ಹುಬ್ಬಳ್ಳಿ : ದೀಪಾವಳಿ ಹಬ್ಬಕ್ಕೆ ಊರಿಗೆ ಹೋಗುವ ಪ್ರಯಾಣಿಕರಿಗೆ ನೈಋತ್ಯ ರೈಲ್ವೆ ವಲಯ ಸಿಹಿಸುದ್ದಿ ನೀಡಿದ್ದು, ಇಂದಿನಿಂದ ನೈಋತ್ಯ ರೈಲ್ವೆ ವಲಯವು ವಿಶೇಷ ರೈಲುಗಳ ಸಂಚಾರವನ್ನು ಆರಂಭಿಸಿದೆ.
BIGG NEWS : ಬೆಳಗಾವಿಯಲ್ಲಿ ಘೋರ ದುರಂತ : ಪತಿ ಸಾವಿನಿಂದ ನೊಂದು ಮಗಳನ್ನು ಹತ್ಯೆಗೈದು ಪತ್ನಿ ಆತ್ಮಹತ್ಯೆ
1. ರೈಲು ಸಂಖ್ಯೆ. 06271/06272 ಯಶವಂತಪುರ – ಎಸ್.ಎಸ್.ಎಸ್ ಹುಬ್ಬಳ್ಳಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ (ಒಂದು ಟ್ರಿಪ್): –
ರೈಲು ಸಂಖ್ಯೆ 06271 ಯಶವಂತಪುರ – ಎಸ್ಎಸ್ಎಸ್ ಹುಬ್ಬಳ್ಳಿ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಇಂದು ಯಶವಂತಪುರ ನಿಲ್ದಾಣದಿಂದ ಮಧ್ಯಾಹ್ನ 02:30 ಗಂಟೆಗೆ ಹೊರಟು ಅದೇ ದಿನ ರಾತ್ರಿ 09:50 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (03:20/03:22 PM), ಅರಸೀಕೆರೆ (04:37/04:39 PM), ದಾವಣಗೆರೆ (06:38/06:40 PM), ರಾಣಿಬೆನ್ನೂರ (07:09/07:10 PM) ಮತ್ತು ಎಸ್.ಎಮ್.ಎಮ್ ಹಾವೇರಿ (07:25/07:27 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06272 ಎಸ್.ಎಸ್.ಎಸ್ ಹುಬ್ಬಳ್ಳಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಎಸ್.ಎಸ್.ಎಸ್ ಹುಬ್ಬಳ್ಳಿ ನಿಲ್ದಾಣದಿಂದ ಬೆಳಿಗಿನ ಜಾವ 01:00 ಗಂಟೆಗೆ ಹೊರಟು ಅದೇ ದಿನ ಬೆಳಿಗ್ಗೆ 08:50 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಎಸ್ಎಮ್ಎಮ್ ಹಾವೇರಿ (02:18/02:20 AM), ರಾಣಿಬೆನ್ನೂರು (02:48/02:50 AM), ದಾವಣಗೆರೆ (03:28/03:30 AM), ಅರಸೀಕೆರೆ (05:35/05:40 AM) ಮತ್ತು ತುಮಕೂರು (07:00/07:02 AM) ನಿಲ್ದಾಣಗಳಲ್ಲಿ ಆಗಮಿಸಿ/ನಿರ್ಗಮಿಸುತ್ತದೆ.
ಈ ರೈಲು (06271/06272) ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳನ್ನು ಒಳಗೊಂಡಿರುವ ಹದಿನಾಲ್ಕು ಬೋಗಿಗಳನ್ನು ಹೊಂದಿರುತ್ತದೆ.
