳು ಹಲವು ಯೋಜನೆಗಳನ್ನ ಜಾರಿಗೊಳಿಸುತ್ತಿವೆ. ಈ ಯೋಜನೆಗಳಲ್ಲಿ ಪ್ರಮುಖವಾದದ್ದು ಪಡಿತರ ಚೀಟಿ. ಸರ್ಕಾರ ದೇಶದ ಸುಮಾರು 80 ಕೋಟಿ ಜನರಿಗೆ ಪಡಿತರ ಚೀಟಿ ಮೂಲಕ ಉಚಿತ ಪಡಿತರವನ್ನ ನೀಡುತ್ತಿದೆ. ಆಧಾರ್ ಕಾರ್ಡ್ನಂತೆ ಪಡಿತರ ಚೀಟಿ ಹಲವು ಕೆಲಸಗಳಿಗೆ ಬಹಳ ಮುಖ್ಯವಾಗಿದ್ದು, ಪಡಿತರ ಚೀಟಿಯಲ್ಲಿ ಕುಟುಂಬದ ಪ್ರತಿಯೊಬ್ಬರ ಹೆಸರು ನೋಂದಣಿಯಾಗಿದೆ. ಆದ್ರೆ, ಪಡಿತರ ಚೀಟಿ ಬಳಕೆ ಹೆಚ್ಚಾಗುತ್ತಿರುವುದರಿಂದ ಕಾಲಕಾಲಕ್ಕೆ ನವೀಕರಿಸಲು ಸರಕಾರ ಸೂಚಿಸುತ್ತಿದೆ. ಇತ್ತೀಚೆಗೆ, ಪಡಿತರ ಚೀಟಿಯಲ್ಲಿ ಅಗತ್ಯ ನವೀಕರಣಗಳಿಗಾಗಿ ಸರ್ಕಾರ ಹಲವಾರು ಸೂಚನೆಗಳನ್ನ ನೀಡಿದೆ. ಆ ನವೀಕರಣಗಳನ್ನ ಮಾಡದಿದ್ದರೆ, ತೊಂದರೆಗಳನ್ನ ಎದುರಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ. ಪಡಿತರ ಚೀಟಿ ಫಲಾನುಭವಿಗಳು ತಮ್ಮ ಮೊಬೈಲ್ ಸಂಖ್ಯೆಯನ್ನು ತಮ್ಮ ಕಾರ್ಡ್ಗೆ ಲಿಂಕ್ ಮಾಡಲು ಸೂಚಿಸಲಾಗಿದೆ.
ಮೊಬೈಲ್ ಸಂಖ್ಯೆ ನವೀಕರಣ.!
ಪಡಿತರ ಚೀಟಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನ ನವೀಕರಿಸಲು ಸರ್ಕಾರ ಸೂಚಿಸಿದೆ. ಪಡಿತರ ಚೀಟಿ ಫಲಾನುಭವಿಗಳು ಆಗಾಗ ತಮ್ಮ ದೂರವಾಣಿ ಸಂಖ್ಯೆ ಬದಲಿಸಿಕೊಳ್ಳುತ್ತಾರೆ. ಇದರಿಂದ ಪಡಿತರ ಚೀಟಿಗೆ ತೊಂದರೆಯಾಗುತ್ತದೆ. ಪಡಿತರ ಚೀಟಿಗೆ ಸಂಬಂಧಿಸಿದ ನವೀಕರಣಗಳ ವಿವರಗಳನ್ನ ಪಡೆಯಲು ಅವರಿಗೆ ಸಾಧ್ಯವಾಗುವುದಿಲ್ಲ. ಈ ಹಿನ್ನೆಲೆಯಲ್ಲಿ ಪಡಿತರ ಚೀಟಿಯಲ್ಲಿನ ಮೊಬೈಲ್ ನಂಬರ್ ಅಪ್ ಡೇಟ್ ಮಾಡುವುದು ಅತೀ ಅಗತ್ಯವಾಗಿದೆ. ನಿಮ್ಮ ಪಡಿತರ ಚೀಟಿ ಹಳೆಯ ನಂಬರ್ ಹೊಂದಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ನೀವು ಈಗ ನಿಮ್ಮ ಮೊಬೈಲ್ ಸಂಖ್ಯೆಯನ್ನು ನವೀಕರಿಸಬಹುದು. ಈಗ ನೋಡೋಣ.
ಆನ್ಲೈನ್ನಲ್ಲಿ ಸಂಖ್ಯೆ ನವೀಕರಸ್ಬೋದು.!
