ಕೆಎನ್ಎನ್ಡಿಜಿಟಲ್ ಡೆಸ್ಕ್ : ಭಾರತದ ಮಾಜಿ ಆಟಗಾರ ಮತ್ತು ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಬಲಿಷ್ಠ ಬ್ಯಾಟಿಂಗ್ಗೆ ಹೆಸರುವಾಸಿಯಾಗಿದ್ದಾರೆ. ಧೋನಿ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಸಕ್ರಿಯವಾಗಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ತುಂಬುತ್ತಿದ್ದು, ಭಾರತ ಅಮೃತ ಮಹೋತ್ಸವವನ್ನ ಆಚರಿಸಲಾಗುತ್ತಿದೆ. ಪ್ರಧಾನಿ ಮೋದಿಯವ್ರು ಕೂಡ ಸಾಮಾಜಿಕ ಜಾಲತಾಣಗಳ ಡಿಪಿಯಾಗಿ ರಾಷ್ಟ್ರಧ್ವಜ ಬಳಸುವಂತೆ ಎಲ್ಲಾ ದೇಶವಾಸಿಗಳಲ್ಲಿ ಮನವಿ ಮಾಡಿದ್ದಾರೆ. ಅದ್ರಂತೆ, ಜನತೆ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ತ್ರಿವರ್ಣ ಧ್ವಜದ ಡಿಪಿ ಹಾಕುತ್ತಿದ್ದಾರೆ. ಇದೀಗ ಸ್ಟಾರ್ ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಕೂಡ ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ಪ್ರೊಫೈಲ್ ಬದಲಾಯಿಸಿದ್ದಾರೆ.
ಎಂಎಸ್ ಧೋನಿ ತಮ್ಮ ಪ್ರೊಫೈಲ್ ಬದಲಾಯಿಸಿದ್ದಾರೆ
ಮಹೇಂದ್ರ ಸಿಂಗ್ ಧೋನಿ ಸಾಮಾಜಿಕ ಮಾಧ್ಯಮದಲ್ಲಿ ಹೆಚ್ಚು ಬಳಸುವುದಿಲ್ಲ. ಇದೀಗ ಧೋನಿ ತಮ್ಮ ಇನ್ಸ್ಟಾಗ್ರಾಮ್ ಪ್ರೊಫೈಲ್ ಚಿತ್ರವನ್ನ ತ್ರಿವರ್ಣ ಧ್ವಜಕ್ಕೆ ಬದಲಾಯಿಸಿದ್ದು, ದೇಶಭಕ್ತಿಯನ್ನ ಪ್ರದರ್ಶಿಸಿದ್ದಾರೆ. ಅದರ ಮೇಲೆ ನಾನೊಬ್ಬ ಭಾರತೀಯ ಆಗಿರುವುದೇ ನನ್ನ ಅದೃಷ್ಟ ಎಂದು ಬರೆದುಕೊಂಡಿದ್ದಾರೆ. ಇನ್ಸ್ಟಾಗ್ರಾಮ್ನಲ್ಲಿ 39 ಮಿಲಿಯನ್ಗಿಂತಲೂ ಹೆಚ್ಚು ಅನುಯಾಯಿಗಳನ್ನು ಹೊಂದಿದ್ದರೆ, ಧೋನಿ ಕೇವಲ ನಾಲ್ಕು ಜನರನ್ನು ಮಾತ್ರ ಅನುಸರಿಸುತ್ತಾರೆ.
ಭಾರತಕ್ಕೆ ವಿಶ್ವಕಪ್ ತಂದವರು
ಮಹೇಂದ್ರ ಸಿಂಗ್ ಧೋನಿ (MS ಧೋನಿ) ಶ್ರೇಷ್ಠ ವಿಕೆಟ್ಕೀಪರ್-ಬ್ಯಾಟ್ಸ್ಮನ್ ಮತ್ತು ನಾಯಕನಾಗಿ ಎಲ್ಲಾ ಮೂರು ಪ್ರಮುಖ ICC ಟ್ರೋಫಿಗಳನ್ನ ಗೆದ್ದ ಏಕೈಕ ಆಟಗಾರರಲ್ಲಿ ಒಬ್ಬರು ಮತ್ತು ಭಾರತೀಯ ಕ್ರಿಕೆಟ್ʼನ್ನ ಹೊಸ ಎತ್ತರಕ್ಕೆ ಕೊಂಡೊಯ್ದಿದ್ದಾರೆ. 2020 ರಲ್ಲಿ, ಅವರು ಆಗಸ್ಟ್ 15ರಂದು ತಮ್ಮ ನಿವೃತ್ತಿಯನ್ನು ಘೋಷಿಸಿದರು.
ಭಾರತೀಯ ಸೇನೆಯಲ್ಲಿ ಲೆಫ್ಟಿನೆಂಟ್
ಮಹೇಂದ್ರ ಸಿಂಗ್ ಧೋನಿ ಬ್ಯಾಟಿಂಗ್ ಬಗ್ಗೆ ಎಲ್ಲರೂ ಅಭಿಮಾನಿಗಳಾಗಿದ್ದಾರೆ. ಅವರು ಕಾಲಕಾಲಕ್ಕೆ ಭಾರತೀಯ ಸೇನೆಯ ತರಬೇತಿ ಕ್ಯಾಂಪಸ್ನ ಭಾಗವಾಗಿದ್ದಾರೆ. ಅವರು ಭಾರತೀಯ ಪ್ರಾದೇಶಿಕ ಸೇನೆಯಲ್ಲಿ ಗೌರವಾನ್ವಿತ ಲೆಫ್ಟಿನೆಂಟ್ ಕರ್ನಲ್ ಹುದ್ದೆಯನ್ನು ಹೊಂದಿರುವುದು ಮಾತ್ರವಲ್ಲದೆ, ಅವರು ಅರ್ಹವಾದ ಪ್ಯಾರಾಟ್ರೂಪರ್ ಕೂಡ ಆಗಿದ್ದಾರೆ. 41 ವರ್ಷದ ಅವರು ಇತ್ತೀಚೆಗೆ ತಮ್ಮ ಜನ್ಮದಿನವನ್ನು ಆಚರಿಸಲು ಯುನೈಟೆಡ್ ಕಿಂಗ್ಡಮ್ನಲ್ಲಿದ್ದರು ಮತ್ತು ಇಂಗ್ಲೆಂಡ್ ವಿರುದ್ಧದ ಭಾರತದ ಪಂದ್ಯಗಳಲ್ಲಿ ಸಹ ಭಾಗವಹಿಸಿದ್ದರು.