ಬೆಂಗಳೂರು : ಸಾರ್ವಜನಿಕ ಶಿಕ್ಷಣ ಇಲಾಖೆಯ ವಿವಿಧ ಕಚೇರಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಬೋಧಕೇತರ ವೃಂದದ ಅಧಿಕಾರಿ ನೌಕರರ ವಿವರ ಸಲ್ಲಿಸುತ್ತಿರುವ ಕುರಿತಂತೆ ಸಿಬ್ಬಂದಿಗಳಿಗೆ ಶಿಕ್ಷಣ ಇಲಾಖೆ ಮಹತ್ವದ ಮಾಹಿತಿಯೊಂದನ್ನು ನೀಡಿದೆ.
BIG NEWS : ಲಘು ಯುದ್ಧ ಹೆಲಿಕಾಪ್ಟರ್ ‘ಪ್ರಚಂಡ್’ ಹಾರಾಟಕ್ಕೆ ಮಹಿಳಾ ಅಧಿಕಾರಿಗಳ ನೇಮಕ | LCH Prachand
ಬೆಂಗಳೂರು ಮತ್ತು ಮೈಸೂರು ವಿಭಾಗದ ಎಲ್ಲಾ ಕಛೇರಿ/ಶಾಲೆಗಳಲ್ಲಿ ಕೆಲಸ ನಿರ್ವಹಿಸುತ್ತಿರುವ ಬೋಧಕೇತರ ಅಧಿಕಾರಿ/ನೌಕರರುಗಳ ಪೈಕಿ ಒಂದೇ ಕಛೇರಿ/ಶಾಲೆಗಳಲ್ಲಿ ಸತತವಾಗಿ ಒಂದೇ ಹುದ್ದೆಯಲ್ಲಿ ಒಟ್ಟಾರೆ 5 ವರ್ಷ ಮೇಲ್ಪಟ್ಟು ಹಾಗೂ ಒಂದು ಹುದ್ದೆಯಿಂದ ಇನ್ನೊಂದು ಹುದ್ದೆಗೆ ಪದೋನ್ನತಿ ಹೊಂದಿದ್ದಲ್ಲಿ ಒಟ್ಟು 8 ವರ್ಷ ಮೇಲ್ಪಟ್ಟ ಸೇವೆ ಸಲ್ಲಿಸುತ್ತಿರುವ ವಿವರಗಳನ್ನು ಈ ಪತ್ರದೊಂದಿಗೆ ಅನುಬಂಧಿಸಿದ ನಮೂನೆಯಲ್ಲಿ ಸಂಬಂಧಿಸಿದ ಜಿಲ್ಲಾ ಉಪನಿರ್ದೇಶಕರು ರಾಜ್ಯ ವೃಂದದ ಕಛೇರಿ ಮುಖ್ಯಸ್ಥರುಗಳು ತಮ್ಮ ಅಧೀನ ಕಛೇರಿಗಳಿಂದ ಮಾಹಿತಿ ಪಡೆದು ದೃಢೀಕರಿಸಿ ದಿನಾಂಕ 20-10-2022 ರಂದು ಬೆಳಗ್ಗೆ 11. ಗಂಟೆಯ ಒಳಗಾಗಿ obcpi2016 @gmail.com ಮಿಂಚಂಚೆ ವಿಳಾಸಕ್ಕೆ ಎಕ್ ಸ್ಲ್ ಸಾಫ್ಟ್ ಪ್ರತಿ ಹಾಗೂ ದೃಢೀಕೃತ ಪ್ರತಿಯನ್ನು ಕಛೇರಿಗೆ ತಪ್ಪದೇ ಸಲ್ಲಿಸಲು ತಿಳಿಸಿದೆ.