ಬೆಳಗಾವಿ : ಮುರುಗೇಶ್ ನಿರಾಣಿ ನನ್ನ ಮುಂದೆ ಬಚ್ಚಾ, ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ ಎಂದು ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಸಚಿವ ಮುರುಗೇಶ್ ನಿರಾಣಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
BREAKING NEWS : ಪಂಚಮಸಾಲಿಗೆ 2ಎ ಮೀಸಲಾತಿ : ನಾಳೆ ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ಘೋಷಣೆ?
ಸುದ್ದಿಗಾರರೊಂದಿಗೆ ಮಾತನಾಡಿದ ಅವರು,ನಿರಾಣಿ ಹಿಂದೂ ದೇವತೆಗಳ ಬಗ್ಗೆ ಒಂದು ಆಡಿಯೋ ಬಿಟ್ಟಿದ್ದರು. ಅವರು ನಮಗೀಗ ಹಿಂದೂ ಸ್ವಾಮೀಜಿ ಬಗ್ಗೆ ಮಾತಾಡಬೇಡಿ ಎನ್ನುತ್ತಾರೆ. ಇಂತಹವರನ್ನು ಸಿಎಂ ಮಾಡಿದರೆ ವಿಧಾನಸೌಧಕ್ಕೆ ಅವಮಾನಕರ. ಮರ್ಯಾದೆ ಇರಲ್ಲ, ಮುರುಗೇಶ್ ನಿರಾಣಿ ಮಂತ್ರಿ ಹೇಗಾದ ಏನೆಲ್ಲಾ ಪ್ರಲಾಪ ಮಾಡಿದ ಎಲ್ಲಾ ಗೊತ್ತಿದೆ. ಹೆಚ್ಚು ಮಾತಾಡಿದರೆ ಎಲ್ಲಾ ಬಿಡುಗಡೆ ಮಾಡಬೇಕಾಗುತ್ತದೆ ಎಂದು ಕಿಡಿಕಾರಿದ್ದಾರೆ.
ಪಂಚಮಸಾಲಿ ಸಮೂದಾಯಕ್ಕೆ 2/ಎ ಮೀಸಲಾತಿ ನೀಡುವ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಪಂಚಮಸಾಲಿ ಸಮುದಾಯಕ್ಕೆ 2ಎ ಮೀಸಲಾತಿ ಸಂಬಂಧ ಪಂಚಮಸಾಲಿಗಳಿಂದ ನಾಳೆ ಶಕ್ತಿಪ್ರದರ್ಶನವಾಗಲಿದೆ. ಹೀಗಾಗಿ ನಾಳೆ ಸಿಎಂ ಬಸವರಾಜ ಬೊಮ್ಮಾಯಿ ಐತಿಹಾಸಿಕ ನಿರ್ಧಾರ ಮಾಡಲಿದ್ದಾರೆ ಎಂದರು.