ಚಂದೋಲಿ : ಗುಜರಾತ್ನ ಮೋರ್ಬಿ ಸೇತುವೆ ದುರಂತ ಮರೆಯುವ ಮುನ್ನವೇ ಉತ್ತರ ಪ್ರದೇಶದಲ್ಲಿ ಮತ್ತೊಂದು ಸೇತುವೆ ಕುಸಿದ ಘಟನೆ ನಡೆದಿದೆ. ಯುಪಿಯ ಚಂಡೋಲಿಯಲ್ಲಿ ಛತ್ ಪೂಜೆಯ ಸಮಯದಲ್ಲಿ ಜನರು ನದಿಯ ಮೇಲಿನ ಸೇತುವೆಯೊಂದಕ್ಕೆ ಸೇರಿದ್ದು, ಜನ ಹೆಚ್ಚಾದಂತೆ ಆ ಸೇತುವೆ ಕುಸಿಯಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ. ಎಲ್ಲರೂ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದ್ರೆ, ಈ ಸೇತುವೆ ಕುಸಿತಕ್ಕೆ ಸಂಬಂಧಿಸಿದ ವಿಡಿಯೋ ವೈರಲ್ ಆಗುತ್ತಿದೆ.
ಸ್ಥಳೀಯರು ನೀಡಿದ ಮಾಹಿತಿ ಪ್ರಕಾರ, ಚಂದೋಲಿ ಜಿಲ್ಲೆಯ ಛಾಕಿಯಾ ಮಂಡಲ ವ್ಯಾಪ್ತಿಯ ಸಾರಯ್ಯ ಗ್ರಾಮದ ಜನರು ಅದ್ಧೂರಿಯಾಗಿ ಛತ್ ಪೂಜೆ ನಡೆಸಿದ್ದು, ಈ ಪೂಜೆಯ ಅಂಗವಾಗಿ ಜನರು ಸ್ಥಳೀಯ ಕಾಲುವೆಗೆ ಬಂದಿದ್ದಾರೆ. ಆದ್ರೆ, ಅವರೆಲ್ಲರೂ ಇಟ್ಟಿಗೆ ಸೇತುವೆಯ ಮೇಲೆ ಒಂದೇ ಸಮಯದಲ್ಲಿ ಬಂದಿದ್ದು, ಈ ವೇಳೆ ಸೇತುವೆಯ ಮುಂಭಾಗದಲ್ಲಿ ಸಣ್ಣ ಬಿರುಕು ಕಾಣಿಸಿಕೊಂಡಿದೆ. ಜನಸಂದಣಿ ತುಂಬಾ ಹೆಚ್ಚಾಗಿದ್ದರಿಂದ ಸೇತುವೆ ಕುಸಿದಿದೆ. ಈ ಘಟನೆ ನಡೆದ ಸಂದರ್ಭದಲ್ಲಿ ನೀರಿನ ಹರಿವು ಹೆಚ್ಚಿಲ್ಲದ ಕಾರಣ ಯಾರೂ ಬೀಳದ ಕಾರಣ ಅನಾಹುತ ತಪ್ಪಿದೆ.
#WATCH | UP: A part of a canal culvert carrying many people collapsed in Chandauli's Saraiya village of Chakia Tehsil during #ChhathPooja celebrations earlier today
A few bricks of the bridge slipped & fell into the river during #Chhath celebrations, but no one was injured: ASP pic.twitter.com/IQMykWjhrw
— ANI (@ANI) October 31, 2022
BREAKING : 545 ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮ: CIDಯಿಂದ ಮತ್ತೆ 6 ಪ್ರತ್ಯೇಕ ಚಾರ್ಜ್ ಶೀಟ್ ಸಲ್ಲಿಕೆ
BREAKING: ಧಾರವಾಡದಲ್ಲಿ ವಕೀಲೆ ಜೊತೆಗೆ ಸಿಪಿಐ ಅನುಚಿತ ವರ್ತನೆ, FIR ದಾಖಲು
BIGG NEWS: ಉಗಾಂಡಾದಲ್ಲಿ ಭಾರತೀಯ ಉದ್ಯಮಿ ಪೊಲೀಸರ ಗುಂಡಿಗೆ ಬಲಿ, ಪ್ರಕರಣ ದಾಖಲು