ಮಂಡ್ಯ : ಸಂಸದೆ ಸುಮಲತಾ ಅಂಬರೀಶ್ ಅವರ ಕಮಿಷನ್ ಆರೋಪಕ್ಕೆ ಜೆಡಿಎಸ್ ಶಾಸಕ ಪುಟ್ಟರಾಜು ಅವರು ಪ್ರತಿಕ್ರಿಯೆ ನೀಡಿದ್ದು, ಮೂಡಾ ಸೈಟ್ ಹಗರಣದಲ್ಲಿ ನಮ್ಮದು ಎಳ್ಳಷ್ಟು ಪಾತ್ರವಿಲ್ಲ ಎಂದು ಹೇಳಿದ್ದಾರೆ.
ಮಂಡ್ಯ ಜಿಲ್ಲೆ ಮೇಲುಕೋಟೆಯಲ್ಲಿ ಮಾನಾಡಿದ ಜೆಡಿಎಸ್ ಶಾಸಕ ಪುಟ್ಟರಾಜು, ಚೆಲುವನಾರಾಯಣ ಸ್ವಾಮಿ ಸನ್ನಧಿಯಲ್ಲಿ ನಿಂತು ಮಾತನಾಡುತ್ತಿದ್ದೇನೆ. ಮೂಡಾ ಸೈಟ್ ಹಗರಣದಲ್ಲಿ ನಮ್ಮದು ಎಳ್ಳಷ್ಟು ಪಾತ್ರವಿಲ್ಲ. ಅವರ ಬಳಿ ದಾಖಲೆಗಳಿದ್ದರೆ ತಂದು ದಿನಾಂಕ ನಿಗದಿ ಮಾಡಲಿ, ನಾನು ಚರ್ಚೆಗೆ ಸಿದ್ಧನಿದ್ದೇನೆ ಎಂದು ಹೇಳಿದ್ದಾರೆ.
ಕೋರ್ಟ್ ನಲ್ಲಿ ನಮ್ಮ ಪರ ತೀರ್ಪು ಬರುತ್ತೆ. ಅಜಾತಶತ್ರು ಅಂಬರೀಶ್ ಅಣ್ಣನ ನೆನೆದು ಕೆಲಸ ಮಾಡಲಿ, ಲಘು ಮಾತು ಸಂಸದೆ ಸುಮಲತಾಗೆ ಶೋಭೆ ತರುವುದಿಲ್ಲ. ದುಡಿದ ದುಡ್ಡಿನಿಂದ ಕ್ಷೇತ್ರದಲ್ಲಿ ಜನಪರ ಕೆಲಸ ಮಾಡಿದ್ದೇನೆ. ರಾಜಕೀಯದಲ್ಲಿ ಸಂಪಾದನೆಗಿಂತ ಕಳೆದುಕೊಂಡಿದ್ದೇ ಹೆಚ್ಚು ಎಂದರು.
ಜನ ಸುಮಲತಾ ಅವರನ್ನು ಆಯ್ಕೆ ಮಾಡಿರುವುದು ಕೆಲಸ ಮಾಡುವುದಕ್ಕೆ ಆಗಿದೆ. ಅಂಬರೀಶ್ ಅವರ ಪತ್ನಿ ಎನ್ನುವ ಕಾರಣಕ್ಕೆ ಅವರು ಗೆದ್ದಿದ್ದಾರೆ. ಆದರೆ ಸುಮಲತಾರ ಟಾರ್ಗೆಟ್ ಜೆಡಿಎಸ್ ಆಗಿದೆ. ನಮ್ಮ ಬಗ್ಗೆ ಮಾತನಾಡಿದರೆ ಹೀರೋ ಆಗುತ್ತೇನೆ ಎಂದುಕೊಂಡಿದ್ದಾರೆ ಎಂದ ಅವರು, ಶಾಸಕನಾಗಿ ನಾನು ಸದನದಲ್ಲಿ ಯಾವ ರೀತಿ ಮಾತನಾಡಿದ್ದೇನೆ ಎಂದು ಇತಿಹಾಸ ತೆಗೆದು ನೋಡಲಿ