ಬೆಂಗಳೂರು : ಮಡಿಕೇರಿಯಲ್ಲಿ ವಿರೋಧಪಕ್ಷದ ನಾಯಕರ ಕಾರಿನ ಮೇಲೆ ನಡೆದ ಮೊಟ್ಟೆ ದಾಳಿಗೆ ಮುಖ್ಯಮಂತ್ರಿ ಸೇರಿದಂತೆ ಎಲ್ಲರೂ ಈ ಘಟನೆಯನ್ನು ಖಂಡಿಸಿದ್ದೇವೆ. ಇದಕ್ಕೆ ಸಂಬಂಧಿಸಿ ಕ್ರಮವನ್ನು ಕೈಗೊಳ್ಳಲಾಗಿದೆ ಎಂದು ಆರೋಗ್ಯ ಸಚಿವ ಡಾ.ಕೆ. ಸುಧಾಕರ್ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕರಣವನ್ನ ಇಲ್ಲಿಗೇ ಬಿಟ್ಟರೆ ಅವರಿಗೇ ಒಳ್ಳೆಯದು. ಅದು ಬಿಟ್ಟು ಇದನ್ನು ರಾಜಕೀಯವಾಗಿ ಬಳಸಿಕೊಳ್ಳುವ ಹುನ್ನಾರ ಮಾಡಿದರೆ ಅವರು ಮುಂದುವರಿಯಲಿ ಎಂದರು. ರಾಜ್ಯದಲ್ಲಿ ಅಶಾಂತಿ ಉಂಟು ಮಾಡುವ ದುರುದ್ಧೇಶ ಇದ್ದರೆ ನಾವೇನು ಮಾಡಲಾಗುತ್ತೆ ಎಂದು ತಿರುಗೇಟು ನೀಡಿದರು.
BIGG NEWS: ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಟ ಮನೋರಂಜನ್; ಸಂಗೀತಾ ಕೈ ಹಿಡಿದ ಕ್ರೇಜಿಸ್ಟಾರ್ ರವಿಚಂದ್ರನ್ ಪುತ್ರ
ಅವರ ಮುಂಚೂಣಿ ಘಟಕದ ಯುವ ಮುಖಂಡರು ಏನು ಮಾಡುತ್ತಿದ್ದಾರೆ ಎಂಬುದನ್ನು ನೋಡಲಿ, ಅವರನ್ನು ಹದ್ದುಬಸ್ತಿನಲ್ಲಿಡಲು ಅವರಿಂದ ಆಗಿದೆಯೇ ಎಂದು ಅವರನ್ನು ಕೇಳಿ, ಮಡಿಕೇರಿ ಘಟನೆಗೆ ಕಾರಣರಾದ ಕಾರ್ಯಕರ್ತ ಯಾರು ಎಂಬುದು ಸರಿಯಾಗಿ ಇನ್ನೂ ಗೊತ್ತಾಗಿಲ್ಲ. ಘಟನೆಯಲ್ಲಿ ಭಾಗಿಯಾದವರನ್ನು ಬಂಧಿಸಲಾಗಿದೆ. ಮುಖ್ಯಮಂತ್ರಿ ಆದಿಯಾಗಿ ಎಲ್ಲರೂ ಘಟನೆಯನ್ನು ಖಂಡಿಸಿದ್ದೇವೆ, ಜೊತೆಗೆ ಹೆಚ್ಚಿನ ಭದ್ರತೆ ನೀಡುವುದಾಗಿ ಹೇಳಿದ್ದೇವೆ, ಇಷ್ಟಾದರೂ ಮುಂದುವರಿಸುವುದಾದರೆ ಜನರಿಗೆ ಇವರ ನಿಜಬಣ್ಣ ಅರ್ಥವಾಗಲಿದೆ. ಜನರೇ ಇವರಿಗೆ ಉತ್ತರಿಸುತ್ತಾರೆ ಎಂದು ಹೇಳಿದರು.