ಚಿಕ್ಕಬಳ್ಳಾಪುರ : ವಸತಿ ರಹಿತರಿಗೆ ಕಂದಾಯ ಸಚಿವ ಆರ್. ಅಶೋಕ್ ಭರ್ಜರಿ ಸಿಹಿಸುದ್ದಿ ನೀಡಿದ್ದು, ಚಿಕ್ಕಬಳ್ಳಾಪುರ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಗ್ರಾಮೀಣ ಭಾಗದಲ್ಲಿ 565 ಮತ್ತು ನಗರ ಭಾಗದ 191 ಎಕರೆ ಜಾಗದಲ್ಲಿ 22 ಸಾವಿರ ಫಲಾನುಭವಿಗಳಿಗೆ ನಿವೇಶನ ವಿತರಿಸುವುದಾಗಿ ಸಚಿವ ಆರ್. ಅಶೋಕ್ ಘೊಷಿಸಿದ್ದಾರೆ.
BIGG NEWS : ಮಂಗಳೂರಿನಲ್ಲಿ ಹಿಂದೂ ಯುವತಿಯನ್ನು ಇಸ್ಲಾಂಗೆ ಮತಾಂತರ ಆರೋಪ : ಇಬ್ಬರ ವಿರುದ್ಧ ದೂರು ದಾಖಲು
ಶನಿವಾರ ಜಿಲ್ಲಾಡಳಿತದಿಂದ ಮಂಚೇನಹಳ್ಳಿ ಹೋಬಳಿಯ ಜರಬಂಡಹಳ್ಳಿಯಲ್ಲಿ ಆಯೋಜಿಸಿದ್ದ “ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ” ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಮಂಚೇನಹಳ್ಳಿ ತಾಲ್ಲೂಕಿನ ಜರಬಂಡಹಳ್ಳಿ ಗ್ರಾಮದ ಸರ್ವಾಂಗಿಣ ಅಭಿವೃದ್ಧಿಗೆ ಒಂದು ಕೋಟಿ ಅನುದಾನವನ್ನು ಈಗಾಗಲೇ ಬಿಡುಗಡೆಗೊಳಿಸಲಾಗಿದೆ. ಈ ಹಣದಲ್ಲಿ ಏನೆಲ್ಲಾ ಕಾಮಗಾರಿಗಳು ಆಗಬೇಕೋ ಆ ಎಲ್ಲಾ ಕಾರ್ಯಗಳಿಗೂ ಈ ಹಳ್ಳಿಯ ಜನರ ಮಧ್ಯೆಯೇ ಇಂದೇ ನಿರ್ಧಾರ ಕೈಗೊಂಡು ಕಾರ್ಯಗತಗೊಳಿಸಲಾಗುವುದು. ಈ ಕಾರ್ಯಕ್ರಮ ನನಗೆ ಪಾಠಶಾಲೆಯಾಗಿದ್ದು ಜನರ ಭವಣೆಗಳನ್ನು ಹತ್ತಿರದಿಂದ ಆಲಿಸಿ ಪರಿಹರಿಸಲು ನೆರವಾಗಿದ.ನೂತನವಾಗಿ ರಚನೆಯಾಗಿರುವ ಮಂಚೇನಹಳ್ಳಿ ತಾಲ್ಲೂಕು ಆಡಳಿತ ಕೇಂದ್ರವಾದ ಮಿನಿ ವಿಧಾನ ಸೌಧ ನಿರ್ಮಾಣಕ್ಕೆ 15 ಕೋಟಿ ಅನುದಾನ ನೀಡಲು ಹಾಗೂ ಚಿಕ್ಕಬಳ್ಳಾಪುರ ವಿಧಾನ ಸಭಾ ವ್ಯಾಪ್ತಿಯಲ್ಲಿ 22 ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ನಿವೇಶನಗಳನ್ನು ಸದ್ಯದಲ್ಲೆ ವಿತರಿಸಲು ಸ್ಥಳದಲ್ಲಿಯೇ ಮಂಜೂರಾತಿ ನೀಡಿರುವುದಾಗಿ ಕಂದಾಯ ಸಚಿವರು ಘೋಷಿಸಿದರು.
Job Alert : ಉದ್ಯೋಗಾಂಕ್ಷಿಗಳಿಗೆ ಗುಡ್ ನ್ಯೂಸ್ : ಗ್ರಾಮ ಕಾಯಕ ಮಿತ್ರ ಹುದ್ದೆಗಳಿಗೆ ಅರ್ಜಿ ಆಹ್ವಾನ