ನವದೆಹಲಿ : ಭಾರತದ 75ನೇ ಸ್ವಾತಂತ್ರ್ಯ ದಿನಾಚರಣೆಯ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಹರ್ ಘರ್ ತಿರಂಗಾ ಅಭಿಯಾನಕ್ಕೆ ಕರೆ ಕೊಟ್ಟಿದ್ದರು. ಪ್ರಧಾನಿ ಮೋದಿ ಕರೆಗೆ ಸ್ಪಂದಿಸಿದ ಆರ್ಎಸ್ಎಸ್ ತನ್ನ ಸಾಮಾಜಿಕ ಮಾಧ್ಯಮ ಪ್ರೊಫೈಲ್ ಫೋಟೋಗೆ ರಾಷ್ಟ್ರಧ್ವಜವನ್ನು ಹಾಕಿಕೊಂಡಿದೆ.
ಆರ್ ಎಸ್ ಎಸ್ ಸಾಮಾಜಿಕ ಮಾಧ್ಯಮದ ಫೋಟೋಗಳನ್ನು ಬದಲಾಯಿಸಲಾಗಿದ್ದು, ಕಾರ್ಯಕರ್ತರು ಹರ್ ಘರ್ ತಿರಂಗಾ ಅಭಿಯಾನದಲ್ಲಿ ಸಕ್ರಿಯವಾಗಿ ಭಾಗವಹಿಸುತ್ತಿದ್ದಾರೆ ಎಂದು ಆರ್ಎಸ್ಎಸ್ ಸಂಘಟನೆಯ ಪ್ರಚಾರ ವಿಭಾಗವು ಹೇಳಿದೆ. ಮೋಹನ್ ಭಾಗವತ್ ಮತ್ತು ಇತರ ಆರ್ಎಸ್ಎಸ್ ನಾಯಕರು ರಾಷ್ಟ್ರ ಧ್ವಜಾರೋಹಣ ಮಾಡುತ್ತಿರುವ ವಿಡಿಯೋಗಳನ್ನು ಆರ್ಎಸ್ಎಸ್ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದೆ.
स्वाधीनता का अमृत महोत्सव मनाएँ.
हर घर तिरंगा फहराएँ.
राष्ट्रीय स्वाभिमान जगाएँ. pic.twitter.com/li2by2b0dK— RSS (@RSSorg) August 13, 2022