ಬೆಂಗಳೂರು : ಅಕ್ಟೋಬರ್ 26 ರ ಬಲಿಪಾಡ್ಯಮಿ ದಿನ ರಾಜ್ಯದ ಪಶು ಆಸ್ಪತ್ರೆ, ಗೋಶಾಲೆಗಳಲ್ಲಿ, ಹಾಲು ಉತ್ಪಾದಕರ ಸಹಕಾರ ಸಂಘಗಳಲ್ಲಿ ಗೋವುಗಳ ಪೂಜೆ ಮಾಡುವಂತೆ ಪಶುಸಂಗೋಪನಾ ಸಚಿವ ಪ್ರಭು ಬಿ.ಚವ್ಹಾಣ್ ಆದೇಶಿಸಿದ್ದಾರೆ.
BIGG NEWS: ಹಾವೇರಿಯ ಕೋಳೂರಿನಲ್ಲಿ ಮಳೆಗೆ ಐತಿಹಾಸಿಕ ಬಸವೇಶ್ವರ ದೇವಸ್ಥಾನದ ಹಿಂಭಾಗ ಗೋಡೆ ಕುಸಿತ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿಎಂ ಬಸವರಾಜ ಬೊಮ್ಮಾಯಿ ಅವರ ಆಶಯದಂತೆ ದೀಪಾವಳಿಯ ಬಲಿಪಾಡ್ಯಮಿಯಂದು ಗೋಮಾತೆ ಪೂಜೆ ಮಾಡುವಂತೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ.
ಅಕ್ಟೋಬರ್ 26 ರಂದು ಮುಜರಾಯಿ ಇಲಾಖಾ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಗೋ ಪೂಜೆ ಹಮ್ಮಿಕೊಂಡಿರುವಂತೆ ಪಶುಸಂಗೋಪನೆ ಇಲಾಖೆಯ ಎಲ್ಲಾ ಪಶುವೈದ್ಯ ಸಂಸ್ಥೆಗಳು, ಜಾನುವಾರು ಕ್ಷೇತ್ರಗಳು, ರಾಜ್ಯದ ಖಾಸಗಿ ಮತ್ತು ಸರ್ಕಾರಿ ಗೋಶಾಲೆಗಳಲ್ಲಿ ಹಮ್ಮಿಕೊಂಡಿರುವ ಗೋಪೂಜೆ ಕಾರ್ಯಕ್ರಮಗಳಲ್ಲಿ ಶಾಸಕರು, ಸಂಸತ್ ಸದಸ್ಯರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಲಕ್ನೋ: ನಿವೃತ್ತ IPS ಅಧಿಕಾರಿಯ ಮನೆಯಲ್ಲಿ ಅಗ್ನಿ ಅವಘಡ: ಅಧಿಕಾರಿ ಸಾವು, ಪತ್ನಿ-ಮಗನ ಸ್ಥಿತಿ ಚಿಂತಾಜನಕ