ಬೆಂಗಳೂರು : ಎರಡು ತಿಂಗಳಿನಿಂದ ಬಾಕಿ ಇರುವ ರಾಜ್ಯದ 108 ಆ್ಯಂಬುಲೆನ್ಸ್ ( 108 ambulance) ಸಿಬ್ಬಂದಿಗಳ ವೇತನ ಬಿಡುಗಡೆ ಮಾಡಲಾಗುತ್ತದೆ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಂದೀಪ್ ತಿಳಿಸಿದ್ದಾರೆ.
ಬಾಕಿ ವೇತನ ಬಿಡುಗಡೆಗೆ ಆಗ್ರಹಿಸಿ ರಾಜ್ಯದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳು ಪ್ರತಿಭಟನೆ ನಡೆಸುತ್ತಿದ್ದು,. 2 ತಿಂಗಳಿನಿಂದ ಸಂಬಳವಾಗಿಲ್ಲ, ಇದರಿಂದ ಜೀವನ ನಡೆಸುವುದು ಬಹಳ ಕಷ್ಟವಾಗಿದೆ. ಸರ್ಕಾರ ಕೂಡಲೇ ವೇತನ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿದೆ. ಈ ಹಿನ್ನೆಲೆ ಇಂದು ಆರೋಗ್ಯ ಇಲಾಖೆ ಆಯುಕ್ತರು ಸಿಬ್ಬಂದಿಗಳ ಜೊತೆ ಆರೋಗ್ಯ ಸೌಧದಲ್ಲಿ ಸಭೆ ನಡೆಸಿದ್ದಾರೆ.
ಸಭೆ ಬಳಿಕ ಮಾತನಾಡಿದ ಆಯುಕ್ತ ರಂದೀಪ್ ‘ಎರಡು ತಿಂಗಳಿನಿಂದ ಬಾಕಿ ಇರುವ ರಾಜ್ಯದ 108 ಆ್ಯಂಬುಲೆನ್ಸ್ ಸಿಬ್ಬಂದಿಗಳ ವೇತನ ಬಿಡುಗಡೆ ಮಾಡಲಾಗುತ್ತದೆ, ವಾರದೊಳಗೆ ಬಾಕಿ ವೇತನ ಬಿಡುಗಡೆಗೆ ಜಿವಿಕೆ ಸಂಸ್ಥೆ ಒಪ್ಪಿಕೊಂಡಿದೆ’ ಎಂದು ಆರೋಗ್ಯ ಕುಟುಂಬ ಕಲ್ಯಾಣ ಇಲಾಖೆ ಆಯುಕ್ತ ರಣದೀಪ್ ಹೇಳಿದ್ದಾರೆ. ಸಿಬ್ಬಂದಿ ಸಮಸ್ಯೆ ಹಾಗೂ ಪರಿಹಾರದ ಬಗ್ಗೆ ಚರ್ಚಿಸಿದ್ದೇನೆ, ಯಾವುದೇ ಕಾರಣಕ್ಕೂ 108 ಆ್ಯಂಬುಲೆನ್ಸ್ ಸೇವೆ ನಿಲ್ಲಬಾರದು. ಸಂಬಳ ಹಾಗೂ ಇನ್ನಿತರ ಸಮಸ್ಯೆಗಳ ಬಗ್ಗೆ ಚರ್ಚಿಸಿದ್ದೇನೆ. ಆರೋಗ್ಯ ಇಲಾಖೆ ಸಚಿವರ ಆದೇಶದ ಮೇರೆಗೆ ಸಭೆ ನಡೆಸಲಾಗಿದೆ ಎಂದು ಹೇಳಿದ್ದಾರೆ.
ಸಿಬ್ಬಂದಿಗಳಿಗೆ ವೇತನ ನೀಡಲು ರಾಜ್ಯ ಸರ್ಕಾರ ಅನುದಾನ ಬಿಡುಗಡೆ ಮಾಡಿದೆ. ಆದರೆ ಜೆವಿಕೆ ಕಂಪನಿಯವರು 108 ಆರೋಗ್ಯ ಕವಚ ಸಿಬ್ಬಂದಿಗಳಿಗೆ ಕಳೆದ ಎರಡು ತಿಂಗಳಿನಿಂದ ವೇತನ ನೀಡಿಲ್ಲ.. 108 ಆರೋಗ್ಯ ಕವಚ ಸಿಬ್ಬಂದಿಗಳ ಆಗಸ್ಟ್ ಮತ್ತು ಸೆಪ್ಟೆಂಬರ್ ತಿಂಗಳ ಸಂಬಳಕ್ಕಾಗಿ ರಾಜ್ಯ ಸರ್ಕಾರ 25 ಕೋಟಿ ರುಪಾಯಿ ಹಣ ಬಿಡುಗಡೆ ಮಾಡಿದೆ. ಆದರೆ ಜಿವಿಕೆ ಕಂಪನಿ ಸಿಬ್ಬಂದಿಗಳಿಗೆ ಸಂಬಳ ಮಾತ್ರ ನೀಡಿರಲಿಲ್ಲ.
ರಾಜ್ಯ ಸರ್ಕಾರದಿಂದ ಜಿವಿಕೆ ಸಂಸ್ಥೆಗೆ ಹಣ ಪಾವತಿ ಆಗಿದೆ. ಸಿಬ್ಬಂದಿಗೆ ಸಂಸ್ಥೆ ಸಂಬಳ ಪಾವತಿಸಬೇಕು, ಈ ಬಗ್ಗೆ ಚರ್ಚಿಸ್ತೇವೆ ಎಂದು ನಗರದಲ್ಲಿ ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. . 108 ಆ್ಯಂಬುಲೆನ್ಸ್ (108 ambulance) ಸಿಬ್ಬಂದಿ ಜೊತೆ ನಾವು ಮಾತನಾಡಿದ್ದೇವೆ. ಸರ್ಕಾರದ ಪರ ಜಿವಿಕೆ ಸಂಸ್ಥೆ ಆ್ಯಂಬುಲೆನ್ಸ್ ಸೇವೆ ಒದಗಿಸುತ್ತಿದೆ. ಟೆಂಡರ್ ಅವಧಿ ಮುಕ್ತಾಯವಾಗಿದ್ದರೂ ಕೋರ್ಟ್ ಆದೇಶದಂತೆ ಕಾರ್ಯನಿರ್ವಹಣೆ ಮಾಡುತ್ತಿದ್ದಾರೆ. 2008ರಿಂದ ಜಿವಿಕೆ ಸಂಸ್ಥೆ 108 ಸೇವೆಯನ್ನು ಒದಗಿಸುತ್ತಿದೆ. ಜಿವಿಕೆ ಸಂಸ್ಥೆಯ ಸೇವೆ ಸಹ ನಿರೀಕ್ಷಿತ ಮಟ್ಟದಲ್ಲಿ ಸಿಗುತ್ತಿಲ್ಲ. ಉತ್ಕೃಷ್ಟ ಸೇವೆ ಒದಗಿಸಲು ಹೊಸ ಟೆಂಡರ್ ಆಹ್ವಾನಿಸಿದ್ದೇವೆ. ಮುಂದಿನ ಎರಡು ತಿಂಗಳಲ್ಲೇ ಟೆಂಡರ್ ಅಂತಿಮ ಮಾಡುತ್ತೇವೆ ಎಂದು ಸಚಿವ ಡಾ.ಕೆ.ಸುಧಾಕರ್ ಹೇಳಿದ್ದರು.