ನವದೆಹಲಿ : ಟ್ರೇಡ್ಮಾರ್ಕ್ ಉಲ್ಲಂಘನೆ, ಬಿಲ್ ಇಲ್ಲದೇ ಔಷಧಿಗಳನ್ನು ಮಾರಾಟ ಮಾಡುವುದು, ಇನ್ವಾಯ್ಸ್ ಇಲ್ಲದೇ ಕಚ್ಚಾ ವಸ್ತುಗಳನ್ನ ಖರೀದಿಸುವುದು, ಗುಣಮಟ್ಟದ ಅನುಸರಣೆ ಸಮಸ್ಯೆಗಳು ಮತ್ತು ನಕಲಿ ಔಷಧಿಗಳನ್ನ ತಯಾರಿಕೆಗೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಫಾರ್ಮಾ ಸಂಸ್ಥೆಗಳ ಮೇಲೆ ‘ಸರ್ಜಿಕಲ್ ಸ್ಟ್ರೈಕ್’ ನಡೆಸಿದೆ. ಇದು ಔಷಧ ತಯಾರಿಕೆಯಲ್ಲಿನ ಸಮಸ್ಯೆಗಳನ್ನ ಕಂಡುಹಿಡಿಯುವ ಭಾರತದ ಬೃಹತ್ ಡ್ರೈವ್ ಆಗಿದೆ.
ಆರೋಗ್ಯ ಸಚಿವಾಲಯದ ಮೂಲಗಳ ಪ್ರಕಾರ, ಅಪಾಯ ಆಧಾರಿತ ವಿಧಾನದ ಪ್ರಕಾರ ರಾಜ್ಯ ಔಷಧ ನಿಯಂತ್ರಣ ಆಡಳಿತದೊಂದಿಗೆ ಗುರುತಿಸಲಾದ ಔಷಧ ಉತ್ಪಾದನಾ ಘಟಕಗಳಲ್ಲಿ ಲೆಕ್ಕಪರಿಶೋಧನೆ ಮತ್ತು ದಾಳಿಗಳನ್ನ ನಡೆಸಲು ಆರು ತಂಡಗಳನ್ನ ರಚಿಸಲಾಗಿದೆ.
ತಪಾಸಣೆ, ವರದಿ ಮತ್ತು ನಂತರದ ಕ್ರಮಗಳ ಪ್ರಕ್ರಿಯೆಯನ್ನು ಮೇಲ್ವಿಚಾರಣೆ ಮಾಡಲು ಕೇಂದ್ರ ಔಷಧ ಸ್ಟ್ಯಾಂಡರ್ಡ್ ಕಂಟ್ರೋಲ್ ಆರ್ಗನೈಸೇಷನ್ (CDSCO) ಎಂಬ ಅತ್ಯುನ್ನತ ಔಷಧ ನಿಯಂತ್ರಣ ಸಂಸ್ಥೆಯಲ್ಲಿ ಇಬ್ಬರು ಜಂಟಿ ಔಷಧ ನಿಯಂತ್ರಕರ ಸಮಿತಿಯನ್ನ ರಚಿಸಲಾಗಿದೆ.
ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ.ಮನ್ಸುಖ್ ಮಾಂಡವಿಯಾ ಈ ಕ್ರಮಕ್ಕೆ ಚಾಲನೆ ನೀಡಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ (WHO) ಭಾರತೀಯ ಕಂಪನಿ ಮೇಡನ್ ಫಾರ್ಮಾಸ್ಯುಟಿಕಲ್ಸ್ ಕಲುಷಿತ ಔಷಧಿಗಳನ್ನ ರಫ್ತು ಮಾಡುತ್ತಿದೆ ಎಂದು ದೂಷಿಸಿದ ನಂತ್ರ ಇದು ಬಂದಿದೆ, ಇದು ಗ್ಯಾಂಬಿಯನ್ ಮಕ್ಕಳ ಸಾವಿಗೆ ಕಾರಣವಾಗಿತ್ತು.
ಅದ್ರಂತೆ, ಭಾರತದಲ್ಲಿ ಔಷಧ ತಯಾರಕರ ಕೇಂದ್ರ ಎಂದು ಕರೆಯಲ್ಪಡುವ ಹಿಮಾಚಲ ಪ್ರದೇಶವು ಇದುವರೆಗೆ 12ಕ್ಕೂ ಹೆಚ್ಚು ಘಟಕಗಳ ಮೇಲೆ ದಾಳಿ ನಡೆಸಿದ್ದು, ಇನ್ನೂ ಅನೇಕ ತಪಾಸಣೆಗಳು ಬಾಕಿ ಉಳಿದಿವೆ. “ಉತ್ತಮ ಉತ್ಪಾದನಾ ಪದ್ಧತಿಗಳನ್ನ ಉಲ್ಲಂಘಿಸಿರುವುದು ಕಂಡುಬಂದ ಕಂಪನಿಗಳಿಗೆ ಶೋಕಾಸ್ ನೋಟಿಸ್ ನೀಡಲಾಗಿದೆ. ಒಂದು ಘಟಕದಲ್ಲಿ, ಉತ್ಪಾದನೆಯನ್ನ ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿದೆ” ಎಂದು ಎಚ್ಪಿಯ ಔಷಧ ನಿಯಂತ್ರಕ ನವನೀತ್ ಮಾರ್ವಾ ತಿಳಿಸಿದ್ದಾರೆ.
ಅಂದ್ಹಾಗೆ, ಹಿಮಾಚಲ ಪ್ರದೇಶ ಸೇರಿದಂತೆ ಭಾರತದಾದ್ಯಂತ ತಪಾಸಣೆಗಳು ಇನ್ನೂ ನಡೆಯುತ್ತಿವೆ.
Weight Gain Tips: ದೇಹದ ತೂಕವನ್ನು ಹೆಚ್ಚಿಸಿಕೊಳ್ಳಲು ಹಾಲು ಪ್ರಯೋಜನಕಾರಿ : ಈ ಮೂರು ವಸ್ತುಗಳೊಂದಿಗೆ ಸೇವಿಸಿ
ದೇಶದ 142 ಕೋಟಿ ಜನಸಂಖ್ಯೆಯಲ್ಲಿ ‘ಕಾರು’ ಹೊಂದಿರೋ ಜನರೆಷ್ಟು ಗೊತ್ತಾ.? ; ಕಹಿ ಸತ್ಯ ಬಿಚ್ಚಿಟ್ಟ ‘ಆನಂದ್ ಮಹೀಂದ್ರಾ’
BIGG NEWS : ‘ಕರ್ನಾಟಕದ ಒಂದಿಂಚೂ ಭೂಮಿ ಬಿಟ್ಟು ಕೊಡೋದಿಲ್ಲ’ ; ಮಹಾ ನಿರ್ಣಯಕ್ಕೆ ಸಿಎಂ ಬೊಮ್ಮಾಯಿ ಖಡಕ್ ಪ್ರತಿಕ್ರಿಯೆ