ಕೆಎನ್ಎನ್ಡಿಜಿಟಲ್ ಡೆಸ್ಕ್ : IMDb ಈ ವರ್ಷದ ಟಾಪ್ 10 ಚಲನಚಿತ್ರಗಳು ಮತ್ತು ವೆಬ್ ಸರಣಿಗಳ ವಾರ್ಷಿಕ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಈ ಪಟ್ಟಿಯಲ್ಲಿ ಒಂದೇ ಒಂದು ಹಿಂದಿ ಚಿತ್ರ ಸ್ಥಾನ ಪಡೆದಿದೆ. ಇದರ ಹೊರತಾಗಿ ಉಳಿದ ಇತರ ಭಾಷೆಗಳ ಒಂಬತ್ತು ಚಿತ್ರಗಳು, ಅದ್ರಲ್ಲೂ ವಿಶೇಷವಾಗಿ ಕನ್ನಡ ಚಿತ್ರಗಳು ವಿಶೇಷ ಸ್ಥಾನಮಾನ ಪಡೆದಿವೆ.
ಬಲವಾದ ಕಥಾವಸ್ತು ಮತ್ತು ಸ್ಕ್ರಿಪ್ಟ್ ಬರವಣಿಗೆಯೊಂದಿಗೆ ಅತ್ಯುತ್ತಮವಾದ ಕಥೆ ಕಥೆಯಿಂದಾಗಿ ದಕ್ಷಿಣದ ಚಲನಚಿತ್ರಗಳು ಈ ವರ್ಷ ಪ್ರಾಬಲ್ಯ ಸಾಧಿಸಿವೆ. ವಿಶೇಷವೆಂದರೆ ಐಎಂಡಿಬಿ ಬಿಡುಗಡೆ ಮಾಡಿರುವ ಟಾಪ್ ಲಿಸ್ಟ್’ನಲ್ಲಿ ಒಂದೇ ಒಂದು ಹಿಂದಿ ಚಿತ್ರ ಸ್ಥಾನ ಪಡೆದಿದೆ.
ಬಾಲಿವುಡ್ ಚಿತ್ರ ‘ದಿ ಕಾಶ್ಮೀರ್ ಫೈಲ್ಸ್’ ಟಾಪ್ 10ನಲ್ಲಿ ಸ್ಥಾನ ಪಡೆದ ಚಿತ್ರವಾಗಿದೆ. ಈ ಸಿನಿಮಾ ತನ್ನ ವಿವಾದಗಳಿಗೆ ಮಾತ್ರವಲ್ಲ, ಕಾಶ್ಮೀರಿ ಪಂಡಿತರು ಅನುಭವಿಸಿದ ಕಷ್ಟಗಳ ಕಠೋರ ಸತ್ಯಗಳನ್ನು ಚಿತ್ರಿಸುವ ಮೂಲಕ ಪ್ರೇಕ್ಷಕರ ಹೃದಯವನ್ನ ಮುಟ್ಟುವಲ್ಲಿಯೂ ಸುದ್ದಿಯಾಗಿತ್ತು.
IMDb 2022 ರಲ್ಲಿ ಭಾರತದಲ್ಲಿನ ಅಗ್ರ ಹತ್ತು ಜನಪ್ರಿಯ ಭಾರತೀಯ ಚಲನಚಿತ್ರಗಳ ಪಟ್ಟಿಯನ್ನು ಬುಧವಾರ ಬಿಡುಗಡೆ ಮಾಡಿದೆ ಮತ್ತು ರಾಮ್ ಚರಣ್-ಜೂನಿಯರ್ NTR ಅಭಿನಯದ RRR ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅದೇ ಸಮಯದಲ್ಲಿ, ಅನುಪಮ್ ಖೇರ್ ಅವರ ದಿ ಕಾಶ್ಮೀರ್ ಫೈಲ್ಸ್ ಮತ್ತು ನಟ ಯಶ್ ಅವರ ಕೆಜಿಎಫ್ 2 ಎರಡು ಮತ್ತು ಮೂರನೇ ಸ್ಥಾನವನ್ನ ಪಡೆದಿವೆ.
IMDb ಟಾಪ್ 10 ಚಲನಚಿತ್ರಗಳ ಪಟ್ಟಿ ಇಂತಿದೆ.!
1. RRR
2. ಕಾಶ್ಮೀರ ಫೈಲ್ಸ್ (The Kashmir Files)
3. ಕೆಜಿಎಫ್ ಚಾಪ್ಟರ್ 2 (K.G.F: Chapter 2)
4. ವಿಕ್ರಮ್ (Vikram)
5. ಕಾಂತಾರ (Kantara)
6. ರಾಕೆಟ್ರಿ : ನಂಬಿ ಎಫೆಕ್ಟ್ (Rocketry: The Nambi Effect)
7. ಮೇಜರ್ (Major)
8. ಸೀತಾ ರಾಮನ್ (Sita Raman)
9. ಪೊನ್ನಿಯಿನ್ ಸೆಲ್ವನ್: ಭಾಗ 1 (Ponniyin Selvan: Part One)
10. 777 ಚಾರ್ಲಿ (777 Charlie)
BIGG NEWS : ಭುಗಿಲೆದ್ದ’ಪಠಾಣ್’ ಕೇಸರಿ ಬಿಕಿನಿ ವಿವಾದ : ದೀಪಿಕಾ ಪಡುಕೋಣೆ ಪರ ಮೋಹಕ ನಟಿ ‘ರಮ್ಯಾ’ ಬ್ಯಾಟಿಂಗ್
ಬಿಜೆಪಿಗೆ ಗೊತ್ತಿರುವುದು ಕನ್ನ ಹಾಕೋದು ಮಾತ್ರ ಅನ್ನ ಹಾಕುವುದಲ್ಲ : ಟ್ವೀಟ್ ನಲ್ಲಿ ಕಾಂಗ್ರೆಸ್ ಕಿಡಿ
ರೈಲ್ವೇಯಲ್ಲಿ 2500ಕ್ಕೂ ಹೆಚ್ಚು ಖಾಲಿ ಹುದ್ದೆಗಳು ; ಅರ್ಜಿ ಸಲ್ಲಿಕೆಗೆ ನಾಳೆಯೇ ಕೊನೆ ದಿನ, ತಕ್ಷಣ ಅರ್ಜಿ ಸಲ್ಲಿಸಿ