ಬೆಂಗಳೂರು: ಕರ್ನಾಟಕ ಎಸಿಬಿ ( Karnataka ACB ) ರದ್ದು, ಬಾಕಿ ಉಳಿದಿರುವ ಪ್ರಕರಣಗಳನ್ನು ಲೋಕಾಯುಕ್ತ ಪೊಲೀಸ್ ( Lokayukta Police ) ವಿಭಾಗಕ್ಕೆ ವರ್ಗಾಯಿಸಿದ ಹೈಕೋರ್ಟ್ ( Karnataka High Court ) ಮಹತ್ವದ ಆದೇಶವನ್ನು ಹೊರಡಿಸಿದೆ.
ಕಾಂಗ್ರೆಸ್ ನ ಸರ್ಕಾರ ( Congress Government ) ಅಧಿಕಾರದಲ್ಲಿದ್ದಂತ ಸಂದರ್ಭದಲ್ಲಿ ಕರ್ನಾಟಕ ಎಸಿಬಿ ರಚನೆ ಮಾಡಿ ಆದೇಶಿಸಿತ್ತು. ಈ ಮೂಲಕ ಲೋಕಾಯುಕ್ತ ಪೊಲೀಸ್ ಗಿಂತಲೂ ಹೆಚ್ಚಿನ ಅಧಿಕಾರವನ್ನು ಎಸಿಬಿಗೆ ನೀಡಿತ್ತು. ಆಗ ಸಿಎಂ ಆಗಿದ್ದಂತ ಸಿದ್ಧರಾಮಯ್ಯ ಅವರು ಎಸಿಬಿ ರಚನೆ ಮಾಡಿ ಆದೇಶಿಸಿದ್ದರು.
ಅಂದಿನ ಸರ್ಕಾರ ಎಸಿಬಿ ರಚಿಸಿದ್ದನ್ನು ಪ್ರಶ್ನಿಸಿ, ಹೈಕೋರ್ಟ್ ಗೆ ಬೆಂಗಳೂರು ವಕೀಲರ ಸಂಘ ಅರ್ಜಿಯನ್ನು ಸಲ್ಲಿಸಿತ್ತು. ಈ ಬಗ್ಗೆ ಗುರುವಾರ ಅರ್ಜಿಯ ವಿಚಾರಣೆಯ ಬಳಿಕ ತನ್ನ ತೀರ್ಪನ್ನು ಹೈಕೋರ್ಟ್ ನ ನ್ಯಾಯಮೂರ್ತಿ ಬಿ.ವೀರಪ್ಪ ಹಾಗೂ ನ್ಯಾಯಮೂರ್ತಿ ಹೇಮಲೇಖಾ ಅವರನ್ನು ಒಳಗೊಂಡ ನ್ಯಾಯಪೀಠವು ಪ್ರಕಟಿಸಿದೆ.
ಕರ್ನಾಟಕ ಹೈಕೋರ್ಟ್ ಭ್ರಷ್ಟಾಚಾರ ನಿಗ್ರಹ ದಳ (Anti Corruption Bureau – ACB )ವನ್ನು ರದ್ದುಗೊಳಿಸಿದೆ ಮತ್ತು ಎಸಿಬಿ ಮುಂದೆ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಲೋಕಾಯುಕ್ತ ಪೊಲೀಸ್ ವಿಭಾಗಕ್ಕೆ ವರ್ಗಾಯಿಸಲು ನಿರ್ದೇಶಿಸಿದೆ. ಈ ಮೂಲಕ ಲೋಕಾಯುಕ್ತ ಪೊಲೀಸರಿಗೆ ಮತ್ತೆ ಅಧಿಕಾರ ಮರುಸ್ಥಾಪಿಸಿ ಮಹತ್ವದ ಆದೇಶವನ್ನು ನೀಡಿದೆ.
BIGG NEWS : ಇಂದಿನಿಂದ ದ್ವಿತೀಯ ಪಿಯುಸಿ ಪೂರಕ ಪರೀಕ್ಷೆ : ವಿದ್ಯಾರ್ಥಿಗಳಿಗೆ ಇಲ್ಲಿದೆ ಮಹತ್ವದ ಮಾಹಿತಿ
ಇದಷ್ಟೇ ಅಲ್ಲದೇ, ಮೂರು ವರ್ಷದ ಅವಧಿಗೆ ಕರ್ನಾಟಕ ಲೋಕಾಯುಕ್ತಕ್ಕೆ ಅಧಿಕಾರಿಗಳನ್ನು ನೇಮಕ ಮಾಡಬೇಕು. ಈ ನೇಮಕಾತಿಯ ವೇಳೆಯಲ್ಲಿ ಅರ್ಹತೆಯನ್ನು ಮಾತ್ರವೇ ಪರಿಗಣಿಸಬೇಕು. ಜಾತಿ ಆಧಿರಿಸ ಲೋಕಾಯುಕ್ತ, ಉಪ ಲೋಕಾಯುಕ್ತರನ್ನು ನೇಮಕ ಮಾಡುವಂತಿಲ್ಲ. ಭ್ರಷ್ಟಾಚಾರ ಆರೋಪ ಹೊತ್ತವರು ಪಾರಾಗದಂತೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸಬೇಕು ಎಂಬುದಾಗಿ ಸೂಚಿಸಿದೆ.