* ಪ್ರತಿ ರಾಜ್ಯಕ್ಕೂ ಪ್ರತ್ಯೇಕ ಪಡಿತರ ಚೀಟಿ ನೀಡಲಾಗುತ್ತದೆ.
* ಪಡಿತರ ಚೀಟಿಯಲ್ಲಿ ಮೊಬೈಲ್ ಸಂಖ್ಯೆಯನ್ನ ನವೀಕರಿಸಲು ಬಯಸಿದರೆ.. ನಿಮ್ಮ ರಾಜ್ಯದ ಪಡಿತರ ಕಾರ್ಡ್ ವೆಬ್ಸೈಟ್ಗೆ ಭೇಟಿ ನೀಡಿ.
* ಉದಾಹರಣೆಗೆ ದೆಹಲಿಯಲ್ಲಿ ವಾಸಿಸುತ್ತಿದ್ದರೆ, ಪಡಿತರ ಕಾರ್ಡ್ ಅನ್ನು ನವೀಕರಿಸಲು ಮೊದಲು https://nfs.karnatakagovt.nic.in/Citizen/UpdateMobileNumber.aspx ವೆಬ್ಸೈಟ್ ಕ್ಲಿಕ್ ಮಾಡಿ.
* ಅದರ ನಂತರ ನೀವು ಪುಟದಲ್ಲಿ ‘ನೋಂದಾಯಿತ ಮೊಬೈಲ್ ಸಂಖ್ಯೆಯನ್ನು ನವೀಕರಿಸಿ’ ಆಯ್ಕೆಯನ್ನು ನೋಡುತ್ತೀರಿ.ಅದರ ಮೇಲೆ ಕ್ಲಿಕ್ ಮಾಡಿ.
* ಅದರ ನಂತರ ಪಡಿತರ ಚೀಟಿದಾರರು ಆಧಾರ್ ಸಂಖ್ಯೆ, ಪಡಿತರ ಚೀಟಿ ಸಂಖ್ಯೆ, ಹೊಸ ಮೊಬೈಲ್ ಸಂಖ್ಯೆ ಸೇರಿದಂತೆ ಅಗತ್ಯ ಮಾಹಿತಿಯನ್ನು ಭರ್ತಿ ಮಾಡಬೇಕು.
* ಅದರ ನಂತರ ಕ್ಯಾಪ್ಚಾ ಕೋಡ್ ಅನ್ನು ನಮೂದಿಸಿ ಮತ್ತು ಸೇವ್ ಆಯ್ಕೆಯನ್ನು ಕ್ಲಿಕ್ ಮಾಡಿ.
* ಇದರ ನಂತರ ಹೊಸ ಮೊಬೈಲ್ ಸಂಖ್ಯೆಯನ್ನು ನಿಮ್ಮ ಪಡಿತರ ಚೀಟಿಯಲ್ಲಿ ನವೀಕರಿಸಲಾಗುತ್ತದೆ.
ಆಫ್ಲೈನ್ನಲ್ಲಿ ಮೊಬೈಲ್ ಸಂಖ್ಯೆ ನವೀಕರಿಸೋದು ಹೇಗೆ.?
ಪಡಿತರ ಚೀಟಿಯಲ್ಲಿರುವ ಮೊಬೈಲ್ ಸಂಖ್ಯೆಯನ್ನ ಆನ್ಲೈನ್ ಅಷ್ಟೇ ಅಲ್ಲ ಆಫ್ಲೈನ್ ಪ್ರಕ್ರಿಯೆಯ ಮೂಲಕವೂ ನವೀಕರಿಸಬಹುದು. ಇದಕ್ಕಾಗಿ ಮೊದಲು ರಾಜ್ಯ ಆಹಾರ ಇಲಾಖೆಗೆ ಅರ್ಜಿ ಸಲ್ಲಿಸಬೇಕು. ಈ ಅರ್ಜಿಯನ್ನ ರಾಜ್ಯ ಆಹಾರ ಪ್ರಾಧಿಕಾರಕ್ಕೆ ನೀಡಬೇಕು. ಪಡಿತರ ಚೀಟಿಯ ನಕಲು, ನಿಮ್ಮ ಮೊಬೈಲ್ ಸಂಖ್ಯೆಯನ್ನು ಸಹ ನಮೂದಿಸಬೇಕಾಗುತ್ತದೆ. ಆದ್ದರಿಂದ ನಿಮ್ಮ ಎಲ್ಲಾ ವಿವರಗಳನ್ನ ಪರಿಶೀಲಿಸಿದ ನಂತ್ರ ಮೊಬೈಲ್ ಸಂಖ್ಯೆಯನ್ನ ನವೀಕರಿಸಲಾಗುತ್ತದೆ.