ಬೆಂಗಳೂರು: ಅಪಘಾತಕ್ಕೆ ಈಡಾದ ವಿಮೆ ಇಲ್ಲದ ವಾಹನಗಳನ್ನು ಷರತ್ತು ಬದ್ದವಾಗಿ ಬಿಡುಗಡೆ ಮಾಡುವಂತೆಗ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಪ್ರಕರಣವೊಂದರ ಮೇಲ್ನನವಿ ಆಲಿಸಿದ ನ್ಯಾಯಾಪೀಠ ಈ ಆದೇಶವನ್ನು ಹೊರಡಿಸಿದೆ.
ರೈತರಿಗೆ ಮಹತ್ವದ ಮಾಹಿತಿ: ಡಿ.31ಕ್ಕೂ ಮೊದಲು ನೀವು ಈ 2 ಕೆಲಸ ಮಾಡ್ಲೇಬೇಕು
ರಾಮನಗರದ ಮೂರನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಬೆಂಗಳೂರಿನ ಚೌಡೇಶ್ವರಿ ನಗರದ ನಿವಾಸಿ ಗಣೇಶ್ ಎಂಬುವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು ಅರ್ಜಿ ವಿಚಾರಣೆ ನಡೆಸಿದ ಯಮೂರ್ತಿ ಕೆ. ನಟರಾಜನ್ ಅವರಿದ್ದ ನ್ಯಾಯಪೀಠ ಕೆಳಹಂತ ನ್ಯಾಯಾಲವು ನೀಡಿದ ಆದೇಶವನ್ನು ರದ್ದು ಮಾಡಿ. ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾರೆ, ಇದಲ್ಲದೇಱ ಶಿಕ್ಷೆಗೆ ಗುರಿಯಾಗಿದ್ದಾರೆ. ಅರ್ಜಿದಾರರ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂಬ ಕಾರಣ ನೀಡಿ ವಾಹನ ಬಿಡುಗಡೆ ಮಾಡುವುದಕ್ಕೆ ನಿರಾಕರಣೆ ಮಾಡುವಂತಿಲ್ಲ ಅರ್ಜಿದಾರರಿಗೆ ಅಗತ್ಯ ಷರತ್ತುಗಳನ್ನು ವಿಧಿಸಿ ವಾಹನ ಬಿಡುಗಡೆಗೆ ಸೂಚನೆ ನೀಡಿ ಆದೇಶಿಸಿದೆ.
BIGG NEWS : ವಿಧಾನಪರಿಷತ್ ನಲ್ಲಿ `ಕರ್ನಾಟಕ ಭೂ ಕಂದಾಯ ವಿಧೇಯಕ’ ಅಂಗೀಕಾರ : ಇನ್ಮುಂದೆ 7 ದಿನದಲ್ಲಿ ಭೂಪರಿವರ್ತನೆ
ಅರ್ಜಿದಾರರ ಮಾಲೀಕತ್ವದ ಐಚರ್ ಕ್ಯಾಂಟರ್ 2021 ರ ಜನವರಿ 22 ರಂದು ಮೈಸೂರು ರಸ್ತೆಯಲ್ಲಿ ಹೋಗುತ್ತಿದ್ದಾಗ ಕೆಟ್ಟುಹೋಗಿತ್ತು. ಚಾಲಕ ವಾಹನವನ್ನು ರಸ್ತೆ ಬದಿಯಲ್ಲಿ ನಿಲ್ಲಿಸಿ ಮೆಕ್ಯಾನಿಕ್ ಗಾಗಿ ಕಾಯುತ್ತಿದ್ದ ಈ ವೇಳೆ ಬೆಂಗಳೂರಿನಿಂದ ಮೈಸೂರಿಗೆ ಕಾರಿನಲ್ಲಿ ಹೋಗುತ್ತಿದ್ದ ವ್ಯಕ್ತಿಯೊಬ್ಬರು ಅತಿವೇಗವಾಗಿ ಬಂದು ಕ್ಯಾಂಟರ್ ಗೆ ಡಿಕ್ಕಿ ಹೊಡೆದಿದ್ದರು. ಕಾರಿನ ಮುಂಭಾಗ ಜಖಂಗೊಂಡು ವ್ಯಕ್ತಿಗೆ ಗಾಯವಾಗಿತ್ತು. ಪ್ರಕರಣ ದಾಖಲಿಸಿಕೊಂಡಿದ್ದ ಬಿಡಿದಿ ಪೊಲೀಸರು ಎರಡೂ ವಾಹನಗಳನ್ನು ವಶಕ್ಕೆ ಪಡೆದಿದ್ದರು.
ಈ ನಡುವೆ ಅರ್ಜಿದಾರ ತಮ್ಮ ವಾಹನ ಬಿಡುಗಡೆಗೆ ಕೋರಿ ರಾಮನಗರ ಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ್ದ ನ್ಯಾಯಾಲಯ ಅರ್ಜಿದಾರರು ತಮ್ಮ ವಾಹನಕ್ಕೆ ವಿಮೆ ಮಾಡಿಸಿಲ್ಲ ಎಂದು ತಿಳಿಸಿ ವಾಹನ ಬಿಡುಗಡೆಗೆ ನಿರಾಕರಿಸಿತ್ತು.