ಬೆಂಗಳೂರು : ಸ್ವಂತ ಮನೆ ಹೊಂದುವ ಕನಸು ಕಂಡವರಿಗೆ ರಾಜ್ಯ ಸರ್ಕಾರ ಸಿಹಿಸುದ್ದಿ ನೀಡಿದ್ದು, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳ ಬೆಲೆಯನ್ನು 1 ಲಕ್ಷ ರೂ. ಇಳಿಕೆ ಮಾಡಲಾಗಿದೆ.
ಸಿಎಂ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದ್ದು, ಮುಖ್ಯಮಂತ್ರಿಗಳ ಒಂದು ಲಕ್ಷ ಬಹುಮಹಡಿ ವಸತಿ ಗೃಹಗಳ ಬೆಲೆಯನ್ನು 1 ಲಕ್ಷ ರೂ. ಇಳಿಕೆ ಮಾಡಲಾಗಿದೆ.
ಈ ಕುರಿತು ಮಾಹಿತಿ ನೀಡಿರುವ ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ, ಸಿಂಗಲ್ ಬೆಡ್ ರೂಂಗೆ ಸಬ್ಸಿಡಿ ಇದೆ. ಡಬಲ್ ಬೆಡ್ ರೂಂಗೆ ಸಬ್ಸಿಡಿ ಇಲ್ಲ. ಈಗಾಗಲೇ 8000 ಮನೆಗಳನ್ನ ಕಟ್ಟಿದ್ದೇವೆ. 6000 ಮನೆಗಳಿಗೆ ಈಗಾಗಲೇ ಹಣ ಕಟ್ಟಿದ್ದಾರೆ. ಡಬಲ್ ಬೆಡ್ ರೂಂ ಹಣ 14 ಲಕ್ಷಕ್ಕೆ ಇಳಿಸಿದ್ದೇವೆ. ಮೊದಲು 15 ಲಕ್ಷ ಹಣ ನಿಗದಿ ಮಾಡಲಾಗಿತ್ತು ಎಂದು ಹೇಳಿದರು.
Weather Alert : ದೇಶದ ಈ ರಾಜ್ಯಗಳಲ್ಲಿ ಮುಂದಿನ 3-4 ದಿನಗಳ ಕಾಲ ಭಾರೀ ಮಳೆ