ಬೆಂಗಳೂರು: ಬಿಎಂಟಿಸಿಯಿಂದ 2023ನೇ ಸಾಲಿನ ವಿಕಲಚೇತನರ ರಿಯಾಯಿತಿ ಬಸ್ ಪಾಸ್ ವಿತರಿಸುವ ಹಾಗೂ ನವೀಕರಣಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಈ ಬಗ್ಗೆ ಪತ್ರಿಕಾ ಪ್ರಕಟಣೆಯಲ್ಲಿ ಮಾಹಿತಿ ಹಂಚಿಕೊಂಡಿದ್ದು, ಬೆಂ.ಮ.ಸಾ.ಸಂಸ್ಥೆಯು ಸಾಮಾಜಿಕ ಹೊಣೆಗಾರಿಕೆಯಡಿಯಲ್ಲಿ ಸರ್ಕಾರದ ನಿರ್ದೇಶನದಂತೆ ವಿಕಲಚೇತನರ ರಿಯಾಯಿತಿ ದರದ ಬಸ್ ಪಾಸ್ ಕೋರಿ ಅರ್ಜಿ ಸಲ್ಲಿಸುವ ಎಲ್ಲಾ ಅರ್ಹ ವಿಕಲಚೇತನ ಫಲಾನುಭವಿಗಳಿಗೂ ರಿಯಾಯಿತಿ ದರದಲ್ಲಿ ಪಾಸುಗಳನ್ನು ವಿತರಿಸುತ್ತಿದೆ ಎಂದಿದೆ.
2023ನೇ ಸಾಲಿನ ವಿಕಲಚೇನತರ ಪಾಸಿಗಾಗಿ ಅರ್ಹ ಫಲಾನುಭವಿಗಳು ಸೇವಾಸಿಂಧು ಪೋರ್ಟಲ್ https://sevasindhuservices.karnataka.gov.in ಮೂಲಕ ಆನ್ಲೈನ್ ಅರ್ಜಿ ಸಲ್ಲಿಸಲು ದಿನಾಂಕ 26.12.2022 ರಿಂದ ಅವಕಾಶ ಕಲ್ಪಿಸಲಾಗಿದೆ. ಅರ್ಹ ಫಲಾನುಭವಿಗಳು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಿ, ತದನಂತರ ತಾವು ಆಯ್ಕೆ ಮಾಡಿಕೊಂಡ ಬಸ್ ನಿಲ್ದಾಣಗಳಿಗೆ ತೆರಳಿ ದಾಖಲೆಗಳನ್ನು ಸಲ್ಲಿಸಿ, ಪಾಸುಗಳನ್ನು ಪಡೆಯಲು ಅವಕಾಶ ಕಲ್ಪಿಸಲಾಗಿದೆ ಎಂದು ಹೇಳಿದೆ.
BREAKING NEWS : ಕಾಟಿಪಳ್ಳದ ಸ್ವಗೃಹಕ್ಕೆ ತಲುಪಿದ ಹತ್ಯೆಯಾದ ಜಲೀಲ್ ಮೃತದೇಹ : ಅಂತ್ಯಕ್ರಿಯೆಗೆ ಸಕಲ ಸಿದ್ಧತೆ
2023ನೇ ಸಾಲಿನ ವಿಕಲಚೇತನರ ರಿಯಾಯಿತಿ ಪಾಸುಗಳನ್ನು ದಿನಾಂಕ 26.12.2022 ರಿಂದ ಕೆಳಕಂಡಂತೆ ವಿತರಿಸಲು/ನವೀಕರಿಸಲು ಕ್ರಮ ಕೈಗೊಳ್ಳಲಾಗಿದೆ.
- ವಿಕಲಚೇತನರ ನೂತನ ಪಾಸುಗಳನ್ನು ವರ್ಷವಿಡಿ ವಿತರಣೆ ಮಾಡಲಾಗುವುದು.
- ಕಳೆದ ಸಾಲಿನ ವಿಕಲಚೇತನರ ಬಸ್ ಪಾಸುಗಳನ್ನು ದಿನಾಂಕ:28.02.2023 ರ ಒಳಗೆ ನವೀಕರಿಸಿಕೊಳ್ಳುವುದು.
- ವಿಕಲಚೇತನರ ರಿಯಾಯಿತಿ ಪಾಸಿನ ದರ ರೂ.660/-.
- ವಿಕಲಚೇತನರ ರಿಯಾಯಿತಿ ಬಸ್ ಪಾಸುಗಳನ್ನು ಫಲಾನುಭವಿಗಳು ಬಂದು ನವೀಕರಿಸಿಕೊಳ್ಳಲು ಅನುಕೂಲವಾಗುವಂತೆ ಸಾಕಷ್ಟು ಕಾಲಮಿತಿ ನೀಡುವ ಉದ್ದೇಶದಿಂದ 2022 ನೇ ಸಾಲಿನಲ್ಲಿ ವಿತರಿಸಿ 12.2022ರವರೆಗೆ ಮಾನ್ಯತೆ ಇರುವ ವಿಕಲಚೇತನರ ಪಾಸುಗಳನ್ನು 28.02.2023 ರವರೆಗೆ ಮಾನ್ಯ ಮಾಡಲಾಗುವುದು.
- ವಿಕಲಚೇತನರ ನೂತನ ಪಾಸುಗಳನ್ನು ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಮಾತ್ರ ವಿತರಣೆ ಮಾಡಲಾಗುವುದು.
- ಕಳೆದ ಸಾಲಿನ ವಿಕಲಚೇತನರ ಬಸ್ ಪಾಸುಗಳನ್ನು ಈ ಕೆಳಕಂಡ ಬಸ್ ನಿಲ್ದಾಣಗಳಲ್ಲಿ ನವೀಕರಿಸಲಾಗುವುದು ಎಂದು ತಿಳಿಸಿದೆ.