2. ರೈಲು ಸಂಖ್ಯೆ 06505/06506 ಯಶವಂತಪುರ – ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್: –
ರೈಲು ಸಂಖ್ಯೆ 06505 ಯಶವಂತಪುರ – ಬೆಳಗಾವಿ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 21 & 22 ರಂದು ಯಶವಂತಪುರ ನಿಲ್ದಾಣದಿಂದ ರಾತ್ರಿ 11:30 ಗಂಟೆಗೆ ಹೊರಟು ಮರು ದಿನ ಬೆಳಿಗ್ಗೆ 09:25 ಕ್ಕೆ ಎಸ್ಎಸ್ಎಸ್ ಹುಬ್ಬಳ್ಳಿ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (12:15/12:17 AM), ಅರಸೀಕೆರೆ (01:27/01:32 AM), ಕಡೂರು (02:05/02:07 AM), ಚಿಕ್ಕಜಾಜೂರ (02:57/02:59 AM), ದಾವಣಗೆರೆ (03:35/03:37 AM), ರಾಣಿಬೆನ್ನೂರ (04:12/04:13 AM), ಎಸ್.ಎಮ್.ಎಮ್ ಹಾವೇರಿ (04:40/04:41 AM), ಎಸ್.ಎಸ್.ಎಸ್ ಹುಬ್ಬಳ್ಳಿ (06:15/06:25 AM), ಧಾರವಾಡ (06:50/06:52 AM), ಲೋಂಡಾ (08:07/08:08 AM) ಮತ್ತು ಖಾನಾಪುರ (08:32/08:33 AM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
ಹಿಂದಿರುಗುವ ದಿಕ್ಕಿನಲ್ಲಿ, ರೈಲು ಸಂಖ್ಯೆ 06506 ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಬೆಳಗಾವಿ ನಿಲ್ದಾಣದಿಂದ ಬೆಳಿಗ್ಗೆ 11:10 ಗಂಟೆಗೆ ಹೊರಟು ಅದೇ ದಿನ ರಾತ್ರಿ 10:00 ಕ್ಕೆ ಯಶವಂತಪುರ ನಿಲ್ದಾಣವನ್ನು ತಲುಪುತ್ತದೆ. ಈ ರೈಲು ಖಾನಾಪುರ (11:35/11:36 AM), ಲೋಂಡಾ (12:04/12:05 PM), ಧಾರವಾಡ (01:24/01:26 PM), ಎಸ್.ಎಸ್.ಎಸ್ ಹುಬ್ಬಳ್ಳಿ (03:10/03:20 PM), ಎಸ್.ಎಮ್.ಎಮ್ ಹಾವೇರಿ (04:29/04:30 PM), ರಾಣಿಬೆನ್ನೂರ (04:59/05:00 PM), ದಾವಣಗೆರೆ (05:43/05:45 PM), ಚಿಕ್ಕಜಾಜೂರ್ (06:15/06:17 PM), ಕಡೂರು (07:13/07:15 PM), ಅರಸೀಕೆರೆ (07:45/07:50 PM) ಮತ್ತು ತುಮಕೂರು (09:10/09:12 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
ಈ ರೈಲು (06505/06506) ಒಂದು 2ನೇ ಹವಾನಿಯಂತ್ರಿತ ದರ್ಜೆ, ಏಳು 3ನೇ ಹವಾನಿಯಂತ್ರಿತ ದರ್ಜೆ, ಏಳು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳೊಂದಿಗೆ ಜನರೇಟರ್ ಕಾರ್ ಒಳಗೊಂಡಿರುವ ಹದಿನೇಳು ಬೋಗಿಗಳನ್ನು ಹೊಂದಿರುತ್ತದೆ.
3. ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್ಪ್ರೆಸ್ (ಏಕೈಕ ಸೇವೆ): –
ರೈಲು ಸಂಖ್ಯೆ 06507 ಯಶವಂತಪುರ – ಶಿವಮೊಗ್ಗ ಟೌನ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 22 ರಂದು ಯಶವಂತಪುರ ನಿಲ್ದಾಣದಿಂದ ಬೆಳಿಗ್ಗೆ 10:30 ಗಂಟೆಗೆ ಹೊರಟು ಅದೇ ದಿನ ಮಧ್ಯಾಹ್ನ 03:30 ಕ್ಕೆ ಶಿವಮೊಗ್ಗ ಟೌನ್ ನಿಲ್ದಾಣ ತಲುಪಲಿದೆ. ಈ ರೈಲು ತುಮಕೂರು (11:14/11:15 AM), ಅರಸೀಕೆರೆ (12:33/12:34 PM), ಬೀರೂರು (01:23/01:25 PM) ಮತ್ತು ಭದ್ರಾವತಿ (02:18/02:20 PM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
ಈ ರೈಲು (06507) ಒಂದು 2ನೇ ಹವಾನಿಯಂತ್ರಿತ ದರ್ಜೆ, ಒಂದು 3ನೇ ಹವಾನಿಯಂತ್ರಿತ ದರ್ಜೆ, ಆರು ಸ್ಲೀಪರ್ ಕ್ಲಾಸ್, ನಾಲ್ಕು ಸಾಮಾನ್ಯ ದ್ವಿತೀಯ ದರ್ಜೆ ಮತ್ತು ಎರಡು ದ್ವಿತೀಯ ದರ್ಜೆ ಲಗೇಜ್ ಕಮ್ ಬ್ರೇಕ್-ವ್ಯಾನ್ಗಳನ್ನು ಒಳಗೊಂಡಿರುವ ಹದಿನಾಲ್ಕು ಬೋಗಿಗಳನ್ನು ಹೊಂದಿರುತ್ತದೆ.
4. ರೈಲು ಸಂಖ್ಯೆ 07305 ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ (ಏಕೈಕ ಸೇವೆ): –
ರೈಲು ಸಂಖ್ಯೆ 07305 ಬೆಳಗಾವಿ – ಯಶವಂತಪುರ ಸೂಪರ್ಫಾಸ್ಟ್ ವಿಶೇಷ ಎಕ್ಸ್ಪ್ರೆಸ್ ಅಕ್ಟೋಬರ್ 26 ರಂದು ಬೆಳಗಾವಿ ನಿಲ್ದಾಣದಿಂದ ರಾತ್ರಿ 10:00 ಗಂಟೆಗೆ ಹೊರಟು ಮರು ದಿನ ಬೆಳಿಗ್ಗೆ 08:50 ಕ್ಕೆ ಯಶವಂತಪುರ ನಿಲ್ದಾಣ ತಲುಪಲಿದೆ. ಈ ರೈಲು ಖಾನಾಪುರ (10:23/10:24 PM) ಲೋಂಡಾ (10:50/10:52 PM), ಧಾರವಾಡ (12:15/12:17 AM), ಎಸ್ ಎಸ್ ಎಸ್ ಹುಬ್ಬಳ್ಳಿ (12:45/12:55 AM), ಎಸ್.ಎಮ್.ಎಮ್ ಹಾವೇರಿ (02:18/02:20 AM), ರಾಣಿಬೆನ್ನೂರ (02:48/02:50 AM), ಹರಿಹರ (03:10/03:12 AM), ದಾವಣಗೆರೆ (03:28/03:30 AM), ಚಿಕ್ಕಜಾಜೂರ (04:08/04:10 AM), ಬೀರೂರು (04:53/04:55 AM), ಅರಸೀಕೆರೆ (05:35/05:40 AM), ತಿಪಟೂರು (06:00/06:02 AM) ಮತ್ತು ತುಮಕೂರು (07:00/07:02 AM) ನಿಲ್ದಾಣಗಳಲ್ಲಿಆಗಮಿಸಿ/ನಿರ್ಗಮಿಸುತ್ತದೆ.
ಈ ರೈಲು (07305) ಒಂದು 2ನೇ ಹವಾ ನಿಯಂತ್ರಿತ ದರ್ಜೆ, ಏಳು 3ನೇ ಹವಾನಿಯಂತ್ರಿತ ದರ್ಜೆ, ಏಳು ಸ್ಲೀಪರ್ ಕ್ಲಾಸ್ ಮತ್ತು ಎರಡು ಲಗೇಜ್ ಕಮ್ ಬ್ರೇಕ್-ವ್ಯಾನ್ ಗಳೊಂದಿಗೆ ಜನರೇಟರ್ ಕಾರ್ ಒಳಗೊಂಡಿರುವ ಹದಿನೇಳು ಬೋಗಿಗಳನ್ನು ಹೊಂದಿರುತ್ತದೆ.