ವಿಜಯನಗರ : ಹಂಪಿ ಕನ್ನಡ ವಿಶ್ವವಿದ್ಯಾಲಯ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟಿಸಿದ್ದು, ಈ ಬಾರಿ ಡಾ. ಮಂಜುನಾಥ್ ಸೇರಿ ಮೂವರಿಗೆ ನಾಡೋಜ ಗೌರವ ಪ್ರದಾನ ಮಾಡಲಾಗುತ್ತದೆ ಎಂದು ಹಂಪಿ ವಿವಿ ಕುಲಪತಿ ಡಾ. ಸ.ಚಿ. ರಮೇಶ್ ತಿಳಿಸಿದ್ದಾರೆ.
BIGG NEWS: ಮಂಡ್ಯದಲ್ಲಿ ಕಬಡ್ಡಿ ಮೈದಾನಕ್ಕಿಳಿದ ಶಾಸಕ ಪುಟ್ಟರಾಜು; ಆಟ ಕಂಡು ಯುವಕರ ಶಿಳ್ಳೆಯ ಸುರಿಮಳೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಸಕ್ತ ಸಾಲಿನ ನಾಡೋಜ ಪ್ರಶಸ್ತಿ ಪ್ರಕಟಿಸಲಾಗಿದ್ದು, ಡಿಸೆಂಬರ್ 8 ರಂದು ನಡೆಯುವ ಘಟಿಕೋತ್ಸವದಲ್ಲಿ ರಾಜ್ಯಪಾಲರಿಂದ ಪದವಿ ಪ್ರದಾನ ಮಾಡಲಿದ್ದಾರೆ ಎಂದು ತಿಳಿಸಿದ್ದಾರೆ.
ನಾಡೋಜ ಪ್ರಶಸ್ತಿ ಪಟ್ಟಿ
1.ಸಾಹಿತ್ಯ ಮತ್ತು ಸಾಮಾಜಿಕ ಸೇವಾ ಕ್ಷೇತ್ರದ ಕೃಷ್ಣಪ್ಪ ಜಿ.
2.ಎಸ್.ಷಡಕ್ಷರಿ
3.ಆರೋಗ್ಯ ಕ್ಷೇತ್ರದ ಡಾ.ಸಿ.ಎನ್.ಮಂಜುನಾಥ
ನಾಡೋಜ ಪ್ರಶಸ್ತಿಯು ಹಂಪಿ ಕನ್ನಡ ವಿಶ್ವವಿದ್ಯಾಲಯವು ಪ್ರತಿ ವರ್ಷ ನೀಡುವ ಪ್ರತಿಷ್ಠಿತ ಪ್ರಶಸ್ತಿಯಾಗಿದೆ. ನಾಡೋಜ ಎಂಬ ಪದವು ಆದಿಕವಿ ಪಂಪನಿಗೆ ಸಂಬಂಧಿಸಿದ್ದಾಗಿದೆ.