ಕಲಬುರಗಿ : ಪಿಎಸ್ ಐ ಹಗರಣದಲ್ಲಿ ಅಧಿಕಾರಿಗಳನ್ನು ಬಂಧಿಸಿದರೆ ಸಾಲದು ಅವರಿಗೆ ಮಂಪರು ಪರೀಕ್ಷೆ ಮಾಡಬೇಕು ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
BREAKING NEWS: ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗೆ ಕೋವಿಡ್ ಪಾಸಿಟಿವ್; ಆಸ್ಪತ್ರೆಗೆ ದಾಖಲು
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪಿಎಸ್ ಐ ನೇಮಕಾತಿ ಹಗರಣದಲ್ಲಿ ಸರ್ಕಾರ ಅಧಿಕಾರಿಗಳನ್ನು ಬಂಧಿಸಿದರೆ ಸಾಲದು, ಅಮೃತ್ ಪಾಲ್, ಶಾಂತಕುಮಾರ್ ಅವರಿಗೆ ಮಂಪರು ಪರೀಕ್ಷೆ ನಡೆಸಲಿ, ಪ್ರಕರಣದಲ್ಲಿ ಭಾಗಿಯಾದವರ ಹೆಸರು ಹೇಳದಂತೆ ಅಧಿಕಾರಿಗಳಿಗೆ ಒತ್ತಡ ಹೇರಲಾಗುತ್ತಿದೆ. ಹೀಗಾಗಿ ಅಧಿಕಾರಿಗಳಿಗೆ ಮಂಪರು ಪರೀಕ್ಷೆ ಮಾಡಬೇಕು ಎಂದರು.
ಇನ್ನು ಸಿದ್ದರಾಮಯ್ಯ ಮುಖ್ಯಮಂತ್ರಿಗಳಾಗಿದ್ದಾಗಲೂ ಪಿಎಸ್ ಐ ಹಗರಣ ನಡೆದಿತ್ತು ಎಂಬ ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ ಹೇಳಿಕೆಗೆ ತಿರುಗೇಟು ನೀಡಿದ ಸಿದ್ದರಾಮಯ್ಯ, ನಾನು ಮುಖ್ಯಮಂತ್ರಿಯಾಗಿದ್ದಾಗ ಹಗರಣ ನಡೆದಿದ್ದರೆ, ಆಗ ವಿರೋಧಪಕ್ಷದಲ್ಲಿದ್ದ ಅಶ್ಥಥ್ ನಾರಾಯಣ ಕಡುಬು ತಿಂತಿದ್ನಾ ಇಲ್ಲ ಕಳ್ಳೆಪುರಿ ತಿಂತಿದ್ನಾ ಅಂತ ಪ್ರಶ್ನಿಸಿದ್ದಾರೆ.
ಗಮನಿಸಿ : `ಗ್ರಾಮ ಒನ್’ ಕೇಂದ್ರ ಆರಂಭಕ್ಕೆ ಪ್ರಾಂಚೈಸಿಗಳಿಂದ ಅರ್ಜಿ ಆಹ್ವಾನ : ಇಲ್ಲಿದೆ ಮಾಹಿತಿ